
ನವರಾತ್ರಿ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ದುರ್ಗೆಯ ಪೂಜೆಯಲ್ಲಿ ಭಕ್ತರು ನಿರತರಾಗಿದ್ದಾರೆ. ಮನೆಯಲ್ಲಿಯೇ ಇರುವ ಮಹಿಳೆಯರು ಬೆಳಿಗ್ಗೆ ಎದ್ದು ನಿತ್ಯದ ಕೆಲಸ ಮುಗಿಸಿ, ತಾಯಿ ದುರ್ಗೆ ಪೂಜೆಗೆ ಆರಾಮವಾಗಿ ಅಣಿ ಆಗ್ಬಹುದು. ಆದ್ರೆ ಕಚೇರಿಗೆ ಹೋಗುವ ಮಹಿಳೆಯರು ನವರಾತ್ರಿ ಪೂಜೆ, ವ್ರತ ಮಾಡ್ತಿದ್ದರೆ ಸ್ವಲ್ಪ ತೊಂದರೆ ಅನುಭವಿಸುತ್ತಾರೆ. ನಿತ್ಯದ ಕೆಲಸ, ಕಚೇರಿ ಕೆಲಸದ ಜೊತೆ ಪೂಜೆ, ವ್ರತದ ಸಿದ್ಧತೆ ಕಷ್ಟವಾಗುತ್ತದೆ. ಕಚೇರಿ ಕೆಲಸ ಮತ್ತು ಪೂಜೆಯ ಕೆಲಸಗಳ ನಡುವೆ ಸಮತೋಲನ ಕಾಯ್ದುಕೊಳ್ಳಬೇಕಾಗುತ್ತದೆ.
ನವರಾತ್ರಿ ಸಮಯದಲ್ಲಿ ದುರ್ಗೆ ಪೂಜೆಗೂ ಸಮಸ್ಯೆ ಆಗ್ಬಾರದು, ನಿಮ್ಮ ಕೆಲಸಕ್ಕೂ ತೊಂದರೆ ಆಗ್ಬಾರದು ಅಂದ್ರೆ ನೀವು ಕೆಲ ಟಿಪ್ಸ್ ಪಾಲನೆ ಮಾಡ್ಬೇಕು. ರಾತ್ರಿಯೇ ನೀವು ಕೆಲ ಕೆಲಸಗಳನ್ನು ಮುಗಿಸಬೇಕು. ಹಾಗಾದಲ್ಲಿ ಬೆಳಿಗ್ಗೆ ನಿಮಗೆ ತೊಂದರೆಯಾಗೋದಿಲ್ಲ, ಗೊಂದಲ ಕಾಡೋದಿಲ್ಲ.
ಚಾಣಕ್ಯ ನೀತಿ: ಮದ್ವೆ ಆಗೋದಾದ್ರೆ ಇಂಥ ಹುಡುಗೀರನ್ನೇ ಆಗಿ… ಜೀವನ ಚೆನ್ನಾಗಿರುತ್ತೆ
ಬೆಳಿಗ್ಗೆ ಎದ್ದು ತಾಯಿ ಪೂಜೆ ಮಾಡಿ ನೀವು ಕಚೇರಿ (Office) ಗೆ ಹೋಗ್ತೀರಿ ಎಂದಾದ್ರೆ ರಾತ್ರಿಯೇ ಹಣ್ಣು, ಹೂವು (Flower), ಪ್ರಸಾದಕ್ಕೆ ಬೇಕಾದ ಅಗತ್ಯ ವಸ್ತುಗಳನ್ನು ತೆಗೆದಿಟ್ಟುಕೊಳ್ಳಿ. ಆಗ ನೀವು ಬೆಳಿಗ್ಗೆ ಆತುರಾತುರದಲ್ಲಿ ಎಲ್ಲವನ್ನು ಹೊಂದಿಸಿಕೊಳ್ಳುವ ತೊಂದರೆ ಬರೋದಿಲ್ಲ. ಎಲ್ಲವೂ ಸಿದ್ಧವಾಗಿರುವ ಕಾರಣ ಶಾಂತವಾಗಿ ಪೂಜೆ ಮುಗಿಸಿ ನೀವು ಕಚೇರಿಗೆ ಹೊರಡಬಹುದು. ಒಂದ್ವೇಳೆ ನೀವು ರಾತ್ರಿಯೇ ಈ ಎಲ್ಲ ವಸ್ತುಗಳನ್ನು ತೆಗೆದಿಟ್ಟುಕೊಂಡಿಲ್ಲವೆಂದ್ರೆ ಬೆಳಿಗ್ಗೆ ಎಲ್ಲದಕ್ಕೂ ಲೇಟ್ ಆಗುತ್ತೆ. ಇದ್ರಿಂದ ಮನಸ್ಸು ಗೊಂದಲಕ್ಕೊಳಗಾಗುತ್ತದೆ. ಮನೆಯಲ್ಲಿರುವ ಎಲ್ಲರ ಮೇಲೆ ಕೂಗಾಡಿ, ರೇಗಾಡಿ ನೀವು ಪೂಜೆ ಮಾಡಲು ಕುಳಿತುಕೊಳ್ತೀರಿ. ಇದ್ರಿಂದ ಪೂಜೆ ಫಲ ನಿಮಗೆ ಸಿಗೋದಿಲ್ಲ. ಮನಸ್ಸಿಗೂ ಪೂಜೆ ಮಾಡಿದ ನೆಮ್ಮದಿ ಸಿಗೋದಿಲ್ಲ.
ಮದುವೆಯ ನಂತರ ಹುಡುಗಿಯರು ಈ ತಪ್ಪುಗಳನ್ನು ಮಾಡಬಾರದು!
ನವರಾತ್ರಿ (Navratri) ಪೂಜೆಗಾಗಿ ರಾತ್ರಿ ಏನು ಮಾಡ್ಬೇಕು? :
ನವರಾತ್ರಿಯ ಸಮಯದಲ್ಲಿ ನೀವು ತಾಯಿ ದುರ್ಗೆಯನ್ನು ಮನೆಯಲ್ಲಿ ಪ್ರತಿಷ್ಠಾಪನೆ ಮಾಡಿದ್ದರೆ ಅಥವಾ ಪ್ರತಿ ದಿನ ದುರ್ಗೆಯ ಪೂಜೆ ಮಾಡ್ತಿದ್ದರೆ ನೀವು ಪೂಜೆ ಮಾಡುವ ಜಾಗವನ್ನು ಅಥವಾ ದುರ್ಗೆ ಸ್ಥಾಪನೆಗೊಂಡಿರುವ ಸ್ಥಳವನ್ನು ರಾತ್ರಿಯೇ ಸ್ವಚ್ಛಗೊಳಿಸಿ. ಬೆಳಿಗ್ಗೆ ತರಾತುರಿಯಲ್ಲಿ ಪೂಜಾ ಸ್ಥಳ ಕ್ಲೀನ್ ಮಾಡಲು ಆಗದೆ ಇರಬಹುದು. ಸ್ವಚ್ಛವಿಲ್ಲದ ಜಾಗದಲ್ಲಿ ಪೂಜೆ ಮಾಡಿ ಪ್ರಯೋಜನವಿಲ್ಲ. ಹಾಗಾಗಿ ನೀವು ರಾತ್ರಿ ಮಲಗುವ ಮೊದಲು ಪೂಜಾ ಸ್ಥಳವನ್ನು ಸ್ವಚ್ಛಗೊಳಿಸಿ.
ದೇವರ ಮುಂದೆ ಎಲ್ಲವನ್ನೂ ವ್ಯವಸ್ಥೆಗೊಳಿಸಿ : ನಿಮಗೆ ಬೆಳಿಗ್ಗೆ ಸಮಯ ಸಾಲ್ತಿಲ್ಲ ಎಂದಾದ್ರೆ ನೀವು ರಾತ್ರಿಯೇ ರಂಗೋಲಿ ಹಾಕಬಹುದು. ಅಲ್ಲದೆ ಪೂಜೆಗೆ ಬೇಕಾದ ಎಲ್ಲ ವಸ್ತುಗಳನ್ನು ದೇವರ ಮುಂದೆ ಇಟ್ಟುಕೊಳ್ಳಿ. ಎಲ್ಲವೂ ನಿಮ್ಮ ಕೈಗೆ ಸಿಗುವಂತೆ ಇರಲಿ. ಬೆಳಿಗ್ಗೆ ಒಂದೊಂದು ವಸ್ತುವಿಗೂ ನೀವು ಹುಡುಕಾಟ ನಡೆಸ್ತಿದ್ದರೆ ಸಮಯವಾಗುತ್ತದೆ. ಹೂವು, ಹಣ್ಣು, ಅಕ್ಷತೆ, ತುಪ್ಪ, ಕುಂಕುಮ, ಧೂಪದ್ರವ್ಯ ಇತ್ಯಾದಿ ಎಲ್ಲವನ್ನೂ ದೇವರ ಮುಂದೆ ಇಡಿ. ಬೆಳಿಗ್ಗೆ ಸ್ನಾನ ಮಾಡಿ ಆರಾಮವಾಗಿ ಪೂಜೆ ಮುಗಿಸಬಹುದು. ಇದ್ರಿಂದ ಪೂಜೆ ಸರಾಗವಾಗಿ ನಡೆಯುತ್ತದೆ. ಮನಸ್ಸಿಗೆ ಪೂಜೆ ಮಾಡಿದ ತೃಪ್ತಿ ಸಿಗುತ್ತದೆ.
ಉಪವಾಸಕ್ಕೆ ಮೊದಲೇ ಸಿದ್ಧರಾಗಿ : ನವರಾತ್ರಿಯ ಒಂಭತ್ತೂ ದಿನ ಉಪವಾಸ ಮಾಡುವವರಿದ್ದಾರೆ. ಮತ್ತೆ ಕೆಲವರು ಕೆಲ ಆಹಾರವನ್ನು ತ್ಯಜಿಸಿತ್ತಾರೆ. ಬೆಳಿಗ್ಗೆ ಎದ್ದು ಯಾವ ಆಹಾರ ತಯಾರಿಸಬೇಕು ಎಂಬ ಗೊಂದಲ ನಿಮ್ಮನ್ನು ಕಾಡುತ್ತದೆ. ಹಾಗೆಯೇ ದೇವರಿಗೆ ಯಾವ ಖಾದ್ಯವನ್ನು ನೈವೇದ್ಯಕ್ಕೆ ಇಡಬೇಕೆಂಬ ಸಮಸ್ಯೆ ತಲೆದೂರುತ್ತದೆ. ನೀವು ರಾತ್ರಿಯೇ ಯಾವ ಖಾದ್ಯ ತಯಾರಿಸಬೇಕು ಎಂಬುದನ್ನು ಪ್ಲಾನ್ ಮಾಡಿ. ಅದಕ್ಕೆ ಅಗತ್ಯವಿರುವ ವಸ್ತುಗಳನ್ನು ತೆಗೆದಿಟ್ಟಿರಿ. ನವರಾತ್ರಿ ಸಂದರ್ಭದಲ್ಲಿ ನೀವು ಯಾವ ಯಾವ ಆಹಾರವನ್ನು ಸೇವಿಸಬಹುದು ಎಂದು ಪಟ್ಟಿ ಮಾಡಿಟ್ಟರೆ ನಿಮ್ಮ ಕೆಲಸ ಮತ್ತಷ್ಟು ಸುಲಭವಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.