Health
ಪುದೀನಾ ಎಲೆ ಜೀರ್ಣಕ್ರಿಯೆಗೆ ಅಮೃತದಂತೆ ಕೆಲಸ ಮಾಡುತ್ತದೆ. ಬೇಸಿಗೆಯಲ್ಲಿ ಬರುವ ಹೊಟ್ಟೆ ಉರಿ, ಹೊಟ್ಟೆ ನೋವನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ.
ಪುದೀನಾ ಎಲೆಗಳು ಹಲ್ಲುಗಳು ಮತ್ತು ವಸಡುಗಳನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ.
ಬಾಯಿಯ ದುರ್ವಾಸನೆ ಸಮಸ್ಯೆ ಇದ್ದರೆ ಪ್ರತಿದಿನ ಪುದೀನಾ ಎಲೆಗಳನ್ನು ತಿಂದರೆ ಒಳ್ಳೆಯದು. ಕೆಲವು ದಿನಗಳಿಗೆ ದುರ್ವಾಸನೆ ಹೋಗುತ್ತದೆ.
ಸಡನ್ನಾಗಿ ತಲೆನೋವು ಬಂದರೆ, ಪುದೀನಾ ಎಲೆಯನ್ನು ತಿನ್ನಿರಿ. ಅಥವಾ ಪುದೀನಾ ಟೀ ಕುಡಿಯಿರಿ. ತಕ್ಷಣ ಉಪಶಮನ ಸಿಗುತ್ತದೆ.
ಬೇಸಿಗೆಯ ತಾಪದಿಂದ ದೇಹವನ್ನು ತಂಪಾಗಿಡಲು ಪುದೀನಾ ಎಲೆ ಎಷ್ಟೋ ಉಪಯೋಗವಾಗುತ್ತದೆ.
ತೂಕ ಇಳಿಸಬೇಕೆಂದರೆ, ಪುದೀನಾ ಎಲೆಯನ್ನು ಪ್ರತಿದಿನ ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಿ. ಇದು ಕೊಬ್ಬನ್ನು, ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.