ತೆಲಂಗಾಣ ವಿದ್ಯುತ್ ಇಲಾಖೆ ಸೇರಿದ ಮೊದಲ ಲೈನ್‌ವುಮನ್ ಈಕೆ

By Anusha Kb  |  First Published May 12, 2022, 2:30 PM IST
  • 22 ವರ್ಷದ ಶಿರೀಶಾ ಈಗ ಟಿಎಸ್‌ಎಸ್‌ಪಿಡಿಸಿಎಲ್‌ ಲೈನ್‌ ವುಮನ್‌
  • ಕಾನೂನು ಹೋರಾಟದ ಬಳಿಕ ಕೈಗೆ ಸಿಕ್ಕ ಹುದ್ದೆ
  • ನೇಮಕಾತಿ ಪತ್ರ ನೀಡಿದ ತೆಲಂಗಾಣ ಇಂಧನ ಸಚಿವ

ಹೈದರಾಬಾದ್‌: ಇಂದು ಮಹಿಳೆಯರು ಕಾಲಿಡದ ಕ್ಷೇತ್ರವಿಲ್ಲ. ತಮಗಿರುವ ತೊಡಕುಗಳೆಲ್ಲವನ್ನು ಮೀರಿ ಅಡುಗೆ ಮನೆಯಿಂದ ಅಂತರಿಕ್ಷದವರೆಗೆ ಮಹಿಳೆಯರು ದಾಪುಗಾಲಿಟ್ಟಿದ್ದಾರೆ. ಸಾಧಕರ ಸಾಲಿನಲ್ಲಿ ಜಾಗ ಪಡೆದಿದ್ದಾರೆ. ಈಗ ಇಂತಹ ಸಾಧಕರ ಸಾಲಿಗೆ ಸೇರುವ ಮತ್ತೊಬ್ಬ ಮಹಿಳೆ ತೆಲಂಗಾಣದ ಬಬ್ಬೂರಿ ಶ್ರೀಶ. ಹೌದು ತೆಲಂಗಾಣ ಸರ್ಕಾರ ತನ್ನ ವಿದ್ಯುತ್ ಪ್ರಸರಣ ಇಲಾಖೆಗೆ ಮೊದಲ ಮಹಿಳಾ ಲೈನ್‌ಮ್ಯಾನ್ ಆಗಿ ಬಬ್ಬೂರಿ ಶಿರೀಶಾ ಅವರನ್ನು ನೇಮಿಸಿದೆ. ಈ ಮೂಲಕ ಶಿರೀಶಾ ಹೊಸ ಇತಿಹಾಸ ನಿರ್ಮಿಸಿದ್ದಾರೆ. ತೆಲಂಗಾಣ ರಾಜ್ಯ ದಕ್ಷಿಣ ವಿದ್ಯುತ್ ವಿತರಣಾ ನಿಗಮದ ಲೈನ್‌ಮ್ಯಾನ್ ಆಗಿ ನೇಮಕಗೊಂಡಿರುವ 22 ವರ್ಷದ ಶಿರೀಶಾ (Shirisha) ಅವರಿಗೆ ಇದೇನು ಸುಲಭದ ಹಾದಿಯಾಗಿರಲಿಲ್ಲ.


ಇವರು ಸಾಕಷ್ಟು ಕಾನೂನು ಹೋರಾಟಗಳನ್ನು ಮಾಡಿದ್ದಾರೆ. ಇವರು ಈಗಾಗಲೇ ಲಿಖಿತ ಪರೀಕ್ಷೆ ಹಾಗೂ ಕಂಬ ಏರುವ ಪರೀಕ್ಷೆಯಲ್ಲಿ ಪಾಸಾಗಿದ್ದರು. ಪ್ರಸ್ತುತ ತೆಲಂಗಾಣ ರಾಜ್ಯದ ಇಂಧನ ಸಚಿವ ಸಿ. ಜಗದೀಶ್ ರೆಡ್ಡಿ (C.Jagadish Reddy) ಅವರು ಬುಧವಾರ ಈಕೆಗೆ ನೇಮಕಾತಿ ಪತ್ರವನ್ನು ವಿತರಿಸಿದ್ದರು. ಈ ಹಿಂದಿನ ಲೈನ್‌ಮ್ಯಾನ್‌ಗಳಿಗೆ ಸಂಬಂಧಿಸಿದ ನೇಮಕಾತಿ ನೋಟಿಫಿಕೇಷನ್‌ಗಳಲ್ಲಿ ಕೇವಲ ಪುರುಷರಿಗೆ ಮಾತ್ರ ಎಂಬ ಉಲ್ಲೇಖವಿರುತ್ತಿತ್ತು. ಆದರೆ ನಾವೀಗ ಆ ಷರತ್ತನ್ನು ತೆಗೆದು ಹಾಕಿದ್ದೇವೆ ಹಾಗೂ ಮಹಿಳೆಯರಿಗೂ ಅವಕಾಶ ನೀಡಿದ್ದೇವೆ ಎಂದು ಟಿಎಸ್‌ಎಸ್‌ಪಿಡಿಸಿಎಲ್‌(TSSPDCL) ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಜಿ. ರಘುರಾಮ್ ರೆಡ್ಡಿ (Raghuram Reddy) ಹೇಳಿದ್ದಾರೆ. 

Tap to resize

Latest Videos

Women Achievers 71ರ ಹರೆಯದಲ್ಲಿ ಜೆಸಿಬಿ ಕ್ರೇನ್ ಸೇರಿ 11 ವಾಹನಗಳ ಲೈಸೆನ್ಸ್, ಹೊಸ ದಾಖಲೆ ಬರೆದ ರಾಧಾಮಣಿ ಅಮ್ಮ!
 

ತನ್ನ ನೇಮಕಾತಿ ಪತ್ರ ಸ್ವೀಕರಿಸಿದ ಬಳಿಕ ಮಾತನಾಡಿದ ಶಿರೀಶಾ, ನನಗೆ ತುಂಬಾ ಖುಷಿಯಾಗಿದೆ. ನನ್ನ ಕನಸು ಕೊನೆಗೂ ನನಸಾಗಿದೆ. ನಾನು ಕೆಲಸ ಮಾಡಲು ಇನ್ನು ಕಾಯಬೇಕಾಗಿಲ್ಲ ಎಂದರು. ಶಿರೀಶಾ ಎಂಟು ಮೀಟರ್ ಉದ್ದದ್ದ ಕಂಬವನ್ನು ಏರುವ ಪರೀಕ್ಷೆಯನ್ನು 2020 ರಲ್ಲೇ ಪೂರ್ಣಗೊಳಿಸಿದ್ದರು. ಭವಿಷ್ಯದಲ್ಲಿ ಲಿಂಗವನ್ನಾಧರಿಸಿ ಕೆಲಸಕ್ಕೆ ಪರಿಗಣಿಸುವ ಸಂಪ್ರದಾಯ ಕೊನೆಗೊಳ್ಳುವುದು ಎಂದು ನಾನು ಭಾವಿಸುತ್ತೇನೆ. ಅಲ್ಲದೇ ಹೆಚ್ಚು ಹೆಚ್ಚು ಮಹಿಳೆಯರು ಈ ವೃತ್ತಿಗೆ ಸೇರಿದರೆ ಮುಂದೆ ನಮ್ಮನ್ನು ಲೈನ್‌ ವುಮನ್ ಎಂದು ಕರೆಯಬಹುದು. ಆ ದಿನಕ್ಕಾಗಿ ನಾನು ಎದುರು ನೋಡುತ್ತಿದ್ದೇನೆ ಅಲ್ಲದೇ ಸಚಿವರು ಕೂಡ ನನಗೆ ಆ ಬಗ್ಗೆ ಭರವಸೆ ನೀಡಿದ್ದಾರೆ ಎಂದು ಬಬ್ಬೂರು ಶಿರೀಶಾ ಹೇಳಿದರು. 

ನಿರಾಶ್ರಿತರ ಹಸಿವು ನೀಗಿಸಿದ 'ಸ್ನೇಹಾ'ಗೆ ಮೋದಿ ಟ್ವಿಟರ್ ಖಾತೆ!, ಯಾರೀಕೆ?

ತಮ್ಮ ಊರಾದ ಸಿದ್ದಿಪೇಟೆಯ ಛೆಬರ್ತಿ ಹಮ್ಲೆಟ್‌ನಲ್ಲಿ ತನ್ನ ಚಿಕ್ಕಪ್ಪನಿಂದ ಕಂಬ ಏರುವ ತರಬೇತಿ ಪಡೆದಿರುವುದಾಗಿ ಆಕೆ ಹೇಳಿದ್ದಾರೆ.  ಅಲ್ಲದೇ ನಗರದಲ್ಲಿ ತನ್ನ ವೃತ್ತಿ ಆರಂಭಿಸಲು ಉತ್ಸುಕಳಾಗಿರುವುದಾಗಿ ಆಕೆ ಹೇಳಿದ್ದಾಳೆ. ಅಲ್ಲದೇ ನಾನು ನನ್ನ ತಾಯಿಯನ್ನು ಕೂಡ ಇಲ್ಲಿಗೆ ಕರೆ ತರಬೇಕೆಂದಿದ್ದೇನೆ. ಅವರು ಇನ್ನು ದುಡಿಯಬೇಕಾಗಿಲ್ಲ. ಅವರು ನಿವೃತ್ತಿ ಹೊಂದಬಹುದು. ಇದು ನನ್ನ ತಾಯಿಗೆ ವಾಪಸ್‌ ಮರಳಿಸುವ ಸಮಯ. ಆಕೆ ನನಗೆ ಉತ್ತಮ ವಿದ್ಯಾಭ್ಯಾಸ ನೀಡಲು ಕೂಲಿ ಮಾಡಿ ಕಷ್ಟಪಟ್ಟಿದ್ದಳು ಎಂದು ಶಿರೀಶಾ ಹೇಳಿದ್ದಾರೆ. 

ಶಿರೀಶಾ ಜೊತೆ ಭಾರತಿ ಎಂಬುವವರು ಕೂಡ ಈ ಪರೀಕ್ಷೆಯಲ್ಲಿ ಪಾಸಾಗಿ ಲೈನ್‌ಮ್ಯಾನ್ ಆಗಿ ನೇಮಕಾತಿ ಗಳಿಸಿದ್ದಾರೆ.  ಸಬಲೀಕರಣ ಅನ್ನೋದು ಸರ್ಕಾರದ ಕಾರ್ಯಕ್ರಮ ಅಲ್ಲ, ಅಂತರಂಗದ ಆಶಯ. ಕಾನೂನು ಮಾಡುವುದಕ್ಕಿಂತ ಹೆಚ್ಚಿನದನ್ನು ಕಾರ್ಯವಿಧಾನ ಮಾಡಬಲ್ಲದು. ತಮ್ಮ ನೆಲೆಯನ್ನು ತಾನೇ ಕಂಡುಕೊಂಡು ದಿಟ್ಟತನದಿಂದ ತಲೆಯೆತ್ತಿ ನಿಂತವರು ಮತ್ತೊಬ್ಬರಿಗೆ ಸ್ಪೂರ್ತಿಯಾಗಬಲ್ಲರು. ಅಂಥ ಸ್ಪೂರ್ತಿವಂತರು ನಮ್ಮ ಸಮಾಜದಲ್ಲಿ ಅನೇಕರಿದ್ದಾರೆ. ನಮ್ಮ ನಿಮ್ಮಂಥ ಸಹಸ್ರ ಸಹಸ್ರ ಮಂದಿಯ ಅಂತಃಸ್ಪೂರ್ತಿ ಮತ್ತು ಹುಮ್ಮಸ್ಸನ್ನು ಇವರು ಪ್ರತಿನಿಧಿಸುತ್ತಾರೆ.

click me!