Woman

ಅಂಟು ಅಂಟಾದ ಅಡುಗೆಮನೆ ಕಿಟಕಿ? ಈ ಟ್ರಿಕ್ ಬಳಸಿ!

ಅಡುಗೆ ಮನೆಯ ಗೋಡೆ ಕಿಟಕಿಗಳು ಹೊಗೆ ಹಾಗೂ ಎಣ್ಣೆ ಜಿಡ್ಡಿನಿಂದಾಗಿ ಅಂಟು ಅಂಟಾಗುತ್ತದೆ. ಆದರೆ ಇದೊಂದು ಸುಲಭ ವಿಧಾನದಿಂದ ಹೀಗೆ ಅಂಟು ಅಂಟಾದ ಕಿಚನ್‌ಗೆ ಮುಕ್ತಿ ನೀಡ್ಬಹುದು

ಕಿಟಕಿ ಸ್ವಚ್ಛಗೊಳಿಸಲು ಬೇಕಾದ ಸಾಮಗ್ರಿಗಳು

ಕಾಸ್ಟಿಕ್ ಸೋಡಾ (ಸೋಡಿಯಂ ಹೈಡ್ರಾಕ್ಸೈಡ್) - 1 ಕಪ್, ಬಿಸಿ ನೀರು 4 ರಿಂದ 5 ಕಪ್, ಕೈಗವಸುಗಳು - 1 ಜೋಡಿ ಸ್ವಚ್ಛಗೊಳಿಸುವ ಬ್ರಷ್ ಅಥವಾ ಸ್ಪಂಜ್ - 1 ನೀರು ತುಂಬಿದ ಬಕೆಟ್ - 1 ಅಡುಗೆಮನೆ ಟವೆಲ್ - 1

ಕಿಟಕಿ ಸ್ವಚ್ಛಗೊಳಿಸುವ ವಿಧಾನ

ಮೊದಲು ಕೈಗವಸುಗಳನ್ನು ಧರಿಸಿ ಮತ್ತು ಕೈಗಳನ್ನುತಾಗದಂತೆ ನೋಡಿಕೊಳ್ಳಿ. ಏಕೆಂದರೆ ಕಾಸ್ಟಿಕ್ ಸೋಡಾ  ಖಾರವಾಗಿದ್ದು,, ಅದು ಕೈಗಳಿಗೆ ತಾಗಿದರೆ ಚರ್ಮವನ್ನು ಉರಿಯುವಂತೆ ಮಾಡುತ್ತದೆ.

ದ್ರಾವಣ ತಯಾರಿಸಿ

1 ದೊಡ್ಡ ಪಾತ್ರೆಯಲ್ಲಿ 1 ಕಪ್ ಕಾಸ್ಟಿಕ್ ಸೋಡಾ ಹಾಕಿ ಅದಕ್ಕೆ 4 ರಿಂದ 5 ಕಪ್ ಬಿಸಿ ನೀರು ಹಾಕಿ. ಇದನ್ನು ನಿಧಾನವಾಗಿ ಮಿಕ್ಸ್‌ ಮಾಡಿ ಇದರಿಂದ ದ್ರಾವಣ ತಣ್ಣಗಾಗುವುದಿಲ್ಲ ಕಾಸ್ಟಿಕ್ ಸೋಡಾ ಸಂಪೂರ್ಣವಾಗಿ ಕರಗುತ್ತದೆ.

ಕಿಟಕಿಯ ಮೇಲ್ಮೈಯನ್ನು ನೆನೆಸಿ

ಈಗ ಸ್ವಚ್ಛಗೊಳಿಸುವ ಬ್ರಷ್ ಅಥವಾ ಸ್ಪಂಜನ್ನು ಕಾಸ್ಟಿಕ್ ಸೋಡಾ ದ್ರಾವಣದಲ್ಲಿ ಅದ್ದಿ ಕಿಟಕಿಯ ಅಂಟು ಅಂಟಾದ ಮೇಲ್ಮೈಗೆ ಹಚ್ಚಿ.

ಕಿಟಕಿಯನ್ನು ಉಜ್ಜಿ

ದ್ರಾವಣವನ್ನು ಕಿಟಕಿಗೆ ಹಚ್ಚಿ ಲಘುವಾಗಿ ಉಜ್ಜಿ. ಉಜ್ಜಿದ ನಂತರ ನೀರಿನಿಂದ ಕಿಟಕಿಯನ್ನು ಚೆನ್ನಾಗಿ ತೊಳೆಯಿರಿ ಇದರಿಂದ ಕಿಟಕಿಗೆ ಅಂಟಿದ ಕಲೆಗಳು, ಅಂಟು ಸಂಪೂರ್ಣವಾಗಿ ಸ್ವಚ್ಛವಾಗುತ್ತದೆ.

ಕಿಟಕಿಯನ್ನು ಒರೆಸಿ

ಈಗ ಅಡುಗೆಮನೆ ಟವೆಲ್ ಬಳಸಿ ಕಿಟಕಿಯನ್ನು ಒರೆಸಿ ಮತ್ತು ಕಿಟಕಿ ಮೇಲೆ ನೀರು ಅಥವಾ ದ್ರಾವಣ ಉಳಿದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ. ಕಾಸ್ಟಿಕ್ ಸೋಡಾ ದ್ರಾವಣದಿಂದ ನಿಮ್ಮ ಕಿಟಕಿ ಮತ್ತೆ ಹೊಳೆಯುತ್ತದೆ.

Find Next One