Parbati Baruah : ಪುರುಷ ಪ್ರಧಾನ ಕ್ಷೇತ್ರದಲ್ಲಿ ಸಾಧನೆಗೈದ ಮಹಿಳೆ.. ಆನೆ ಮಾವುತ ಪಾರ್ಬತಿ ಬರುವಾಗೆ ಪದ್ಮಶ್ರೀ

By Suvarna News  |  First Published Jan 26, 2024, 3:19 PM IST

ಆನೆಗಳನ್ನು ಪಳಗಿಸೋದು ಸುಲಭದ ಕೆಲಸವಲ್ಲ. ಅದ್ರಲ್ಲೂ ಕಾಡಾನೆಗಳು ಯಾವಾಗ ದಾಳಿ ಮಾಡ್ತವೆ ಹೇಳಲು ಸಾಧ್ಯವಿಲ್ಲ. ಕಾಡು ಆನೆಗಳನ್ನು ಪಳಗಿಸಿ, ಅವುಗಳನ್ನು ರಕ್ಷಿಸುವ ಕೆಲಸ ಪುರುಷರಿಗೆ ಸೀಮಿತವಾಗಿದ್ದ ಕಾಲದಲ್ಲಿ ಧೈರ್ಯ ಮಾಡಿ ಆ ಕೆಲಸಕ್ಕೆ ನುಗ್ಗಿದ ಮಹಿಳೆಗೊಂದು ಸಲಾಮ್. 
 


ಈ ಬಾರಿ ನೀಡಿದ ಪದ್ಮಶ್ರೀ ಪ್ರಶಸ್ತಿಯಲ್ಲಿ ಒಬ್ಬರು ವಿಶೇಷ ಗಮನ ಸೆಳೆದಿದ್ದಾರೆ. ಪುರುಷ ಪ್ರಧಾನವಾಗಿರುವ ಕ್ಷೇತ್ರದಲ್ಲಿ ತಮ್ಮದೇ ಹೆಸರು ಮಾಡಿದ ಆ ಮಹಿಳೆ ಹೆಸರು ಪಾರ್ಬತಿ ಬರುವ. ಇವರು ಭಾರತದ ಮೊದಲ ಆನೆ ಮಾವುತರಾಗಿದ್ದಾರೆ. ಇವರಿಗೆ ಈ ಬಾರಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಆನೆಗಳ ಜೀವ ಉಳಿಸುವ ಮಹಾನ್ ಕಾರ್ಯವನ್ನು ಮಾಡುತ್ತಿರುವ ಪಾರ್ಬತಿ ಬರುವ ಧೈರ್ಯಕ್ಕೆ ಮೆಚ್ಚಲೇಬೇಕು. ಅವರ ಜೀವನ ಕಥೆ ಅನೇಕ ಪ್ರಾಣಿ ಪ್ರೇಮಿಗಳಿಗೆ ಸ್ಪೂರ್ತಿಯಾಗಿದೆ. 

ಚಿಕ್ಕ ವಯಸ್ಸಿನಲ್ಲೇ ಆನೆ (Elephant) ಗಳಿಗೆ ತರಬೇತಿ ನೀಡುವ ಕಲೆಯನ್ನು ಕರಗತ ಮಾಡಿಕೊಂಡ ಭಾರತದ ಮೊದಲ ಮಹಿಳಾ ಮಾವುತ (Mahout)  ಪಾರ್ಬತಿ ಬರುವ (Parbati Barua). ಅವರ ಕುಟುಂಬವು ಅಸ್ಸಾಂನ ರಾಜಮನೆತನಕ್ಕೆ ಸೇರಿದೆ. ಅವರ ತಂದೆ ಜಮೀನುದಾರರಾಗಿದ್ದರು, ಅವರು ತಮ್ಮ ಕೆಲಸದಲ್ಲಿ ಆನೆಗಳನ್ನು ಸಹ ಬಳಸುತ್ತಿದ್ದರು. ಕಾಡಿನಲ್ಲಿ ದೀರ್ಘ ದಂಡಯಾತ್ರೆಯ ಸಮಯದಲ್ಲಿ ಅವರು ಆಗಾಗ್ಗೆ ತನ್ನ ಕುಟುಂಬವನ್ನು ತನ್ನೊಂದಿಗೆ ಕರೆದುಕೊಂಡು ಹೋಗುತ್ತಿದ್ದರು. ಅಲ್ಲಿ ಅವರು ಆನೆಗಳ ನಡುವೆ ಶಿಬಿರಗಳಲ್ಲಿ ವಾಸಿಸುತ್ತಿದ್ದರು. ಬಾಲ್ಯದಿಂದಲೂ ಆನೆಗಳಿಗೆ ಹತ್ತಿರವಾಗಿದ್ದ ಪಾರ್ಬತಿ, ಕಾಡಿನಲ್ಲಿ ಆನೆಗಳೊಂದಿಗೆ ಕೆಲಸ ಮಾಡುವ ಬಯಕೆ ಇದೆ ಎಂಬುದನ್ನು ಅರಿತುಕೊಂಡರು. 

Tap to resize

Latest Videos

undefined

ಶೋಯೆಬ್‌-ಸನಾ ಮದುವೆ ಬಳಿಕ ತಮ್ಮ ಪ್ರತಿಬಿಂಬದ ಫೋಟೊ ಶೇರ್‌ ಮಾಡಿದ ಸಾನಿಯಾ

ಇದು ಪುರುಷರ ಪ್ರಾಬಲ್ಯವನ್ನು ಹೊಂದಿದ ಕೆಲಸವಾಗಿತ್ತು. ಆದರೆ ತನ್ನ ಸಮರ್ಪಣೆ ಮತ್ತು ಕಠಿಣ ಪರಿಶ್ರಮದಿಂದ ಅವರು ಭಾರತದ ಮೊದಲ ಮತ್ತು ಬಹುಶಃ ಏಕೈಕ ಮಹಿಳಾ ಮಾವುತ ಎಂಬ ಹೆಗ್ಗಳಿಕೆಯನ್ನು ಸಾಧಿಸಿದ್ದಾರೆ.

14 ನೇ ವಯಸ್ಸಿನಲ್ಲಿ ಅವರು ಮೊದಲ ಬಾರಿ ಕಾಡು ಆನೆಯನ್ನು ಹಿಡಿದರು. ಅದು ಅತ್ಯಂತ ಕಷ್ಟಕರವಾಗಿತ್ತು. ಕಾಡು ಆನೆಯನ್ನು ನಿಯಂತ್ರಿಸಲು ಮತ್ತೊಂದು ಆನೆಯ ಮೇಲೆ ಸವಾರಿ ಮಾಡಿ ಕೊರಳಿಗೆ ಹಗ್ಗ ಕಟ್ಟಬೇಕು. ಈಗ ಸುಮಾರು ೬೭ ವರ್ಷ ವಯಸ್ಸಿನ ಪಾರ್ಬತಿ ತಮ್ಮ ಜೀವನದ ಬಹುಪಾಲು ಆನೆಗಳೊಂದಿಗೆ ಕಾಡಿನಲ್ಲಿ ಕಳೆದಿದ್ದಾರೆ.  ಮೂರು ತರಬೇತಿ ಪಡೆದ ಆನೆಗಳು ಮತ್ತು ಅವರ ತಂಡದೊಂದಿಗೆ, ಆನೆಗಳಿಗೆ ಸಹಾಯ ಮಾಡಲು ಅವರು ವಿವಿಧ ರಾಜ್ಯಗಳಿಗೆ ಪ್ರಯಾಣಿಸುತ್ತಾರೆ. ಕಾಡು ಆನೆಗಳನ್ನು ಹಿಡಿಯಲು ಅಥವಾ ಅವುಗಳನ್ನು ಹಳ್ಳಿಗಳಿಂದ ಕಾಡಿಗೆ ಓಡಿಸಲು ಅವರು ಆಗಾಗ್ಗೆ ದೂರದ ಕಾಡುಗಳಲ್ಲಿ ಓಡಾಡುತ್ತಿದ್ದರು. ನಿರಂತರ ಕೆಲಸದಿಂದ ಅವರು  ನಿಪುಣರಾದರು. ಕಾಡುಗಳು, ಚಹಾ ತೋಟಗಳು ಮತ್ತು ಪಶ್ಚಿಮ ಬಂಗಾಳ, ಒಡಿಶಾ ಮತ್ತು ಅವರ ಸ್ಥಳೀಯ ಅಸ್ಸಾಂನ ಗ್ರಾಮೀಣ ಪ್ರದೇಶಗಳಿಗೆ ಕಾಡು ಆನೆಗಳನ್ನು ಹಿಡಿಯಲು ಅಥವಾ ಆರೈಕೆ ಮಾಡಲು ಅವರನ್ನು ಹಲವು ಬಾರಿ ಕರೆಸಲಾಗಿದೆ.

ಸಾಯೋ ಮುನ್ನ ತನ್ನೆಲ್ಲ 23 ಕೋಟಿ ರೂ. ಆಸ್ತಿ ಕೊಟ್ಟಿದ್ದು ಇವಳು ಮಕ್ಕಳಿಗಲ್ಲ, ಮೊಮ್ಮಕ್ಕಳಿಗಿಲ್ಲ! ಮತ್ತೆ?

ಪಾರ್ಬತಿ ಕೆಲಸಕ್ಕೆ ಸಂಬಂಧಿಸಿದಂತೆ ಹಲವು ವರ್ಷಗಳ ಹಿಂದೆ ಕ್ವೀನ್ ಆಫ್ ದಿ ಎಲಿಫೆಂಟ್ಸ್  ಎಂಬ ಸಾಕ್ಷ್ಯಚಿತ್ರ ಕೂಡ ತಯಾರಾಗಿದ್ದು, ಅವರ ಬಗ್ಗೆ ಸಾಕಷ್ಟು ಮಾಹಿತಿ ಇದರಲ್ಲಿದೆ. ಇದಾದ್ಮೇಲೆ ಅವರು ಜಗತ್ತಿನಾದ್ಯಂತ ಪ್ರಸಿದ್ಧಿ ಪಡೆದಿದ್ದಾರೆ.  

ಆನೆಗೆ ಸಂಬಂಧಿಸಿದ ಅನೇಕ ಸಂಸ್ಥೆಗಳ ಜೊತೆ ಅವರು ಕೆಲಸ ಮಾಡಿದ್ದಾರೆ. ಆನೆಗಳು ತುಂಬಾ ನಿಷ್ಠೆ ಮತ್ತು ಪ್ರೀತಿಯಿಂದ ಕೂಡಿರುತ್ತವೆ. ಹಾಗಾಗಿ ಅವರ ಜೊತೆ ಕೆಲಸ ಮಾಡಲು ನನಗೆ ಇಷ್ಟ ಎಂದು ಈ ಹಿಂದೆ ಪಾರ್ಬತಿ ಹೇಳಿದ್ದರು. ಪರ್ಬತಿ ಬರುವ, ಏಷ್ಯನ್ ಎಲಿಫೆಂಟ್ ಸ್ಪೆಷಲಿಸ್ಟ್ ಗ್ರೂಪ್, IUCN ನ ಸದಸ್ಯರಾಗಿದ್ದಾರೆ.  ಕೋಲ್ಕತ್ತಾ ಅಂತರರಾಷ್ಟ್ರೀಯ ವನ್ಯಜೀವಿ ಮತ್ತು ಪರಿಸರ ಚಲನಚಿತ್ರೋತ್ಸವವು ಪಾರ್ವತಿ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಇದಲ್ಲದೆ ಪಾರ್ಬತಿ ಬರುವ ಅನೇಕ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಆನೆಗಳ ಸೇವೆಯೇ ಅವರ ಜೀವನದ ಗುರಿಯಾಗಿದೆ.  

click me!