Small Screen
ಗೀತಾ ಸೀರಿಯಲ್ ಮೂಲಕ ಗೀತಾ ಆಗಿ ಕನ್ನಡಿಗರ ಮನ ಗೆದ್ದ ಬೆಡಗಿ ಭವ್ಯಾ ಗೌಡ.
ಬಿಗ್ ಬಾಸ್ ಸೀಸನ್ 11 ರಲ್ಲಿ ಸ್ಪರ್ಧಿಸುವ ಮೂಲಕ ಮತ್ತಷ್ಟು ಜನಪ್ರಿಯತೆ ಪಡೆದರು.
ಭವ್ಯಾ ಗೌಡ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದು, ದಿನಕ್ಕೊಂದು ಫೋಟೊ ಶೇರ್ ಮಾಡುವ ಮೂಲಕ ಅಭಿಮಾನಿಗಳ ಕಣ್ಣಿಗೆ ಹಬ್ಬ ನೀಡುತ್ತಾರೆ.
ಕಿರುತೆರೆ ನಟಿ ಭವ್ಯಾ ಗೌಡ ತಿಳಿ ಬಣ್ಣದ ಸಿಲ್ಕ್ ಸೀರೆಯುಟ್ಟು ಮಿಂಚುತ್ತಿದ್ದಾರೆ. ಫೋಟೋ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.
ಭವ್ಯಾ ಗೌಡ ಪೀಚ್ ಬಣ್ಣದ ಸೀರೆ ಬ್ಲೌಸ್ ಧರಿಸಿದ್ದು, ಅದಕ್ಕೆ ಕಾಂಟ್ರಾಸ್ಟ್ ಆಗಿರುವ ಹಸಿರು ಬಣ್ಣದ ಪರ್ಲ್ ಹಾರ, ದೊಡ್ಡದಾದ ಜುಮುಕಿ, ಅದಕ್ಕೆ ಮ್ಯಾಚ್ ಆಗುವ ಬಳೆ, ಸೊಂಟದ ಪಟ್ಟಿ ಧರಿಸಿದ್ದಾರೆ.
ತಮ್ಮ ಫೋಟೊಗಳ ಜೊತೆಗೆ ಭವ್ಯಾ ಗೌಡ ಯಾರೇ ನೀನು ಪಾರಿವಾಳ ಯಾರೆ ನೀನು ಯಾಕೆ ಇಷ್ಟು ಇಷ್ಟ ಆದೆ ನಂಗೆ ನೀನು ಹಾಡು ಹಾಕಿದ್ದಾರೆ.
ಫ್ಯಾನ್ಸು ಭವ್ಯಾ ಗೌಡ ಫೋಟೊ ಹಾಗೂ ಹಾಡು ಕೇಳಿ, ಈ ಪಾರಿವಾಳ ಅಂದ್ರೆ ಎಲ್ಲರಿಗೂ ಸಿಕ್ಕಾಪಟ್ಟೆ ಇಷ್ಟ ಎಂದಿದ್ದಾರೆ.
ಭವ್ಯಾ ಗೌಡ ನಗುವಿಗೆ ಮಾರು ಹೋದ ಒಬ್ಬ ಅಭಿಮಾನಿ ನೋವನ್ನು ಮರೆಸುವ ನಿನ್ನ ನಗು ಯಾವಾಗಲೂ ಹೀಗೆ ಇರಲಿ ಎಂದು ಹಾರೈಸಿದ್ದಾರೆ.
ಇನ್ನೊಬ್ಬರು ಅಂದದ ಬೊಂಬೆಗೆ... ಗಂಧದ ಶೃಂಗಾರ, ಅಪ್ಸರೆ, ಸಿಂಪಲ್ ಬ್ಯೂಟಿ, ದೇವತೆ, ಗಾರ್ಜಿಯಸ್ ಎಂದಿದ್ದಾರೆ.
ಬಿಗ್ ಬಾಸ್ ನಿಂದ ಬಂದು ತಿಂಗಳು ಕಳೆದರೂ ಸಹ ಭವ್ಯಾ ಗೌಡ ನಟನೆಯ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.
ಕನ್ನಡದಲ್ಲಿ ಭರ್ಜರಿ ಬ್ಯಾಚುಲರ್ ಹಾಗೂ ಬಾಯ್ಸ್ ವರ್ಸಸ್ ಗರ್ಲ್ಸ್ ಎನ್ನುವ ಎರಡು ರಿಯಾಲಿಟಿ ಶೋಗಳು ನಡೆಯುತ್ತಿದ್ದು, ಎರಡರಲ್ಲೂ ಭವ್ಯಾ ಸ್ಪರ್ಧಿಸಿಲ್ಲ.
ಝೀ ಕನ್ನಡದಲ್ಲಿ ಪ್ರಸಾರವಾಗಲಿರುವ ಕನ್ನಡತಿ ಖ್ಯಾತಿಯ ಕಿರಣ್ ರಾಜ್ ನಟಿಸಲಿರುವ ಕರ್ಣ ಧಾರಾವಾಹಿಯಲ್ಲಿ ಭವ್ಯಾ ಗೌಡ ನಾಯಕಿ ಎನ್ನುವ ಸುದ್ದಿ ಕೇಳಿ ಬರುತ್ತಿದೆ.
ಸದ್ಯಕ್ಕಂತೂ ಭವ್ಯಾ ಗೌಡ ಟ್ರಾವೆಲ್ ಮಾಡ್ತಿದ್ದಾರೆ. ಇತ್ತೀಚೆಗೆ ನಟಿ ಕಾಫಿ ಹೂವುಗಳ ನಡುವೆ ನಿಂತು ಪೋಸ್ ಕೊಟ್ಟಿದ್ದರು, ಅಂದ್ರೆ ಚಿಕ್ಕಮಗಳೂರಲ್ಲಿ ಎಂಜಾಯ್ ಮಾಡ್ತಿದ್ದಾರೆ ಅನ್ಸತ್ತೆ.