ಅನ್ಯಾಯ ಸ್ವಾಮಿ, Company Interview ನಲ್ಲಿ ಬಹುತೇಕ ಮಹಿಳೆಯರಿಗೆ ಕೇಳ್ತಾರೆ ಈ ಪ್ರಶ್ನೆ

By Suvarna News  |  First Published Mar 31, 2022, 8:16 AM IST

ಮದುವೆ (Marriage)ಯಾದ್ಮೇಲೆ ಕೆಲಸ ಮಾಡೋದು ಕಷ್ಟ. ಮಕ್ಕಳಾದ್ಮೇಲೆ ಮಹಿಳೆ (Women)ಯರು ಕೆಲಸಕ್ಕೆ ಹೋಗ್ಲೇ ಬಾರದು. ಇದು ಅಲಿಖಿತ ನಿಯಮ. ಕೆಲಸಕ್ಕಾಗಿ ಇಂಟರ್ವ್ಯೂಗೆ (Interview) ಬರುವ ಮಹಿಳೆಯರಿಗೂ ಅನೇಕರು ಇದೇ ಪ್ರಶ್ನೆ ಕೇಳ್ತಾರೆ. ಆದ್ರೆ ಈ ಬಗ್ಗೆ ಮಹಿಳೆಯರು ಏನು ಹೇಳ್ತಾರೆ ಗೊತ್ತಾ?.


ಭಾರತ (India) ಮಾತ್ರವಲ್ಲ ಇಡೀ ವಿಶ್ವ (World)ವೇ ಈಗ ಸ್ಪರ್ಧೆಗೆ (Competition) ಬಿದ್ದಿದೆ. ಜನರು ಸ್ಪರ್ಧಾತ್ಮಕ ಯುಗದಲ್ಲಿ ಬದುಕುತ್ತಿದ್ದಾರೆ. ಈಗಿನ ದಿನಗಳಲ್ಲಿ ಪರೀಕ್ಷೆಯಲ್ಲಿ 98 ಅಂಕ ಪಡೆದರೆ ಪ್ರಯೋಜನವಿಲ್ಲ. 99.9 ಅಂಕ ಗಳಿಸಿದ್ರೂ ಯಾಕೆ ಕಮ್ಮಿ ಎನ್ನುವವರಿದ್ದಾರೆ. ಸಾಧನೆಗೆ ಹೆಣ್ಣು –ಗಂಡು ಎಂಬ ವ್ಯತ್ಯಾಸವಿಲ್ಲ. ಪ್ರತಿಯೊಬ್ಬರು ಎಲ್ಲ ಕ್ಷೇತ್ರಗಳಲ್ಲಿದ್ದಾರೆ. ಪುರುಷ (Male) ರ ಸಮಾನ ಹುಡುಗಿಯರು ಕೆಲಸ ಮಾಡ್ತಾರೆ. ಬೆಳಿಗ್ಗೆ (morning) ಯಿಂದ ರಾತ್ರಿಯವರೆಗೆ ನಿಂತು ಕೆಲಸ ಮಾಡುವ ಮಹಿಳೆಯರು ಸಾಕಷ್ಟು ಮಂದಿ. ಆದ್ರೆ ಪುರುಷನಿಗೆ ಸಿಗುವ ಮಾನ್ಯತೆ ಮಹಿಳೆಯರಿಗೆ ಇಂದೂ ಸಿಕ್ತಿಲ್ಲ. ಪುರುಷರ ಸ್ಪರ್ಧೆಯಲ್ಲಿ ಮಹಿಳೆಯರನ್ನು ಕಡೆಗಣಿಸಲಾಗುತ್ತದೆ.

ಪುರುಷರು ಹಾಗೂ ಮಹಿಳೆಯರು ಎಂದು ಪ್ರತ್ಯೇಕವಾಗಿ ನೋಡಲಾಗುತ್ತದೆ. ಹೆಚ್ಚಿನ ಭಾರತೀಯ ಕಂಪನಿ (Company) ಗಳು ಮಹಿಳೆಯರ ನೇಮಕಾತಿ ವಿಷ್ಯ ಬಂದಾಗ ಅವ್ರ ವಿವಾಹದ ಬಗ್ಗೆ ಕೇಳ್ತವೆ. ಹಾಗೆ ಮಹಿಳೆಯರು ಯಾವಾಗ ಮದುವೆಯಾಗುವ ಪ್ಲಾನ್ ಮಾಡಿದ್ದಾರೆ ಎಂದು ಕೇಳ್ತಾರೆ. ಮಹಿಳಾ ಅಭ್ಯರ್ಥಿಗಳು ಅಂತಹ ಕೆಲವು ಪ್ರಶ್ನೆಗಳನ್ನು ಎದುರಿಸುವುದು ಸಾಮಾನ್ಯವಾಗಿದೆ. ಆದ್ರೆ ಇದು ಮಹಿಳೆಯರಿಗೆ ಇಷ್ಟವಾಗುವುದಿಲ್ಲ. ಪುರುಷರಿಗೆ ಯಾಕೆ ಈ ಪ್ರಶ್ನೆ ಕೇಳುವುದಿಲ್ಲ ಎಂದು ಅನೇಕ ಮಹಿಳೆಯರು ಪ್ರಶ್ನೆ ಮಾಡ್ತಾರೆ. 

Tap to resize

Latest Videos

ಸಮೀಕ್ಷೆಯಲ್ಲಿ ಏನು ಹೊರಬಿತ್ತು : ಭಾರತೀಯ ಕಂಪನಿಗಳು ಇಂದು ಬೆಳವಣಿಗೆಯತ್ತಲೆ   ಸಾಗ್ತಿವೆ. ಅನೇಕ ಕಂಪನಿಗಳು ಈಗ್ಲೂ ಮಹಿಳೆ ನೇಮಕ ವಿಷ್ಯದಲ್ಲಿ ತಾರತಮ್ಯ ಮಾಡ್ತಿವೆ. ಮಹಿಳೆಯರ ಸಂದರ್ಶನದ ಸಂದರ್ಭದಲ್ಲಿ ಮದುವೆ ಆಗಿದ್ಯಾ? ಮದುವೆ ಬಗ್ಗೆ ಪ್ಲಾನ್ ಏನಿದೆ ಎಂಬೆಲ್ಲ ಪ್ರಶ್ನೆಗಳನ್ನು ಕೇಳುತ್ತಾರೆ. ವೈವಾಹಿಕ ಸ್ಥಿತಿ ಹಾಗೂ ವಯಸ್ಸನ್ನು ಆಧಾರ ತೆಗೆದುಕೊಂಡು ಸಿಬ್ಬಂದಿ ನೇಮಕ ಮಾಡಲಾಗುತ್ತದೆ. ಇದು ಆಕೆ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. 

ಕಣ್ಣೀರಿದ್ರೆ ಕೊಡಿ ಪ್ಲೀಸ್‌..! ಐದಾರು ಹನಿಯಿದ್ರೆ ಸಾಕು, ಭರ್ತಿ 19650 ರೂ. ಸಿಗುತ್ತೆ..!

ವಿವಾಹಕ್ಕೆ ಸಂಬಂಧಿಸಿದಂತೆ ಕೇಳುವ ಪ್ರಶ್ನೆಗಳ ಬಗ್ಗೆ ಮಹಿಳೆಯರ ಅಭಿಪ್ರಾಯ ತಿಳಿಯಲು ಸಮೀಕ್ಷೆ ನಡೆದಿದೆ. ಈ ಸಮೀಕ್ಷೆಯಲ್ಲಿ, ನೇಮಕಾತಿ ವೇಳೆ ಕಂಪನಿಗಳು ಮಹಿಳಾ ಅಭ್ಯರ್ಥಿಗಳ  ವೈವಾಹಿಕ ಸ್ಥಿತಿಯ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಾರೆ. ಇದು ಅನ್ಯಾಯವಾಗಿದೆ ಎಂದು 85 ಪ್ರತಿಶತದಷ್ಟು ಮಹಿಳೆಯರು ಒಪ್ಪಿಕೊಂಡಿದ್ದಾರೆ. 

ಆನ್‌ಲೈನ್ ಸಮೀಕ್ಷೆಯ ಪಾಲ್ಗೊಂಡಿದ್ದ 89 ಪ್ರತಿಶತದಷ್ಟು ಜನರು, ಮಹಿಳೆಯಿರಲಿ ಇಲ್ಲ ಪುರುಷನಿರಲಿ, ಮದುವೆಗೂ ಮುನ್ನ ಆರ್ಥಿಕವಾಗಿ ಸದೃಢವಾಗಿರಬೇಕೆಂದು ನಂಬಿದ್ದರು.  ಮತ್ತೊಂದೆಡೆ, ಕೇವಲ 6 ಪ್ರತಿಶತ ಜನರು ಮಾತ್ರ ಪುರುಷರು ಮಾತ್ರ ಮದುವೆಗಿಂತ ಮೊದಲು ಆರ್ಥಿಕವಾಗಿ ಸದೃಢವಾದ್ರೆ ಸಾಕು ಎಂದಿದ್ದರು. ಶೇಕಡಾ 5 ಪ್ರತಿಶತದಷ್ಟು ಜನರು,  ಮಹಿಳೆಯರು ಕೂಡ ಆದಾಯ ಗಳಿಸುವುದು ಮುಖ್ಯ ಎಂದಿದ್ದರು. ಖೂಷಿ ವಿಷ್ಯವೆಂದ್ರೆ ಇತ್ತೀಚಿನ ದಿನಗಳಲ್ಲಿ ಬದಲಾವಣೆ ನಿಧಾನವಾಗಿ ಗೋಚರಿಸುತ್ತಿದೆ. ಮದುವೆಗೆ ಮೊದಲು ಆರ್ಥಿಕ ಸ್ವಾತಂತ್ರ್ಯ ಅಗತ್ಯ ಎಂದು ನಂಬುವ ಯುವ ಉದ್ಯೋಗಿ ವೃತ್ತಿಪರರ ಮನಸ್ಸಿನಲ್ಲಿ ಪ್ರಮುಖ ಬದಲಾವಣೆಯಾಗಿದೆ ಎಂದು ಸಮೀಕ್ಷೆಯು ಸ್ಪಷ್ಟವಾಗಿ ಹೇಳಲಾಗಿದೆ. 

ಹೊಸ ತಾಯಂದಿರಿಗೆ ಪ್ರತಿ ತಿಂಗಳು ₹7000, 26 ವಾರಗಳ ಹೆರಿಗೆ ರಜೆ: ಭಾರ್ತಿ ಏರಟೆಲ್‌

ಸಮೀಕ್ಷೆಯ ಫಲಿತಾಂಶದ ಕುರಿತು ಪ್ರತಿಕ್ರಿಯಿಸಿದ  ತಜ್ಞರು, ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಉನ್ನತ ಸ್ಥಾನಕ್ಕೇರುತ್ತಿದ್ದಾರೆ. ಪರಿಶ್ರಮದಿಂದ ಕೆಲಸ ಮಾಡ್ತಿದ್ದಾರೆ. ಅವರಿಗೆ ಪ್ರೋತ್ಸಾಹ ನೀಡುವುದನ್ನು ಮುಂದುವರೆಸಬೇಕು. ಮದುವೆಯು ಪುರುಷರು ಮತ್ತು ಮಹಿಳೆಯರ ಮೇಲೆ ಪರಿಣಾಮ ಬೀರುತ್ತದೆ. ಪುರುಷರನ್ನು ಸಂದರ್ಶನ ನಡೆಸುವ ಸಂದರ್ಭದಲ್ಲಿ ಇಂತ  ಪ್ರಶ್ನೆಗಳನ್ನು ಕೇಳಿರುವುದಿಲ್ಲ. ಮಹಿಳೆಯರಿಗೆ ಕೂಡ ಇದನ್ನು ಕೇಳಬಾರದು ಎನ್ನುತ್ತಾರೆ. 

ಇತ್ತೀಚಿನ ದಿನಗಳಲ್ಲಿ ಇದ್ರ ಜೊತೆ ಮತ್ತೊಂದು ಸಮಸ್ಯೆ ಶುರುವಾಗಿದೆ. ಮದುವೆ ನಂತ್ರವೂ ಪತಿ –ಪತ್ನಿ ಇಬ್ಬರು ಕೆಲಸ ಮಾಡಲು ಶುರು ಮಾಡ್ತಾರೆ. ಅನೇಕರು ಒಂದೇ ಕಚೇರಿಯಲ್ಲಿ ಕೆಲಸ ಮುಂದುವರೆಸ್ತಾರೆ. ಆದ್ರೆ ಈ ಸಂದರ್ಭದಲ್ಲಿ ಪ್ರೀತಿ ಚಿಗುರುವ ಬದಲು ಕಚೇರಿ ಕೆಲ ಮನೆಗೆ ಬರುತ್ತದೆ. ಇದ್ರಿಂದ ವೈಯಕ್ತಿಕ ಮಾತುಕತೆಗೆ ಅವಕಾಶವಿರುವುದಿಲ್ಲ. ಸದಾ ಜಗಳ ನಡೆಯುತ್ತಿರುತ್ತದೆ. ಪತಿ –ಪತ್ನಿ ಇಬ್ಬರೂ ಗೊಂದಲದ ಮನಸ್ಥಿತಿ ಹಾಗೂ ಅಸ್ಪಷ್ಟ ಸಮಸ್ಯೆಗೆ ಒಳಗಾಗ್ತಿದ್ದಾರೆ ಎಂದು ಸಂಶೋಧಕರು ಹೇಳಿದ್ದಾರೆ.

click me!