Sports

ವಿಶ್ವದ ಅತ್ಯಂತ ಕಿರಿಯ ಚೆಸ್ ಚಾಂಪಿಯನ್

ಭಾರತೀಯ ಗ್ರ್ಯಾಂಡ್ ಮಾಸ್ಟರ್ ಡಿ. ಗುಕೇಶ್ ಅವರು ವಿಶ್ವ ಚೆಸ್ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಗುಕೇಶ್, ತಮಿಳುನಾಡಿನ ಚೆನ್ನೈನವರು.

ಇದುವರೆಗಿನ ಅತ್ಯಂತ ಕಿರಿಯ ಚಾಂಪಿಯನ್

ಡಿ. ಗುಕೇಶ್ ವಿಶ್ವದ ಇದುವರೆಗಿನ ಅತ್ಯಂತ ಕಿರಿಯ ವಿಶ್ವ ಚಾಂಪಿಯನ್.

ಡಿಂಗ್‌ ಲಿರೆನ್‌ ವಿರುದ್ಧ ಜಯ

ಭಾರತೀಯ ಗ್ರ್ಯಾಂಡ್‌ಮಾಸ್ಟರ್ ಡಿ. ಗುಕೇಶ್ ಅವರು ಸಿಂಗಾಪುರದಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್ ಈ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಅವರು ಚೀನಾದ ಡಿಂಗ್ ಲಿರೆನ್ ಅವರನ್ನು ಸೋಲಿಸಿದ್ದಾರೆ.

18ನೇ ವಯಸ್ಸಿನಲ್ಲಿಯೇ ವಿಶ್ವದಾಖಲೆ

ವಿಶ್ವ ಚಾಂಪಿಯನ್ ಆದ ಡಿ. ಗುಕೇಶ್ ಅವರ ವಯಸ್ಸು 18 ವರ್ಷ 8 ತಿಂಗಳು 14 ದಿನಗಳು. ತಂದೆ ಡಾ. ರಜನಿಕಾಂತ್ ಇಎನ್‌ಟಿ ಸರ್ಜನ್ ಮತ್ತು ತಾಯಿ ಪದ್ಮ ಮೈಕ್ರೋಬಯಾಲಜಿಸ್ಟ್.

ಗ್ಯಾರಿ ಕ್ಯಾಸ್ಪರೋವ್ ದಾಖಲೆ ಭಗ್ನ

ಡಿ. ಗುಕೇಶ್ ಅವರು ವಿಶ್ವ ಚಾಂಪಿಯನ್ ಗ್ಯಾರಿ ಕ್ಯಾಸ್ಪರೋವ್ ಅವರ ದಾಖಲೆಯನ್ನು ಮುರಿದಿದ್ದಾರೆ. ಇದುವರೆಗಿನ ಅತ್ಯಂತ ಕಿರಿಯ ವಿಶ್ವ ಚಾಂಪಿಯನ್ ಕ್ಯಾಸ್ಪರೋವ್ ಆಗಿದ್ದರು.

ಹಲವು ದಶಕಗಳ ಹಿಂದೆ ಕ್ಯಾಸ್ಪರೋವ್ ದಾಖಲೆ

ಗ್ಯಾರಿ ಕ್ಯಾಸ್ಪರೋವ್ 22 ವರ್ಷ 6 ತಿಂಗಳು 27 ದಿನಗಳ ವಯಸ್ಸಿನಲ್ಲಿ ವಿಶ್ವ ಚಾಂಪಿಯನ್ ಆಗಿದ್ದರು.

ವಿಶ್ವ ಚಾಂಪಿಯನ್ ಆದ ಎರಡನೇ ಭಾರತೀಯ

ಭಾರತದ ಎರಡನೇ ವಿಶ್ವ ಚಾಂಪಿಯನ್ ಆಗುವ ಹೆಗ್ಗಳಿಕೆ ಡಿ. ಗುಕೇಶ್ ಅವರಿಗೆ ಸಂದಿದೆ. ಗುಕೇಶ್ ಜೊತೆಗೆ ವಿಶ್ವನಾಥನ್ ಆನಂದ್ ವಿಶ್ವ ಚೆಸ್ ಚಾಂಪಿಯನ್ ಆಗಿದ್ದರು.

ಐದು ಬಾರಿ ವಿಶ್ವ ಚಾಂಪಿಯನ್ ಆನಂದ್

ವಿಶ್ವನಾಥನ್ ಆನಂದ್ 5 ಬಾರಿ ವಿಶ್ವ ಚಾಂಪಿಯನ್ ಆಗಿದ್ದಾರೆ. ಅವರು 2013 ರಲ್ಲಿ ಕೊನೆಯ ಬಾರಿಗೆ ವಿಶ್ವ ಚೆಸ್ ಚಾಂಪಿಯನ್ ಆಗಿದ್ದರು.

ದಿಗ್ಗಜ ಕ್ರಿಕೆಟರ್ಸ್ ಬಳಸುತ್ತಿದ್ದ ಬ್ಯಾಟ್ ತೂಕ; ಭಾರದ ಬ್ಯಾಟ್ ಸಚಿನ್ ಅವರದ್ದಲ್ಲ

ದಿನಕ್ಕೆ ಒಂದೆರಡು ಬೇವಿನ ಎಲೆ ತಿಂದ್ರೆ ಸಿಗುತ್ತೆ ಉತ್ತಮ ಆರೋಗ್ಯ

ಆರ್ಥಿಕ ಸಂಕಷ್ಟದಲ್ಲಿರೋ ವಿನೋದ್‌ ಕಾಂಬ್ಳಿಗೆ ಬಿಸಿಸಿಐ ನೀಡ್ತಿರೋ ಪಿಂಚಣಿ ಎಷ್ಟು?

ಶಾರ್ದೂಲ್ ಠಾಕೂರ್ ಪತ್ನಿ ಸೌಂದರ್ಯದ ಮುಂದೆ ಬಾಲಿವುಡ್ ನಟಿಯರು ಡಮ್ಮಿ!