ಮಹಿಳೆಯರಿಗೆ ಮುಟ್ಟಿನ ರಜೆ ಬೇಕಾ, ಬೇಡವಾ? ಹೀಗೊಂದು ವಿಚಾರ ಮಂಥನ

By Suvarna NewsFirst Published Aug 19, 2020, 7:33 PM IST
Highlights

ಆನ್‌ಲೈನ್ ಫುಡ್ ಸಪ್ಲೈ ಕಂಪನಿ ಜೊಮ್ಯಾಟೋ ತನ್ನ ಸಿಬ್ಬಂದಿ ಮಹಿಳೆಯರಿಗೆ, ವರ್ಷದಲ್ಲಿ ಹತ್ತು ಮುಟ್ಟಿನ ರಜೆ ತೆಗೆದುಕೊಳ್ಳಲು ಅವಕಾಶ ಮಾಡಿಕೊಟ್ಟಿದೆ. ಇದು ಸಂಬಳಸಹಿತ ರಜೆ. ಇದಾದ ಮೇಲೆ, ಮಹಿಳೆಯರಿಗೆ ಪೀರಿಯೆಡ್ ಲೀವ್ ಕೊಡಬೇಕಾ ಬೇಡ್ವಾ ಎಂಬ ಬಗ್ಗೆ ತುಂಬ ಚರ್ಚೆಯೇ ಬಹಳಷ್ಟು ಕಡೆ ನಡೀತಿದೆ.

ಆನ್‌ಲೈನ್ ಫುಡ್ ಸಪ್ಲೈ ಕಂಪನಿ ಜೊಮ್ಯಾಟೋ ತನ್ನ ಸಿಬ್ಬಂದಿ ಮಹಿಳೆಯರಿಗೆ, ವರ್ಷದಲ್ಲಿ ಹತ್ತು ಮುಟ್ಟಿನ ರಜೆ ತೆಗೆದುಕೊಳ್ಳಲು ಅವಕಾಶ ಮಾಡಿಕೊಟ್ಟಿದೆ. ಇದು ಸಂಬಳ ಸಹಿತ ರಜೆ. ಇದಾದ ಮೇಲೆ, ಮಹಿಳೆಯರಿಗೆ ಪೀರಿಯೆಡ್ ಲೀವ್ ಕೊಡಬೇಕಾ ಬೇಡ್ವಾ ಎಂಬ ಬಗ್ಗೆ ತುಂಬ ಚರ್ಚೆಯೇ ಬಹಳಷ್ಟು ಕಡೆ ನಡೀತಿದೆ.

ಜೊಮ್ಯಾಟೋದ ನಿರ್ಧಾರವನ್ನು ಬಹಳಷ್ಟು ಮಹಿಳೆಯರು ಸ್ವಾಗತಿಸಿದ್ದಾರೆ. ಪೀರಿಯೆಡ್ಸ್ ಸಂದರ್ಭದಲ್ಲಿ ಹೆಚ್ಚಿನ ಮಹಿಳೆಯರು ತುಂಬಾ ಹೊಟ್ಟೆನೋವು ಅನುಭವಿಸುತ್ತಾರೆ. ಆಫೀಸಿನಲ್ಲಿ ಸರಿಯಾಗಿ ಕೆಲಸದ ಮೇಲೆ ಗಮನ ಕೊಡಲಾಗೊಲ್ಲ. ಅಂಥ ಸಂದರ್ಭದಲ್ಲಿ ಆಕೆಗೆ ರೆಸ್ಟ್ ಅಗತ್ಯ. ಹೀಗಾಗಿ ರಜೆ ಸ್ಬಾಗತಾರ್ಹ ಅಂತ ಹೆಚ್ಚಿನವರು ಹೇಳಿದ್ದಾರೆ.

ಮುಟ್ಟಿನ ರಜೆ ನೀಡಿದ ಜೊಮ್ಯಾಟೋ

ಇದೇ ಸಂದರ್ಭದಲ್ಲಿ ತಮಿಳುನಾಡಿನಲ್ಲಿ ಇನ್ನೊಂದು ಘಟನೆ ನಡೆದಿದೆ. ಕಿರುಬಾ ಮುನುಸ್ವಾಮಿ ಎಂಬಾಕೆ, ಈಕೆ ಜೂನಿಯರ್ ಲಾಯರ್, ಮುಟ್ಟಿನ ನೋವಿನಿಂದ ರಜೆ ತೆಗೆದುಕೊಂಡಳೆಂದು ಸಿಡಿಮಿಡಿಗೊಂಡ ಆಕೆಯ ಬಾಸ್, ಆಕೆಯನ್ನು ಕೆಲಸದಿಂದ ಹೊರಗೆ ಹಾಕಿದ್ದಾನೆ. ಇದಕ್ಕಾಗಿಯೇ ನಾವು ಲೇಡಿಸನ್ನು ತೆಗೆದುಕೊಳ್ಳಲ್ಲ ಅನ್ನುವ ಭರ್ತ್ಸನೆ ಬೇರೆ. ಮಹಿಳೆಯರ ಹಕ್ಕುಗಳ ಬಗ್ಗೆ ಅರಿವು ಮೂಡಿಸಬೇಕಾದ, ಹೋರಾಟ ಮಾಡಬೇಕಾದ ವಕೀಲರ ಕಚೇರಿಯಲ್ಲೇ ಹೀಗಾದರೆ, ಇನ್ನುಳಿದ ಕಂಪನಿಗಳಲ್ಲಿ ಏನು ಗತಿ? ಈ ವಿಚಾರವನ್ನು ಕಿರುಬಾ ತಮ್ಮ ಸೋಶಿಯಲ್ ಸೈಟ್‌ಗಳಲ್ಲಿ ಹಾಕಿಕೊಂಡು ನ್ಯಾಯ ಕೇಳುತ್ತಿದ್ದಾರೆ.



ಮಹಿಳೆಯರಿಗೆ ಈ ಸಮಯದಲ್ಲಿ ಹಕ್ಕಿನ ರಜೆ, ಸಂಬಳಸಹಿತ ರಜೆ ನೀಡಬೇಕಾದ ಅಗತ್ಯವನ್ನು ಈ ಘಟನೆ ಸಾರಿ ಹೇಳುತ್ತದೆ. ಹೆಚ್ಚಿನ ಎಲ್ಲ ಆಫೀಸ್‌ಗಳಲ್ಲೂ ಇಂಥ ಪರಿಸ್ಥಿತಿಯೇ ಇದೆ.  ತಮ್ಮ ಸಹೋದ್ಯೋಗಿಗಳ ಪೀರಿಯೆಡ್ ಸಂದರ್ಭದ ತುಮುಲಗಳನ್ನು ಅರ್ಥ ಮಾಡಿಕೊಳ್ಳುವವರು ಕಡಿಮೆ. ಮುಟ್ಟಿನ ವೇಳೆಯಲ್ಲಿ ಕೆಲವರಿಗೆ ಹೊಟ್ಟೆನೋವಿನ ಜೊತೆಗೆ ತಡೆಯಲಾಗದಷ್ಟು ತಲೆನೋವು, ವಾಕರಿಕೆ, ಮನಸ್ಸಿನಲ್ಲಿ ಹೇಳತೀರದ ಕಿರಿಕಿರಿ, ವ್ಯಗ್ರತೆ ಇವೆಲ್ಲ ಇರುತ್ತದೆ. ಇವೆಲ್ಲ ಹಾರ್ಮೋನ್‌ಗಳ ಪ್ರಭಾವ. ಗಂಡು ಸಹೋದ್ಯೋಗಿಗಳು ಮಾತ್ರವಲ್ಲ, ಹೆಣ್ಣು ಸಹೋದ್ಯೋಗಿಗಳೂ ಇದರ ಬಗ್ಗೆ ಸೆನ್ಸಿಬಲ್ ಆಗಿರುವ ಸಾಧ್ಯತೆ ಕಡಿಮೆ.

ಮಗನಿಗೆ ಏಕೆ ಗೊತ್ತಾಗಬೇಕು ಮುಟ್ಟಿನ ಗುಟ್ಟು

ಜೊಮ್ಯಾಟೋ ರಜೆ ಅನೌನ್ಸ್ ಮಾಡಿದ ಸಂದರ್ಭದಲ್ಲೇ ಹಿರಿಯ ಪತ್ರಕರ್ತೆ ಬರ್ಖಾ ದತ್, ಅದಕ್ಕೆ ಪ್ರತಿಕ್ರಿಯೆಯಾಗಿ ಒಂದು ಟ್ವೀಟ್ ಮಾಡಿದರು. ಅದರಲ್ಲಿ ಹೀಗೆ ಬರೆದಿತ್ತು- ಸಾರಿ ಜೊಮ್ಯಾಟೊ, ಪಿರಿಯಡ್ಸ್ ಲೀವ್ ಕೊಡೋ ವಿಷ್ಯ ತಿಳೀತು.‌ಆದ್ರೆ ಇದೇ ಮಹಿಳೆಯರನ್ನು ಪ್ರತ್ಯೇಕಿಸಲು, ಜೈವಿಕ ಭೇದ ಆಚರಿಸಲು ಕಾರಣವಾಗುತ್ತೆ. ಇದ್ರಿಂದಾಗಿ ನಾವು ಸೈನ್ಯಕ್ಕೆ ಸೇರೋ ಹಾಗಿಲ್ಲ, ಯುದ್ಧ ವರದಿ ಮಾಡೋ ಹಾಗಿಲ್ಲ, ಬಾಹ್ಯಾಕಾಶಕ್ಕೆ ಹೋಗೋ ಹಾಗಿಲ್ಲ. ಬರ್ಖಾ ಅವರ ಮಾತನ್ನು ಅನೇಕ ಮಂದಿ ಟೀಕಿಸಿದ್ದಾರೆ. ಇಂಥ ಭಾವನೆಯೇ ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರನ್ನು ಎರಡನೇ ದರ್ಜೆಯ ಪ್ರಜೆಯಾಗಿ ಕಾಣುವಂತೆ ಮಾಡಿದೆ. ಪೀರಿಯೆಡ್ ರಜೆಯನ್ನು ಸ್ತ್ರೀಯರು ಪುರುಷರ ಭಿಕ್ಷೆಯಾಗಿ ಅಲ್ಲ, ಬದಲು ತಮ್ಮ ಹಕ್ಕು ಎಂಬಂತೆ ಪರಿಗಣಿಸಬೇಕು. ಮೂರು ದಿನದ ರಜೆಯನ್ನು ತೆಗೆದುಕೊಂಡು ಕೂಡಾ ಮಹಿಳೆಯರು ಸೈನ್ಯದಲ್ಲಿ, ಯುದ್ಧ ವರದಿಗಾರಿಕೆಯಲ್ಲಿ ಕೆಲಸ ಮಾಡಬಹುದಲ್ವೇ ಎಂದು ಬರ್ಖಾರನ್ನು ಪ್ರಶ್ನಿಸಿದ್ದಾರೆ.

 

My strong views on have triggered a Twitter Storm. Im glad. But we encourage a diversity of views. If you would like to counter me with an alternative argument, via video ( under 1 minute) or text, send us your submissions: speak@wethewomen.asia

— barkha dutt (@BDUTT)

 

ಅಷ್ಟಕ್ಕೂ ಪಿರಿಯಡ್ಸ್ ಮಿಸ್ ಆಗೋದು ಏಕೆ?

ಈ ಮಧ್ಯೆ ಇನ್ನೊಂದು ಮಧ್ಯಮ ಮಾರ್ಗವೂ ಇದೆ. ಮುಟ್ಟಿನ ರಜೆಯನ್ನು ಐಚ್ಛಿಕ ಆಗಿಸುವುದು. ತೀರಾ ಸಮಸ್ಯೆಗಳಿದ್ದವರು ಅದರ ಪ್ರಯೋಜನ ಪಡೆಯಬಹುದು. ಇಲ್ಲವಾದವರು ಅದನ್ನು ಇತರ ಕಡೆ ಬಳಸಿಕೊಳ್ಳಬಹುದು ಎಂಬುದು.ಅನೇಕ ಮುಂದುವರಿದ ದೇಶಗಳಲ್ಲಿ ಮುಟ್ಟಿನ ರಜೆ ಕಾಮನ್. ಅದನ್ನು ಬಳಸುವುದರಲ್ಲಿಯೂ ಹಿಂಜರಿಕೆ ಇಲ್ಲ. ಭಾರತದಲ್ಲಿ ಮಾತ್ರ ಮುಟ್ಟು ಅಥವಾ ಪೀರಿಯೆಡ್ ಎಂಬ ಪದವನ್ನು ಸಾರ್ವಜನಿಕವಾಗಿ ಮಾತಾಡಲೂ ಹಿಂಜರಿಯುತ್ತೇವೆ. ತೀರಾ ನೋವಿದ್ದವರು ಪೇನ್ ಕಿಲ್ಲರ್ ತೆಗೆದುಕೊಂಡು ಕೆಲಸ ಮುಂದುವರಿಸುತ್ತಾರೆ. ಹೀಗೆ ಪೇನ್ ಕಿಲ್ಲರ್ ಸತತ ಬಳಸುವುದೂ ಹಾನಿಕರ.

ಮುಟ್ಟಾದಾಗ ತೂಕ ಹೆಚ್ಚಾಗುತ್ತಾ?

ಭಾರತದಲ್ಲಿಯೂ ಮುಟ್ಟಿನ ರಜೆ ಹೊಸತಲ್ಲ. ಒಂದೆರಡು ಕಂಪನಿಗಳಲ್ಲಿ ಇದು ಈಗಾಗಲೇ ಇದೆ. ಬಿಹಾರ ರಾಜ್ಯ ಸರಕಾರ ತಿಂಗಳಲ್ಲಿ ಎರಡು ಎಕ್ಸ್‌ಟ್ರಾ ರಜೆಗಳನ್ನು ಇದಕ್ಕಾಗಿ ಮಹಿಳೆಯರಿಗೆ ನೀಡುತ್ತದೆ. ಭಾರತದ ಸಾಂಪ್ರದಾಯಿಕ ಮೇಲ್ವರ್ಗದ ಮನೆಗಳಲ್ಲಿ ಮುಟ್ಟಾದಾಗ ಮೂರು ದಿನ ಮನೆಯಲ್ಲಿ ಪ್ರತ್ಯೇಕವಾಗಿ ಕೂರಿಸುತ್ತಿದ್ದರು. ಇದರ ಹಿಂದೆ, ಮಹಿಳೆಯರಿಗೆ ರೆಸ್ಟ್ ಕೊಡುವ ಉದ್ದೇಶವೂ ಇದ್ದಿರಬಹುದು ಎಂದು ಕೂಡ ಸಮರ್ಥನೆ ಇದೆ. ಅದೇನೇ ಇದ್ದರೂ, ನೋವು ಅನುಭವಿಸುವವರಿಗೆ ರಜೆ ನೀಡುವುದು ಮಾನವೀಯ ಹಾಗೂ ಸೆನ್ಸಿಬಲ್ ಎಂಬ ಒಪೀನಿಯನ್ ಬಂದಿದೆ.

click me!