Small Screen
ಒಂದು ಹತ್ತು ವರ್ಷಗಳ ಹಿಂದೆ ಜ್ಯೋತಿ ರೈ ಯಾರು ಅಂತ ಕೇಳಿದ್ರೆ, ಸೀರೆ, ಸಲ್ವಾರ್ ಧರಿಸಿ, ಕಷ್ಟಗಳ ಮೇಲೆ ಕಷ್ಟಗಳನ್ನು ಅನುಭವಿಸಿದ ಸೀರಿಯಲ್ ನಾಯಕಿ ಮಾತ್ರ ಆಗಿದ್ದವರು.
ಈಗ ಹೇಳೋದೇ ಬೇಡ, ತೆಲುಗು ಸಿನಿಮಾ, ವೆಬ್ ಸೀರಿಸ್ ಎನ್ನುತ್ತಾ, ಸಿಕ್ಕಾಪಟ್ಟೆ ಬದಲಾಗಿ ನಾವು ಅಂದು ನೋಡಿದ್ದ ಜ್ಯೋತಿ ರೈ ಇವರೇನಾ ಎನ್ನುವಷ್ಟು ಬದಲಾಗಿದ್ದಾರೆ.
ಸೀರಿಯಲ್ ನಾಯಕಿಯಾಗಿದ್ದಾಗ ಅಷ್ಟಾಗಿ ಸದ್ದು ಮಾಡದ ಬೆಡಗಿ, ಈವಾಗ ಏನ್ ಮಾಡಿದ್ರೂ ಕೂಡ ಸುದ್ದಿಯಲ್ಲಿರುತ್ತಾರೆ. ಇವರು ಸೀರೆಯುಟ್ಟು ಪೋಸ್ ಕೊಟ್ರು ಸುದ್ದಿಯಾಗುತ್ತೆ.
ಜ್ಯೋತಿ ರೈ ಹೆಸರು ಹಚ್ಚು ಸುದ್ದಿಯಲ್ಲಿರಲು ಮುಖ್ಯ ಕಾರಣ ಅವರ ಬೋಲ್ಡ್ ನೆಸ್. ಇದ್ದಕ್ಕಿದ್ದಂತೆ, ನಟಿ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಕಾಣಿಸಿಕೊಂಡು ಸುದ್ದಿ ಮಾಡಿದ್ದರು.
ತೆಲುಗು ನಿರ್ದೇಶಕ ಪೂರ್ವಜ್ ಜೊತೆ ಮದುವೆ ಬಳಿಕ ವೆಬ್ ಸೀರೀಸ್ ಗಳಲ್ಲಿ ಕೂಡ ತನ್ನ ಬೋಲ್ಡ್ ನೆಸ್ ತೋರಿಸತೊಡಗಿದ್ದರು. ಜ್ಯೋತಿ ರೈ ಇಷ್ಟೊಂದು ಬದಲಾದ್ರ ಎಂದು ಜನ ಕೇಳುವಷ್ಟು ಬೋಲ್ಡ್ ಆದ್ರು ನಟಿ.
ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ನಟಿ ದಿನಕ್ಕೊಂದು ಫೋಟೊ ಶೇರ್ ಮಾಡುತ್ತಾ, ತಮ್ಮ ಮಾಡರ್ನ್, ಟ್ರೆಡಿಶನಲ್ ಲುಕ್ ಮೂಲಕ ವೈರಲ್ ಆಗುತ್ತಲೇ ಇರುತ್ತಾರೆ.
ಇದೀಗ ಜ್ಯೋತಿ ರೈ ಕೆಂಪು ಬಾರ್ಡರ್ ಇರುವ ನೀಲಿ ಬಣ್ಣದ ಸೀರೆಯುಟ್ಟು, ಅದಕ್ಕೆ ಕೆಂಪು ಬಣ್ಣದ ಬ್ಲೌಸ್ ಧರಿಸಿ ಪೋಸ್ ಕೊಟ್ಟಿದ್ದು ಮುದ್ದಾಗಿ ಕಾಣಿಸ್ತಿದ್ದಾರೆ.
ಸೀರೆಯಲ್ಲೂ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುವ ಜ್ಯೋತಿ ರೈಯನ್ನು ನೋಡಿ ಅಭಿಮಾನಿಗಳು ಮಾಡರ್ನ್ ಮಹಾಲಕ್ಷ್ಮೀ ಎನ್ನುತ್ತಿದ್ದಾರೆ.