relationship

ಪ್ಲೆಷರ್ ಮ್ಯಾರೇಜ್‌ನ ಟ್ರೆಂಡ್, 4 ದಿನಗಳ ನಂತರ ವಿಚ್ಛೇದನ

ಸುಖಕ್ಕಾಗಿ ಮಾಡಿಕೊಳ್ಳುವ ಮದುವೆಯೇ ಪ್ಲೆಷರ್ ಮ್ಯಾರೇಜ್. ಬೇಡ ಅಂದಾಗ ದುಡ್ಡು ಕೊಟ್ಟು ಬಿಟ್ಟು ಹೋಗಬಹುದು ಇಲ್ಲಿ.

ತ್ರಿವಳಿ ತಲಾಖ್ ನಿಷೇಧ

ಭಾರತದಲ್ಲಿ ವಿವಾಹ ಅತ್ಯಂತ ಪವಿತ್ರ ಬಂಧ. ವಿಚ್ಛೇದನವನ್ನು ಅತ್ಯಂತ ಪ್ರತಿಕೂಲ ಸಂದರ್ಭಗಳಲ್ಲಿ ಮಾತ್ರ ನೀಡಲಾಗುತ್ತದೆ. ಮೋದಿ ಸರ್ಕಾರವು ಮುಸ್ಲಿಮರಲ್ಲಿ ತ್ರಿವಳಿ ತಲಾಖ್ ನಿಷೇಧಿಸಿದೆ. 

ವಿವಾಹಕ್ಕೆ ನಾಲ್ಕು ದಿನ ಆಯಸ್ಸು

ವಿಶ್ವದ ಹಲವು ದೇಶಗಳಲ್ಲಿ ತಾತ್ಕಾಲಿಕ ವಿವಾಹ ಪದ್ಧತಿ ಇದೆ. ಇಂಡೋನೇಷ್ಯಾದ ಪುಂಚಕ್ ಎಂಬ ಗಿರಿಧಾಮದಲ್ಲಿ ಪ್ಲೆಷರ್ ಮ್ಯಾರೇಜ್‌ ಯಾವುದೇ ಅಡೆ ತಡೆ ಇಲ್ಲದೇ ನಡೆಯುತ್ತೆ.

ಮಹಿಳೆೆಯರ ಅಭ್ಯಂತರ ಇಲ್ಲ

ಪುಂಚಕ್ ಪ್ರವಾಸಿಗರ ನೆಚ್ಚಿನ ತಾಣ. ಸೌದಿ ಅರೇಬಿಯಾದ ಶೇಖ್‌ಗಳು ಇಲ್ಲಿಗೆ ಭೇಟಿ ನೀಡುತ್ತಾರೆ. ಆನಂದಕ್ಕಾಗಿ ವಿವಾಹವಾಗಿ ವಿಚ್ಛೇದನ ನೀಡಿ ತಮ್ಮ ದೇಶಕ್ಕೆ ಹಿಂದಿರುಗುತ್ತಾರೆ.

ತಾತ್ಕಾಲಿಕ ವಿವಾಹ ಟ್ರೆಂಡಿಂಗ್

ಕೋಟಾ ಬುಂಗಾ ಪುಂಚಕ್‌ನ ವಿಶೇಷ ಪ್ರದೇಶವಾಗಿದ್ದು, ಇಲ್ಲಿ ಸೌದಿ ಅರೇಬಿಯಾದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಾರೆ. ಇಲ್ಲಿ ತಾತ್ಕಾಲಿಕ ವಿವಾಹವೂ ಕಾಮನ್. 

ವಿಚ್ಛೇದಿತ ಮಹಿಳೆಯರ ಗ್ರಾಮ

ಪ್ಲೆಷರ್ ಮ್ಯಾರೇಜ್ ಇಲ್ಲಿ ಸಾಮಾನ್ಯ. ಪ್ರತಿ ಎರಡನೇ ಮನೆಯಲ್ಲಿ ವಿಚ್ಛೇದಿತ ಮಹಿಳೆ ಕಂಡು ಬರುತ್ತಾಳೆ. ಇದೇ ಕಾರಣಕ್ಕೆ ಸ್ಥಳೀಯರು ಇದನ್ನು ವಿಚ್ಛೇದಿತರ ಗ್ರಾಮ ಎಂದು ಕರೆಯುತ್ತಾರೆ.

ಮುತಾಹ್ ವಿವಾಹಕ್ಕೆ ಅನುಮತಿ

ಇಂಡೋನೇಷ್ಯಾದಲ್ಲಿ ಮುತಾಹ್ ವಿವಾಹವು ಒಂದು ವ್ಯಾಪಾರ. ಇದರಲ್ಲಿ ಸರ್ಕಾರಿ ಅಧಿಕಾರಿಗಳ ಕೈವಾಡವೂ ಇದೆ. ಹುಡುಗಿಯರನ್ನು ಬಲೆಗೆ ಬೀಳಿಸಲು ಮತ್ತು ಈ ವ್ಯಾಪಾರಕ್ಕೆ ತಳ್ಳಲು ದೊಡ್ಡ ಜಾಲವೇ ಇದೆ.

ಹಣಕ್ಕಾಗಿ ಹೆಣ್ಣಿನ ವ್ಯಾಪಾರ

ಸ್ಥಳೀಯರ ಪ್ರಕಾರ, ಮೊದಲು ಹುಡುಗಿಯರ ಕುಟುಂಬ ಸದಸ್ಯರೇ ಈ ರೀತಿ ಹೆಣ್ಣು ಮಕ್ಕಳ ವಿವಾಹ ಮಾಡುತ್ತಿದ್ದರು, ಆದರೆ ಈಗ ಇದು ಸಂಪೂರ್ಣ ವ್ಯಾಪಾರ ಜಾಲವಾಗಿ ಮಾರ್ಪಟ್ಟಿದೆ.

Find Next One