ಮುಟ್ಟಿನ ಸಮಯದಲ್ಲಿ ಮಹಿಳೆಯೊಂದಿಗೆ ಮಾತನಾಡಿದ್ರೆ ಪುರುಷನಿಗೆ ರೋಗ ಬರುತ್ತೆ ಎಂಬುದೂ ಸೇರಿದಂತೆ ಪಿರಿಯಡ್ಸ್ ಬಗ್ಗೆ ಇಂದಿಗೂ ನಮ್ಮ ಸಮಾಜದಲ್ಲಿ ಅನೇಕ ತಪ್ಪು ಕಲ್ಪನೆಗಳು, ನಂಬಿಕೆಗಳಿವೆ.
ಸಮಾಜ ಅದೆಷ್ಟೇ ಆಧುನಿಕ ಪಥದಲ್ಲಿ ಸಾಗುತ್ತಿದ್ದರೂ ಮಹಿಳೆ ಹಾಗೂ ಮುಟ್ಟಿನ ಕುರಿತು ಇಂದಿಗೂ ಒಂದಿಷ್ಟು ತಪ್ಪು ಕಲ್ಪನೆಗಳಂತೂ ಇದ್ದೇಇದೆ. ಇದಕ್ಕೆ ಅಭಿವೃದ್ಧಿ ಹೊಂದಿದ ರಾಷ್ಟ್ರ, ಹೊಂದದ ರಾಷ್ಟ್ರ ಎಂಬ ಭೇದವಿಲ್ಲ. ಮುಟ್ಟು ಹೆಣ್ತನದ ಸಂಕೇತ. ಮೊಗ್ಗು ಹೂವಾಗಿ ಅರಳುವಂತೆಯೇ ಇದೊಂದು ನೈಸರ್ಗಿಕ ಪ್ರಕ್ರಿಯೆಯಷ್ಟೆ.ಇದ್ರಲ್ಲಿ ಮೈಲಿಗೆ, ಅಪವಿತ್ರ ಅನ್ನುವಂತದ್ದು ಏನಿದೆ? ಭಾರತದಲ್ಲಿ ಇಂದಿಗೂ ಮುಟ್ಟಾದ ಹೆಣ್ಣು ದೇವಸ್ಥಾನಕ್ಕೆ ಹೋಗಬಾರದು, ಪೂಜೆ ಸೇರಿದಂತೆ ಶುಭ ಕಾರ್ಯದಲ್ಲಿ ಪಾಲ್ಗೊಳ್ಳಬಾರದು ಎಂಬ ಸಂಪ್ರದಾಯವಿದೆ.ಅಷ್ಟೇ ಏಕೆ, ಆ ಮೂರು ದಿನ ಆಕೆಗೆ ಮನೆಯಲ್ಲಿನ ಕೆಲವು ಸ್ಥಳಗಳಿಗೆ ಪ್ರವೇಶ ನಿಷೇಧಿಸುವ ಪದ್ಧತಿ ಇಂದಿಗೂ ಗ್ರಾಮೀಣ ಭಾಗದಲ್ಲಿದೆ.ಇವೆಲ್ಲ ನಮಗೆ, ನಿಮಗೆ ಗೊತ್ತಿರುವಂತದ್ದೇ. ಆದ್ರೆ ಮುಟ್ಟಿನ ಕುರಿತು ಇದಕ್ಕಿಂತಲೂ ಚಿತ್ರ-ವಿಚಿತ್ರವಾದ ಕೆಲವು ನಂಬಿಕೆಗಳು ಜಗತ್ತಿನಾದ್ಯಂತ ಇವೆ.
ರೆಡ್ ಲೈಟ್ ಏರಿಯಾಗಳಲ್ಲಿ ಕೊರೋನಾ ಬಾಂಬ್ ಇದೆಯಂತೆ!
undefined
-ಮುಟ್ಟಿನ ಸಮಯದಲ್ಲಿ ಲೈಂಗಿಕ ಕ್ರಿಯೆ ನಡೆಸಿದ್ರೆ ಪುರುಷ ಸಾಯುತ್ತಾನೆ.
ಇಂಥದೊಂದು ನಂಬಿಕೆ ಪೋಲ್ಯಾಂಡ್ ದೇಶದಲ್ಲಿದೆ. ಮುಟ್ಟಿನ ಸಮಯದಲ್ಲಿ ಸೆಕ್ಸ್ನಲ್ಲಿ ತೊಡಗೋದು ಮಹಿಳೆ ಹಾಗೂ ಪುರುಷ ಇಬ್ಬರಿಗೂ ಕಂಫರ್ಟ್ ಅನಿಸದಿರುವ ಸಾಧ್ಯತೆಯಿದೆ ಅಷ್ಟೆ. ಇದ್ರಿಂದ ಯಾರೂ ಸಾಯೋದಿಲ್ಲ. ಮುಟ್ಟಿನ ಸಮಯದಲ್ಲಿ ಸೆಕ್ಸ್ ನಡೆಸೋದ್ರಿಂದ ಏನೂ ಸಮಸ್ಯೆಯಿಲ್ಲ ಎನ್ನುತ್ತದೆ ವೈದ್ಯ ವಿಜ್ಞಾನ.
-ಮುಟ್ಟಿನ ಸಂದರ್ಭದಲ್ಲಿ ಡ್ಯಾನ್ಸ್ ಮಾಡಿದ್ರೆ ಗರ್ಭಕೋಶಕ್ಕೆ ಹಾನಿಯಾಗುತ್ತೆ.
ಮುಟ್ಟಿನ ಸಮಯದಲ್ಲಿ ವ್ಯಾಯಾಮ, ಡ್ಯಾನ್ಸ್ ಮಾಡೋದ್ರಿಂದ ಗರ್ಭಕೋಶಕ್ಕೆ ಹಾನಿಯಾಗುತ್ತೆ ಅಥವಾ ಬಂಜೆತನಕ್ಕೆ ಕಾರಣವಾಗುತ್ತೆ ಎಂಬ ನಂಬಿಕೆ ಮೆಕ್ಸಿಕೋ ಜನರಲ್ಲಿದೆ. ಆದ್ರೆ ಇದು ತಪ್ಪು ಕಲ್ಪನೆಯಷ್ಟೆ. ಮುಟ್ಟಿನ ಸಮಯದಲ್ಲಿ ಡ್ಯಾನ್ಸ್ ಅಥವಾ ವ್ಯಾಯಾಮ ಮಾಡೋದ್ರಿಂದ ಗರ್ಭಕೋಶಕ್ಕೆ ಯಾವುದೇ ಹಾನಿಯಾಗೋದಿಲ್ಲ. ಅಲ್ಲದೆ, ಕೆಲವರಿಗೆ ಮುಟ್ಟಿನ ಸಮಯದಲ್ಲಿ ಕಾಣಿಸಿಕೊಳ್ಳುವ ಹೊಟ್ಟೆನೋವು ವ್ಯಾಯಾಮ ಮಾಡೋದ್ರಿಂದ ಕಡಿಮೆಯಾಗುತ್ತೆ. ಮುಟ್ಟಿನ ಸಮಯದಲ್ಲಿ ಮೂಡ್ ಸ್ವಿಂಗ್ ಹಾಗೂ ಆಯಾಸ ಆಗೋದು ಕಾಮನ್. ವ್ಯಾಯಾಮ ಅಥವಾ ಡ್ಯಾನ್ಸ್ ಮಾಡೋದ್ರಿಂದ ಮೂಡ್ ಸ್ವಿಂಗ್ ಹಾಗೂ ಆಯಾಸ ತಗ್ಗುತ್ತದೆ.
ಹಿಂದಿನವರೆಲ್ಲರಿಗಿಂತ ಹೆಚ್ಚು ಕೆಲಸ ಮಾಡೋ ಆಧುನಿಕ ಮಹಿಳೆ!
-ಪಿರಿಯಡ್ಸ್ ಸಮಯದಲ್ಲಿ ಈಜು ಅಥವಾ ಸ್ನಾನ ಮಾಡೋದು ಸುರಕ್ಷಿತವಲ್ಲ.
ಇಂಥದೊಂದು ನಂಬಿಕೆ ಭಾರತ, ಇಟಲಿ ಹಾಗೂ ಅರ್ಜೆಂಟೈನಾದಲ್ಲಿದೆ. ಮುಟ್ಟಾದ ಸಮಯದಲ್ಲಿ ದೇಹವನ್ನು ಸ್ವಚ್ಛವಾಗಿಟ್ಟುಕೊಳ್ಳೋದು ಅಗತ್ಯ. ಹಾಗಾಗಿ ಈ ಸಮಯದಲ್ಲಿ ಸ್ನಾನ ಮಾಡೋದು ಆರೋಗ್ಯಕರ ಅಭ್ಯಾಸ. ಪಿರಿಯಡ್ಸ್ ಸಮಯದಲ್ಲಿ ಸ್ವಿಮ್ಮಿಂಗ್ ಫೂಲ್‍ನಲ್ಲಿ ಈಜೋದ್ರಿಂದ ನೀರು ಹಾಳಾಗಬಹುದು ಎಂಬ ಕಾಳಜಿಯಿಂದ ಈ ಸಮಯದಲ್ಲಿ ಈಜಿನ ಮೇಲೆ ನಿಷಿದ್ಧ ಹೇರಿರಬಹುದು. ಆದ್ರೆ ಇಂದು ಮೆನೆಸ್ಟ್ರುವಲ್ ಕಪ್, ಟ್ಯಾಂಪೂನ್ಸ್ ಸೇರಿದಂತೆ ಅತ್ಯಾಧುನಿಕ ಸ್ಯಾನಿಟರಿ ವ್ಯವಸ್ಥೆಗಳಿರುವ ಕಾರಣ ಪಿರಿಯಡ್ಸ್ ಸಮಯದಲ್ಲಿ ಮಹಿಳೆ ಅಪೇಕ್ಷಿಸಿದರೆ ಆರಾಮವಾಗಿ ಈಜಾಡಬಹುದು.
-ಮುಟ್ಟಾದ ವಾರವಿಡೀ ಸ್ನಾನ ಮಾಡುವಂತಿಲ್ಲ, ಮಾಡಿದ್ರೆ ಆಕೆ ಬಂಜೆಯಾಗುತ್ತಾಳೆ.
ಇಂಥದೊಂದು ನಂಬಿಕೆ ಅಫ್ಘಾನಿಸ್ತಾನದಲ್ಲಿದೆ. ಮುಟ್ಟಾದ ವಾರವಿಡೀ ಮಹಿಳೆ ಕೂದಲು ತೊಳೆಯುವಂತಿಲ್ಲ, ಸ್ನಾನ ಮಾಡುವಂತಿಲ್ಲ. ಒಂದು ವೇಳೆ ಮಾಡಿದ್ರೆ ಆಕೆ ಬಂಜೆಯಾಗುತ್ತಾಳಂತೆ. ಇಂಥ ನಂಬಿಕೆಯಿಂದ ಆರೋಗ್ಯಕ್ಕೆ ಹಾನಿಯಾಗೋದಂತೂ ಪಕ್ಕಾ. ಮುಟ್ಟಿನ ಸಮಯದಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡದಿದ್ರೆ ಸೋಂಕು ತಗಲುವ ಸಾಧ್ಯತೆಯಿದೆ. ಅಫ್ಘಾನಿಸ್ತಾನದ ಬಹುತೇಕ ಭಾಗಗಳಲ್ಲಿ ಮಹಿಳೆಯರು ಇಂದಿಗೂ ಬಟ್ಟೆಯನ್ನೇ ಸ್ಯಾನಿಟರಿ ನ್ಯಾಪ್‍ಕಿನ್ ಆಗಿ ಬಳಸುತ್ತಿದ್ದಾರೆ. ಇದಕ್ಕೆ ಕಾರಣ ಬಟ್ಟೆ ನ್ಯಾಪ್‍ಕಿನ್ ವೆಚ್ಚ ಕಡಿಮೆ ಹಾಗೂ ಮರುಬಳಕೆ ಸಾಧ್ಯವಾಗಿರೋದು. ಆದ್ರೆ ಈ ಬಟ್ಟೆಯನ್ನು ವಾಷ್ ಮಾಡಿದ ಬಳಿಕ ಇತರ ಬಟ್ಟೆಗಳೊಂದಿಗೆ ಹೊರಗೆ ಒಣಹಾಕಲು ಮಹಿಳೆಯರು ನಾಚಿಕೆಪಡುವ ಕಾರಣ ದೀರ್ಘಕಾಲ ಇದನ್ನು ಬಳಕೆ ಮಾಡುವ ಜೊತೆಗೆ ಸಮರ್ಪಕವಾಗಿ ಒಣ ಹಾಕದ ಕಾರಣ ಸೋಂಕು ಉಂಟಾಗಿ ಸಂತಾನೋತ್ಪತಿ ಮೇಲೆ ಪರಿಣಾಮ ಬೀರುವ ಅಪಾಯವಿದೆ.
ರಾಜ್ಯದಲ್ಲಿ ಕೊರೋನಾ ಜಾಗೃತಿಯ ಧ್ವನಿ ದಕ್ಷಿಣಕನ್ನಡದ ಹೆಣ್ಮಕ್ಕಳದ್ದು!
-ಸ್ಯಾನಿಟರಿ ಪ್ಯಾಡ್ ಅನ್ನು ಇತರ ತ್ಯಾಜ್ಯದೊಂದಿಗೆ ಎಸೆದ್ರೆ ಕ್ಯಾನ್ಸರ್ ಬರುತ್ತೆ.
ಬೊಲಿವಿಯಾದಲ್ಲೊಂದು ಪುರಾತನ ನಂಬಿಕೆಯಿದೆ. ಅದೇನೆಂದ್ರೆ ಹೆಣ್ಣುಮಕ್ಕಳು ತಾವು ಬಳಸಿದ ಸ್ಯಾನಿಟರಿ ಪ್ಯಾಡ್ ಅನ್ನು ಇತರ ತ್ಯಾಜ್ಯಗಳೊಂದಿಗೆ ಎಸೆದ್ರೆ ಅವರಿಗೆ ಕ್ಯಾನ್ಸರ್ ಅಥವಾ ಇನ್ಯಾವುದೋ ರೋಗ ಬರುತ್ತದೆ ಎಂಬುದು. ಈ ನಂಬಿಕೆಯ ಕಾರಣಕ್ಕೆ ಶಾಲಾ, ಕಾಲೇಜುಗಳಿಗೆ ತೆರಳುವ ಬಾಲಕಿಯರು ಬಳಸಿದ ಪ್ಯಾಡ್ ಅನ್ನು ಎಸೆಯದೆ ಹಾಗೆಯೇ ಬ್ಯಾಗ್‍ನಲ್ಲಿಟ್ಟುಕೊಂಡು ಮನೆಗೆ ವಾಪಾಸ್ ಆಗುತ್ತಾರೆ ಎನ್ನುವುದು ಯುನಿಸೆಫ್ ನಡೆಸಿದ ಅಧ್ಯಯನದಲ್ಲಿ ಪತ್ತೆಯಾಗಿದೆ.
- ಮುಟ್ಟಿನ ಸಮಯದಲ್ಲಿ ಮಹಿಳೆಯೊಂದಿಗೆ ಮಾತನಾಡೋದು ಅಥವಾ ಮುಟ್ಟೋದ್ರಿಂದ ಪುರುಷನಿಗೆ ಕಾಯಿಲೆ ಬರುತ್ತೆ.
ಇಂಥದೊಂದು ನಂಬಿಕೆ ಭಾರತ ಹಾಗೂ ನೇಪಾಳದ ಕೆಲವು ಭಾಗಗಳಲ್ಲಿದೆ. ಸಮೀಕ್ಷೆಯೊಂದರ ಪ್ರಕಾರ ಭಾರತದ ಗ್ರಾಮೀಣ ಪ್ರದೇಶದಲ್ಲಿ ಶೇ.20ರಷ್ಟು ಹುಡುಗಿಯರು ಮುಟ್ಟಿನ ಸಮಯದಲ್ಲಿ ಕುಟುಂಬದ ಪುರುಷ ಸದಸ್ಯರೊಂದಿಗೆ ಮಾತನಾಡೋದಿಲ್ಲ. ಭಾರತದಲ್ಲಿ ಶೇ.40ರಷ್ಟು ಹುಡುಗಿಯರು ತಮ್ಮ ತಾಯಿಯಿಂದ ಮುಟ್ಟಿನ ಬಗ್ಗೆ ಮಾಹಿತಿ ಪಡೆಯುತ್ತಾರೆ. ಹೀಗಾಗಿ ಹಿಂದಿನ ಅವೈಜ್ಞಾನಿಕ ನಂಬಿಕೆಗಳನ್ನು ಅವರು ಮುಂದುವರಿಸುತ್ತಿದ್ದಾರೆ. ಹೀಗಾಗಿ ಯುವತಿಯರಿಗೆ ಈ ಸಂಬಂಧ ಮನೆಯ ಹೊರಗೂ ಶಿಕ್ಷಣ ಸಿಗುವಂತಾದ್ರೆ ಮಾತ್ರ ಇಂಥ ಅಸಂಬದ್ಧ ಪದ್ಧತಿಗಳು ದೂರವಾಗಲು ಸಾಧ್ಯ.