Lifestyle
ʼಮಿಸ್ ದಿವಾ 2024’ ಸ್ಪರ್ಧೆಯಲ್ಲಿ ಹಾಸನದ ಸೌಂದರ್ಯ ಗೌಡ ಭಾಗವಹಿಸಿದ್ದರು. ಆ ವೇಳೆ ಅವರಿಗೆ ಪ್ರಶ್ನೆಯೊಂದನ್ನು ಕೇಳಲಾಗಿತ್ತು.
ಸೌಂದರ್ಯ ಗೌಡ ನೀಡಿದ ಉತ್ತರಕ್ಕೆ ಅಲ್ಲಿದ್ದವರೆಲ್ಲ ಚಪ್ಪಾಳೆ ಹೊಡೆದಿದ್ದಾರೆ.
“ಮಹಿಳೆಯು ಸಮಾಜದಲ್ಲಿ ಅಥವಾ ಸಂಗಾತಿಯ ಜೊತೆಗಿದ್ದಾಗಲೂ ಕೂಡ ಆರ್ಥಿಕ ಸ್ವಾತಂತ್ರ್ಯ ಹೊಂದಿರೋದು ಎಷ್ಟು ಅಗತ್ಯ?” ಎಂದು ಸೌಂದರ್ಯ ಅವರಿಗೆ ಪ್ರಶ್ನೆ ಕೇಳಲಾಗಿತ್ತು.
ಆಗ ಅವರು ನೀಡಿದ ಉತ್ತರ ಸಾಕಷ್ಟು ಜನರ ಮನಸ್ಸು ಗೆದ್ದಿದೆ. ಸೌಂದರ್ಯ ಅವರು ತಮ್ಮ ಗ್ರಾಮೀಣ ಭಾಗವನ್ನು ಮರೆತಿಲ್ಲ.
“ನಾನು ಕರ್ನಾಟಕದ ಹಾಸನದವಳು” ಎಂದು ಸೌಂದರ್ಯ ಗೌಡ ಅವರು ಆರಂಭದಲ್ಲಿ ಹೇಳಿದ್ದಾರೆ.
“ನನ್ನ ತಾಯಿ, ಅಜ್ಜಿ ಕೂಡ ಮಹಿಳೆಗೆ ಸ್ವಾತಂತ್ರ್ಯವು ಆರ್ಥಿಕತೆಯಿಂದ ಬರುತ್ತದೆ ಎಂದು ಹೇಳಿದ್ದರು. ಹೀಗಾಗಿ ನಾನು ಕೂಡ ಚಿಕ್ಕ ವಯಸ್ಸಿನಿಂದ ದುಡಿಯಲು ಆರಂಭಿಸಿದೆ” ಎಂದು ಅವರು ಹೇಳಿದ್ದಾರೆ.
“ಗ್ರಾಮೀಣ ಭಾಗದಲ್ಲಿ ಸಾಕಷ್ಟು ಆತ್ಮಹತ್ಯೆ ಪ್ರಕರಣ ಆಗುತ್ತಿವೆ. ಕೆಲವರು ಅನಕ್ಷರಸ್ಥರಾಗಿದ್ದರೆ, ಇನ್ನೂ ಕೆಲವರಿಗೆ ದುಡಿಯಲು ಗೊತ್ತಿರೋದಿಲ್ಲ” ಎಂದು ಸೌಂದರ್ಯ ಗೌಡ ಹೇಳಿದ್ದಾರೆ.
“ಆ ಮಹಿಳೆಯರಿಗೆ ದುಡಿಯೋದು ಗೊತ್ತಿದ್ದರೆ, ಆರ್ಥಿಕವಾಗಿ ಗಟ್ಟಿಯಾಗಿದ್ದರೆ ಅವರು ಆತ್ಮಹತ್ಯೆ ಮಾಡಿಕೊಳ್ತಿರಲಿಲ್ಲ” ಎಂದು ಅವರು ಹೇಳಿದ್ದಾರೆ.