Food
ಬೆಳಗಿನ ಉಪಾಹಾರಕ್ಕೆ ಮಕ್ಕಳು ಪ್ಯಾನ್‌ಕೇಕನ್ನು ತುಂಬಾ ಇಷ್ಟಪಡುತ್ತಾರೆ. ಸುಲಭವಾದ ಮತ್ತು ಮೃದುವಾದ ಪ್ಯಾನ್‌ಕೇಕ್‌ಗಳನ್ನು ತಯಾರಿಸುವ ಪರಿಪೂರ್ಣ ಪಾಕವಿಧಾನ ಇಲ್ಲಿದೆ.
ಮೈದಾ 1ಕಪ್, ಸಕ್ಕರೆ-1ಟೇಬಲ್‌ಸ್ಪೂನ್, ಬೇಕಿಂಗ್ ಪೌಡರ್-1ಟೀಸ್ಪೂನ್, ಬೇಕಿಂಗ್ ಸೋಡಾ-1/2 ಟೀಸ್ಪೂನ್, ಉಪ್ಪು-1/4 ಟೀಸ್ಪೂನ್, ಹಾಲು-3/4 ಕಪ್, ಮೊಟ್ಟೆ-1,
ಬೆಣ್ಣೆ ಅಥವಾ ತುಪ್ಪ-3ಟೇಬಲ್‌ಸ್ಪೂನ್, ವೆನಿಲ್ಲಾ ಎಕ್ಸ್‌ಟ್ರಾಕ್ಟ್-1 ಟೀಸ್ಪೂನ್
ಮೊದಲಿಗೆ ದೊಡ್ಡಬಟ್ಟಲಲ್ಲಿ ಮೈದಾ, ಸಕ್ಕರೆ, ಬೇಕಿಂಗ್ ಸೋಡಾ, ಉಪ್ಪು, ಬೇಕಿಂಗ್ ಪೌಡರ್ ಅನ್ನು ಚೆನ್ನಾಗಿ ಜರಡಿ ಹಿಡಿದು ಮಿಶ್ರ ಮಾಡಿ.
ಇನ್ನೊಂದು ಬಟ್ಟಲಿನಲ್ಲಿ ಮೊಟ್ಟೆ, ಹಾಲು, ಕರಗಿದ ಬೆಣ್ಣೆ ಮತ್ತು ವೆನಿಲ್ಲಾ ಎಕ್ಸ್‌ಟ್ರಾಕ್ಟ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
ಮೈದಾ ಮಿಶ್ರಣಕ್ಕೆ ಹಾಲಿನ ಮಿಶ್ರಣವನ್ನು ನಿಧಾನವಾಗಿ ಸೇರಿಸಿ. ಹೆಚ್ಚು ಕಲಕಬೇಡಿ; ಲಘುವಾಗಿ ಮಿಶ್ರಣವಾದಾಗ ನಿಲ್ಲಿಸಿ, ಇದರಿಂದ ಹಿಟ್ಟು ಮೃದುವಾಗಿರುತ್ತದೆ.
ನಾನ್‌ಸ್ಟಿಕ್ ತವಾ ಅಥವಾ ಪ್ಯಾನ್ ಅನ್ನು ಮಧ್ಯಮ ಉರಿಯಲ್ಲಿ ಬಿಸಿ ಮಾಡಿ. ಸ್ವಲ್ಪ ಬೆಣ್ಣೆ ಅಥವಾ ಎಣ್ಣೆ ಹಚ್ಚಿ.
ತವಾದ ಮೇಲೆ 1 ದೊಡ್ಡ ಚಮಚ ಹಿಟ್ಟನ್ನು ಹಾಕಿ, ವೃತ್ತಾಕಾರದಲ್ಲಿ ಹರಡಿ. ನಿಧಾನ ಉರಿಯಲ್ಲಿ ಬೇಯಿಸಿ. ಹಿಟ್ಟಿನ ಮೇಲೆ ಗುಳ್ಳೆಗಳು ಕಾಣಿಸಿಕೊಂಡು ಅಂಚುಗಳು ತಿಳಿ ಕಂದು ಬಣ್ಣಕ್ಕೆ ತಿರುಗಿದಾಗ, ತಿರುವಿ ಹಾಕಿ.
ಬಿಸಿ ಪ್ಯಾನ್‌ಕೇಕ್‌ಗಳನ್ನು ಬೆಣ್ಣೆ, ಜೇನುತುಪ್ಪ ಅಥವಾ ಮೇಪಲ್ ಸಿರಪ್‌ನೊಂದಿಗೆ ನೀಡಿ. ನೀವು ಬಯಸಿದರೆ ತಾಜಾ ಹಣ್ಣುಗಳು ಅಥವಾ ಚಾಕೊಲೇಟ್ ಸಿರಪ್‌ನೊಂದಿಗೆ ಇದನ್ನು ತಿನ್ನಬಹುದು.