Health
ಹಸು, ಕುರಿ, ಮೇಕೆಗಳಿಂದ ಹಸಿ ಹಾಲು ಪಡೆಯುತ್ತೇವೆ. ಪಾಶ್ಚರೀಕರಿಸದ ಕಾರಣ ಇದರಲ್ಲಿ ಹಾನಿಕಾರಕ ಬ್ಯಾಕ್ಟಿರಿಯಾ ಇರುವ ಸಾಧ್ಯತೆ ಇರುತ್ತದೆ. ಹೀಗಾಗಿ ಕಾಯಿಸದೇ ಕುಡಿಯುವುದು ಅಪಾಯಕಾರಿ.
ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ಅಧ್ಯಯನದ ಪ್ರಕಾರ, ರೆಫ್ರಿಜರೇಟರ್‌ನಲ್ಲಿ ಇಡುವ ಪಚ್ಚಿ ಹಾಲಿನಲ್ಲಿ ಫ್ಲೂ ವೈರಸ್ 5 ದಿನಗಳವರೆಗೆ ಜೀವಂತವಾಗಿರುತ್ತದೆ.
ಕಾಯಿಸಿದ ಹಾಲಿನಲ್ಲಿ ಇಲ್ಲದ ಕೆಲವು ಪೋಷಕಾಂಶಗಳು ಪಚ್ಚಿ ಹಾಲಿನಲ್ಲಿ ಇರುತ್ತವೆ ಎಂದು ಕೆಲವರು ಹೇಳುತ್ತಾರೆ. ಆದರೆ, ಇದು ಆರೋಗ್ಯಕ್ಕೆ ಹಾನಿಕಾರಕ.
ಹಸಿ ಹಾಲು ಕುಡಿಯುವುದರಿಂದ ಬ್ಯಾಕ್ಟೀರಿಯಾ ಸೋಂಕುಗಳು ಉಂಟಾಗಬಹುದು. ಇದರಿಂದ 200 ಕ್ಕೂ ಹೆಚ್ಚು ರೋಗಗಳು ಬರುವ ಸಾಧ್ಯತೆ ಇದೆ.
ಹಸಿ ಹಾಲನ್ನು ಪಾಶ್ಚರೈಸೇಶನ್ ಮಾಡುವುದು ಉತ್ತಮ ಮಾರ್ಗ. ಇದನ್ನು ಮನೆಯಲ್ಲಿಯೇ ಮಾಡಬಹುದು.
ಹಸಿ ಹಾಲನ್ನು ಮಧ್ಯಮ ಉರಿಯಲ್ಲಿ 161°F ವರೆಗೆ ಕಾಯಿಸಬೇಕು. ಆಹಾರ ಥರ್ಮಾಮೀಟರ್ ಬಳಸಿ ತಾಪಮಾನವನ್ನು ಪರಿಶೀಲಿಸಬಹುದು.
ಹಾಲು 161°F ತಾಪಮಾನ ತಲುಪಿದ ನಂತರ, ಕನಿಷ್ಠ 15 ಸೆಕೆಂಡುಗಳ ಕಾಲ ಅದೇ ತಾಪಮಾನದಲ್ಲಿ ಇರಿಸಿ. ಇದರಿಂದ ಪೋಷಕಾಂಶಗಳು ಕಡಿಮೆಯಾಗದೆ, ಜೀವಾಣುಗಳು ನಾಶವಾಗುತ್ತವೆ.
ಹಾಲನ್ನು ಒಲೆಯಿಂದ ಇಳಿಸಿ ಸ್ವಚ್ಛ ಪಾತ್ರೆಯಲ್ಲಿ ಸುರಿಯಿರಿ. ನಂತರ ಅದನ್ನು ಐಸ್ ನೀರಿನಲ್ಲಿ ಇರಿಸಿ 40°F ಗಿಂತ ಕಡಿಮೆ ತಾಪಮಾನದಲ್ಲಿ ಬೇಗ ತಣ್ಣಗಾಗಿಸಿ.