Nurse Kathija Bibi: 10 ಸಾವಿರ ಹೆರಿಗೆ, ಒಂದೂ ಸಾವಿಲ್ಲ… ಈ ದಾದಿಗೊಂದು ಸಲಾಂ!

By Suvarna News  |  First Published Jul 2, 2023, 11:20 AM IST

ದಾದಿ ಕೆಲಸ ಸುಲಭವಾದದ್ದಲ್ಲ. ಏನೇ ಹೆಚ್ಚುಕಮ್ಮಿ ಆದ್ರೂ ರೋಗಿ ವೈದ್ಯರ ಜೊತೆ ದಾದಿಯರನ್ನೂ ದೂರ್ತಾನೆ. ಅದ್ರಲ್ಲೂ ಹೆರಿಗೆ ವಾರ್ಡ್ ಸಂಭಾಳಿಸೋಕೆ ಎರಡು ಪಟ್ಟು ಶಕ್ತಿ, ಶಾಂತಿ, ಮಮತೆ ಅವಶ್ಯಕ. ಇದೆಲ್ಲವನ್ನೂ ಹೊಂದಿದ್ದ ಈ ನರ್ಸ್, ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ.
 


ಭಾರತದಲ್ಲಿ ವೈದ್ಯರಷ್ಟೇ ಮಹತ್ವ ದಾದಿಯರು ಮತ್ತು ಶುಶ್ರೂಷಕಿಯರಿಗಿದೆ. ವೈದ್ಯರಿರಲಿ ಬಿಡಲಿ, ಇವರು ಆಸ್ಪತ್ರೆಯಲ್ಲಿ ತಮ್ಮ ಜವಾಬ್ದಾರಿಯನ್ನು ಶ್ರದ್ಧೆಯಿಂದ ನಿಭಾಯಿಸುತ್ತಾರೆ. ನಮ್ಮಲ್ಲಿ ಸೀಮಿತ ಸಂಪನ್ಮೂಲಗಳಿರುವ ಕಾರಣ ಅವರ ಮುಂದೆ ಸಾಕಷ್ಟು ಸವಾಲುಗಳೂ ಇರುತ್ತವೆ. ಆಸ್ಪತ್ರೆಗೆ ಬರುವ ಪ್ರತಿಯೊಬ್ಬ ರೋಗಿಯನ್ನು ತಾಯಿಯಂತೆ ಸಲಹುವವರು ಅವರು. ತಮಗೆ ಎಷ್ಟೇ ಕಷ್ಟವಿದ್ರೂ ರೋಗಿಗಳ ಮುಂದೆ ನಗ್ತಾ, ಅವರ ನೋವನ್ನು ಆಲಿಸುವವರು ಅವರು. ಸಣ್ಣ ವಿಷ್ಯದಿಂದ ಹಿಡಿದು ದೊಡ್ಡ ರೋಗದ ಅಲ್ಪಸ್ವಲ್ಪ ಮಾಹಿತಿಯಾದ್ರೂ ಅವರಿಗೆ ತಿಳಿದಿರಬೇಕು. 

ನಮ್ಮಲ್ಲಿ ಅನೇಕ ದಾದಿಯರು ವಿಶೇಷತೆಯನ್ನು ಹೊಂದಿದ್ದಾರೆ. ನಾವಿಂದು 33 ವರ್ಷಗಳ ಸುದೀರ್ಘ ವೃತ್ತಿ (career) ಜೀವನದಲ್ಲಿ 10,000 ಕ್ಕೂ ಹೆಚ್ಚು ಯಶಸ್ವಿ ಹೆರಿಗೆಗಳನ್ನು ಮಾಡಿಸಿದ ನರ್ಸ್ (Nurse) ಒಬ್ಬರ ಬಗ್ಗೆ ನಿಮಗೆ ಹೇಳ್ತೇವೆ. 

Tap to resize

Latest Videos

ವೃತ್ತಿಯಲ್ಲಿ ಚಾರ್ಟೆಡ್ ಅಕೌಂಟೆಂಟ್ ಆಗಿದ್ದ ಮಹಿಳೆ ಇಂದು 9024 ಕೋಟಿ ರೂ. ಬೆಲೆ ಬಾಳುವ ಸ್ಟಾರ್ಟ್ಅಪ್ ಒಡತಿ

ವೃತ್ತಿ ಜೀವನದಲ್ಲಿ 10,000 ಹೆರಿಗೆ ಮಾಡಿಸಿದ ನರ್ಸ್ ಯಾರು? : ಇವರು ತಮಿಳುನಾಡಿ (Tamil Nadu) ನವರು. ಹೆಸರು ಖತೀಜಾ ಬೀಬಿ. ಈಗ ನಿವೃತ್ತಿ ಪಡೆದಿರುವ ಖತೀನಾ ಬೀಬಿಯವರನ್ನು ಸರ್ಕಾರ ಗೌರವಿಸಿದೆ.  

10 ಸಾವಿರ ಹೆರಿಗೆಯಲ್ಲೂ ಇದೆ ವಿಶೇಷತೆ : ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ಖತೀಜಾ ಬೀಬಿ ತಮ್ಮ ವೃತ್ತಿ ಜೀವನದ ಬಗ್ಗೆ ಮಾಹಿತಿ ನೀಡಿದ್ದಾರೆ. ಈಗ ಖತೀಜಾ ಬೀಬಿಗೆ 60 ವರ್ಷ.  ಖತೀಜಾ ಬೀಬಿ ಈವರೆಗೆ ಮಾಡಿಸಿದ 10 ಸಾವಿರ ಹೆರಿಗೆಯಲ್ಲಿ ಒಂದೇ ಒಂದು ಮಗು ಸಾವನ್ನಪ್ಪಿಲ್ಲವಂತೆ. ನನ್ನ ಕಣ್ಗಾವಲಿನಲ್ಲಿ ಈ ಜಗತ್ತಿಗೆ ಬಂದ 10 ಸಾವಿರ ಶಿಶುಗಳಲ್ಲಿ ಒಂದು ಮಗುವೂ ಸಾವನ್ನಪ್ಪಲಿಲ್ಲ. ಅದು ನನಗೆ ಹೆಮ್ಮೆ ಎನ್ನುತ್ತಾರೆ ಖತೀಜಾ ಬೀಬಿ. ಖತೀಜಾ ಇದನ್ನು ತಮ್ಮ ವೃತ್ತಿಜೀವನದ ಪ್ರಮುಖ ಅಂಶವೆಂದು ಪರಿಗಣಿಸುತ್ತಾರೆ.   

ಸರ್ಕಾರದಿಂದ ಸಿಕ್ಕಿದೆ ಗೌರವ : ಖತೀಜಾ ಬೀಬಿ ಮಾಡಿರುವ ಕೆಲಸ ಕೇಳಲು ಸಾಮಾನ್ಯವೆನ್ನಿಸಿದ್ರೂ ಮಾಡೋದು ಸುಲಭವಲ್ಲ. ಹೆರಿಗೆ ವೇಳೆ ತಾಯಿ ಹಾಗೂ ಶಿಶುಗಳನ್ನು ಬಹಳ ಎಚ್ಚರಿಕೆಯಿಂದ ನೋಡಿಕೊಳ್ಳಬೇಕಾಗುತ್ತದೆ. ಖತೀಜಾ ಬೀಬಿ ಕೆಲಸವನ್ನು ಮೆಚ್ಚಿದ ರಾಜ್ಯ ಆರೋಗ್ಯ ಸಚಿವಾಲಯ ಅವರನ್ನು ಸನ್ಮಾನಿಸಿದೆ. ಅವರ ಸೇವೆಯಲ್ಲಿ ಯಾವುದೇ ಶಿಶುವಿನ ಸಾವಾಗದ ಕಾರಣ ಇತ್ತೀಚೆಗಷ್ಟೆ ಅವರಿಗೆ ಸರ್ಕಾರಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.  

ಮಕ್ಕಳಿಗೆ ಓದಿಸೋ ಕೆಲ್ಸ ಬಿಟ್ಟು, ಮತ್ಸ್ಯಕನ್ಯೆಯಾದ ಟೀಚರ್!

ಬದಲಾಗಿದೆ ಜನರ ಆಲೋಚನೆ :  ತಮಿಳುನಾಡಿನ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ಖತೀಜಾ ಬೀಬಿ ಕೆಲಸ ಮಾಡಿದ್ದಾರೆ. ಹೆರಿಗೆ ಸಮಯದಲ್ಲಿ ತಾಯಂದಿರ ಸಾವು ಹೆಚ್ಚಿದ ಭಾರತದಲ್ಲಿ ಈಗ ಬದಲಾವಣೆ ಕಂಡು ಬರ್ತಿದೆ ಎನ್ನುತ್ತಾರೆ ಖತೀಜಾ. ಅಲ್ಲದೆ, ಹೆಣ್ಣು ಭ್ರೂಣ ಹತ್ಯೆ ಹಾಗೂ ಕನಿಷ್ಠ ಹೆಣ್ಣು ಮಗು ಜನನ ಬಗ್ಗೆ ಜನರಲ್ಲಿ ಸಕಾರಾತ್ಮಕ ಬದಲಾವಣೆಯಾಗಿದೆ ಎಂದು  ಖತೀಜಾ ಬೀಬಿ ಹೇಳ್ತಾರೆ.  

ವೃತ್ತಿ ಜೀವನದ ಆರಂಭದಲ್ಲಿ ಗರ್ಭಧರಿಸಿದ ಖತೀಜಾ : 1990 ರಲ್ಲಿ ನರ್ಸ್ ಆಗಿ ಖತೀಜಾ ಕೆಲಸ ಪ್ರಾರಂಭಿಸಿದ್ದರು. ವಿಶೇಷವೆಂದ್ರೆ ಈ ಸಮಯದಲ್ಲಿ ಖತೀಜಾ ಗರ್ಭಿಣಿಯಾಗಿದ್ದರು. ಆ ದಿನಗಳನ್ನು ಸಂದರ್ಶನದಲ್ಲಿ ಖತೀಜಾ ಮೆಲುಕು ಹಾಕಿದ್ದಾರೆ. ಕೆಲಸಕ್ಕೆ ಸೇರಿದ ಸಮಯದಲ್ಲಿ ನಾನು ಏಳು ತಿಂಗಳ ಗರ್ಭಿಣಿಯಾಗಿದ್ದೆ. ಆದ್ರೂ ಇತರ ಮಹಿಳೆಯರಿಗೆ ಸಹಾಯ ಮಾಡುತ್ತಿದ್ದೆ. ಎರಡು ತಿಂಗಳ  ಹೆರಿಗೆ ರಜೆಯ ನಂತರ ಕೆಲಸಕ್ಕೆ ಮರಳಿದ್ದೆ ಎನ್ನುತ್ತಾರೆ ಖತೀಜಾ.  ಪ್ರತಿಯೊಬ್ಬ ಮಹಿಳೆಗೆ ಹೆರಿಗೆ ಖುಷಿ ಹಾಗೂ ಭಯ ಎರಡನ್ನೂ ನೀಡುತ್ತದೆ. ಆ ಸಮಯದಲ್ಲಿ ಅವರು ಎಷ್ಟು ಆತಂಕಕ್ಕೆ ಒಳಗಾಗ್ತಿದ್ದಾರೆ ಎಂಬುದು ನನಗೆ ತಿಳಿದಿದೆ. ಅವರ ಆತ್ಮವಿಶ್ವಾಸ ಹೆಚ್ಚಿಸಿ, ಅವರಿಗೆ ಧೈರ್ಯ ನೀಡುವುದು ನನ್ನ ಆಧ್ಯತೆ ಎನ್ನುತ್ತಾರೆ ಖತೀಜಾ. ಇಷ್ಟು ಆರೋಗ್ಯಕರ ಹೆರಿಗೆಗೆ ಕಾರಣರಾದ ಖತೀಜಾರಿಗೆ ಹ್ಯಾಂಡ್ಸ್ ಅಪ್ ಹೇಳಲೇಬೇಕು. 

click me!