-ಆಗಸ್ಟ್ 25 ರಿಂದ ಸೆಪ್ಟೆಂಬರ್ 26 ರ ವರಗೆ ಒಟ್ಟು 339 URLಗಳ ಮೇಲೆ ಕ್ರಮ
-ಭಯೋತ್ಪಾದನೆಯನ್ನು ಉತ್ತೇಜಿಸಿದ್ದಕ್ಕಾಗಿ ಸುಮಾರು 4,800 ಟ್ವಿಟರ್ ಖಾತೆಗಳು ನಿಷ್ಕ್ರಿಯ
-ಲೈಂಗಿಕ ಶೋಷಣೆ ವಿಷಯಕ್ಕೆ ಸಂಬಂಧಿಸಿದ ಪೋಸ್ಟ್‌ಗಳ ಮೇಲೆ ಹದ್ದಿನ ಕಣ್ಣು
ಬೆಂಗಳೂರು (ಅ.14) : ಇತ್ತೀಚೆಗಿನ ವರದಿಯೊಂದರಲ್ಲಿ ತನ್ನ ಗೈಡಲೈನ್ಸ್ ಅನುಸರಿಸದ ಮತ್ತು ಕಾನೂನು ಬಾಹಿರ ಚಟುವಟಿಕೆ ಉತ್ತೇಜಿಸುವ ಖಾತೆಗಳ ಮತ್ತು ಪೋಸ್ಟ್‌ಗಳ ಮೇಲೆ ಕ್ರಮ ಕೈಗೊಳ್ಳಲಾಗಿದೆ ಎಂದು ಟ್ವಿಟರ್ ಇಂಡಿಯಾ ತಿಳಿಸಿದೆ. ಆಗಸ್ಟ್ 25 ರಿಂದ ಸೆಪ್ಟೆಂಬರ್ 26 ರವರಗೆ ಟ್ವೀಟರ್ ಇಂಡಿಯಾ ಒಟ್ಟು 867 ದೂರುಗಳನ್ನು ದಾಖಲಿಸಿಕೊಂಡಿದ್ದು, 339 ಯುಆರ್‌ಎಲ್ ಗಳ (URL)ಮೇಲೆ ಕ್ರಮ ಕೈಗೊಂಡಿದೆ. ನಿಂದನೆ, ಕಿರುಕುಳ, ಮಕ್ಕಳ ಮೇಲೆ ಲೈಂಗಿಕ ಶೋಷಣೆ, ಮಾನನಷ್ಟ , ಕಾನೂನುಬಾಹಿರ ಚಟುವಟಿಕೆಗಳು ಸೇರಿದಂತೆ ಇನ್ನೂ ಹಲವಾರು ವಿಷಯಗಳಿಗೆ ಸಂಬಂಧಿಸಿದಂತೆ ದೂರು ದಾಖಲಾಗಿವೆ. ಜತೆಗೆ ವಿವಿಧ ಬಳಕೆದಾರರ ಟ್ವಿಟರ್ ಖಾತೆಗಳನ್ನು ಅಮಾನತುಗೊಳಿಸುವಂತೆ 65 ದೂರುಗಳು ದಾಖಲಾಗಿದ್ದು ಟ್ವೀಟರ್ ಸಂಸ್ಥೆಯು ಎಲ್ಲ ದೂರುದಾರರಿಗೆ ಸೂಕ್ತ ಪ್ರತಿಕ್ರಿಯೆ ನೀಡಿದೆ. ಟ್ವೀಟರ್ ಇಂಡಿಯಾ ಒಟ್ಟು 10 ಖಾತೆಗಳನ್ನು ನಿಷ್ಕ್ರಿಯಗೊಳಿಸಿದ್ದು ಇತರ ಖಾತೆಗಳನ್ನು ಅಮಾನತು ಮಾಡಿದೆ. ಟ್ವೀಟರ್ ಬಗೆಗಿನ ಸಾಮನ್ಯ ವಿಷಯಗಳ ಬಗ್ಗೆ ಒಟ್ಟು 44 ಮನವಿಗಳನ್ನು ಸ್ವೀಕರಿಸಿತ್ತು ಎಂದು ಟ್ವಿಟರ್ ತನ್ನ ವರದಿಯಲ್ಲಿ ತಿಳಿಸಿದೆ.
undefined
ಗೂಗಲ್ ಪ್ಲೇಸ್ಟೋರ್‌ನಲ್ಲಿ ಜೈಷ್ ಉಗ್ರರ ಆ್ಯಪ್!
ಜುಲೈ 26 ರಿಂದ ಅಗಸ್ಟ್ 26 ರ ವರೆಗೆ ಟ್ವಿಟರ್ ಒಟ್ಟು 1,445 ಯುಆರ್‌ಎಲ್ ವಿರುದ್ಧ ದೂರುಗಳನ್ನು ದಾಖಲಿಸಿಕೊಂಡಿತ್ತು ಮತ್ತು ಅವುಗಳಲ್ಲಿ ಒಟ್ಟು 519 ಯುಆರ್‌ಎಲ್ ಗಳ ಮೇಲೆ ಕ್ರಮ ಕೈಗೊಂಡಿತ್ತು. ದಾಖಲಾದಂತಹ ದೂರುಗಳಲ್ಲಿ ಬಹುತೇಕ ದೂರುಗಳು ಫೇಕ್ ಖಾತೆಗೆ ಸಂಬಂಧಪಟ್ಟ ದೂರುಗಳಾಗಿದ್ದವು. ಈ ಅವಧಿಯಲ್ಲಿ ಟ್ವೀಟರ್, ಬಳಕೆದಾರರ 6 ಖಾತೆಗಳನ್ನು ಕೂಡ ನಿಷ್ಕ್ರಿಯಗೊಳಿಸಿತ್ತು. ಭಯೋತ್ಪಾದನೆಯನ್ನು(Terrorism) ಉತ್ತೇಜಿಸುವ ಮತ್ತು ಮಕ್ಕಳ ಮೇಲಿನ ಲೈಂಗಿಕ ಶೋಷಣೆ ವಿಷಯಕ್ಕೆ ಸಂಬಂಧಿಸಿದ ಪೋಸ್ಟ್ ಮತ್ತು ಖಾತೆಗಳ ಮೇಲೆ ಹದ್ದಿನ ಕಣ್ಣು ಇಡಲಾಗಿದೆ ಎಂದು ಟ್ವಿಟರ್ ಇತ್ತೀಚೆಗೆ ನೀಡಿರುವ ವರದಿಯಲ್ಲಿ ತಿಳಿಸಿದೆ. ಮಕ್ಕಳ ಮೇಲಿನ ಲೈಂಗಿಕ ಶೋಷಣೆ ಸಂಬಂಧಿಸಿದ ಒಟ್ಟು 25,000 ಖಾತೆಗಳನ್ನು ಹಾಗೂ ಭಯೋತ್ಪಾದನೆಯನ್ನು ಉತ್ತೇಜಿಸಿದ್ದಕ್ಕಾಗಿ ಸುಮಾರು 4,800 ಖಾತೆಗಳನ್ನು ಜಗತ್ತಿನಾದ್ಯಂತ ನಿಷ್ಕ್ರಿಯಗೊಳಿಸಲಾಗಿದೆ ಎಂದು ಟ್ವೀಟರ್ ತಿಳಿಸಿದೆ.
ಸುಲಭ ಬಿಲ್ ಪೇಮೆಂಟಿಗಾಗಿ PhonePeಯಿಂದ ಕ್ಲಿಕ್ ಪೇ, ಭಾರತದಲ್ಲಿ ಮತ್ತೊಂದು ಕ್ರಾಂತಿ!
ಜಗತ್ತಿನಾದ್ಯಂತ ಅಂತರ್ಜಾಲ (Internet)ಬಳಕೆದಾರರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಭಾರತದಲ್ಲಿ ಮುಂದಿನ ಐದು ವರ್ಷಗಳಲ್ಲಿ ಅಂತರ್ಜಾಲ ಬಳಕೆದಾರರ ಸಂಖ್ಯೆ ಶೇಕಡಾ 45 ರಷ್ಟು ಹೆಚ್ಚಾಗಲಿದೆ. 2020ರ ಹೊತ್ತಿಗೆ 622 ಮಿಲಿಯನ್ ಇಂಟರ್‌ನೆಟ್ ಬಳಕೆದಾರರಿದ್ದು 2025ರ ಹೊತ್ತಿಗೆ ಈ ಸಂಖ್ಯೆಯೂ 900 ಮಿಲಿಯನ್ ತಲುಪಲಿದೆ ಎಂದು IAMAI-Kantar ICUBE 2020 ವರದಿ ತಿಳಿಸಿದೆ. ಅಂತರ್ಜಾಲ ಬಳಕೆದಾರರಲ್ಲಿ ಸಾಮಾಜಿಕ ಜಾಲತಾಣಗಳನ್ನು (Social Media)ಬಳಸುವವರ ಸಂಖ್ಯೆ ಕೂಡ ಸಾಕಷ್ಟಿದ್ದು, ಸಾಮಾಜಿಕ ಜಾಲತಾಣಗಳು ಮಾನವನ ಜೀವನ ಶೈಲಿಯ ಭಾಗಗಳೇ ಆಗಿವೆ. ಫೇಸ್‌ಬುಕ್(Facebook), ಟ್ವಿಟರ್(Twitter), ಇನ್ಸ್ಟಾಗ್ರಾಮ್(Instagraam) ನಂತಹ ಸಾಮಾಜಿಕ ಜಾಲತಾಣಗಳು ಜನರಿಗೆ ತಮ್ಮ ವೈಯುಕ್ತಿಕ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಮುಕ್ತ ವೇದಿಕೆಯನ್ನು ನೀಡುತ್ತವೆ. ಸಾಮಾಜಿಕ ಜಾಲತಾಣಗಳನ್ನು ಜನರು ವಿವಧ ಕಾರಣಗಳಿಗಾಗಿ ಬಳಸುತ್ತಾರೆ. ಕೆಲವರು ಕೇವಲ ಮನರಂಜನೆಗಾಗಿ ಬಳಸಿದರೆ ಇನ್ನೂ ಕೆಲವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಬಳಸುತ್ತಾರೆ. ಪ್ರತಿಯೊಂದು ಸಾಮಾಜಿಕ ಜಾಲತಾಣ ಅಪ್ಲಿಕೇಶನ್‌ಗಳಿಗೆ ತಮ್ಮದೇ ಆದ ನಿಯಮಾವಳಿಗಳಿವೆ. ಬಳಕೆದಾರರು ಈ ನಿಯಮಾವಳಿಗಳನ್ನು ವಿರುದ್ಧವಾಗಿ ಜಾಲತಾಣಗಳನ್ನು ಬಳಸಿದರೆ, ಸಂಸ್ಥೆಗಳು ಬಳಕೆದಾರರ ವಿರುದ್ಧ ಕ್ರಮ ಕೈಗೊಳ್ಳುತ್ತವೆ. ಫೆಬ್ರವರಿ ತಿಂಗಳಿನಲ್ಲಿ ಭಾರತ ಸರ್ಕಾರ ಸಾಮಾಜಿಕ ಜಾಲತಾಣ ಕಂಪನಿಗಳಿಗಳಿಗೆ ಸರ್ಕಾರ ಹೊರಡಿಸಿರುವ ವಿವಿಧ ಮಾರ್ಗಸೂಚಿಗಳನ್ನು ಅನುಸರಿಸುವಂತೆ ಎಚ್ಚರಿಕೆ ನೀಡಿತ್ತು ಅಲ್ಲದೇ ಈ ನಿಟ್ಟಿನಲ್ಲಿ ಹೊಸ ಮಾರ್ಗಸೂಚಿಗಳನ್ನು ಕೂಡ ಹೊರಡಿಸಿತ್ತು.
Dream11, ದೇಶದ ನಂ.1 ಗೇಮಿಂಗ್ ಆ್ಯಪ್ ಇನ್ನು ಕರ್ನಾಟಕದಲ್ಲಿ ಬಂದ್!