Cricket
ಕೆಕೆಆರ್ ಫ್ರಾಂಚೈಸಿಯು ಟೀಂ ಇಂಡಿಯಾ ಅನುಭವಿ ಕ್ರಿಕೆಟಿಗ ಅಜಿಂಕ್ಯ ರಹಾನೆಯನ್ನು ನೂತನ ನಾಯಕನನ್ನಾಗಿ ಘೋಷಿಸಿದೆ.
ಅಜಿಂಕ್ಯ ರಹಾನೆ ನಾಯಕನನ್ನಾಗಿ ಮಾಡಿದ್ದು ಕೆಕೆಆರ್ ಮಾಡಿದ ಮಹಾ ಯಡವಟ್ಟು ಎನ್ನಲು ಇಲ್ಲಿವೆ 5 ಕಾರಣ
ರಹಾನೆ 2016ರ ಬಳಿಕ ಯಾವುದೇ ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನಾಡಿಲ್ಲ. ಜಾಗತಿಕ ಮಟ್ಟದ ಟಿ20 ಆಡದ ಕೊರತೆ ರಹಾನೆ ನಾಯಕತ್ವಕ್ಕೆ ಹಿನ್ನಡೆಯಾಗುವ ಸಾಧ್ಯತೆಯಿದೆ.
ಕೆಕೆಆರ್ ಭವಿಷ್ಯದ ಗುರಿಯನ್ನಿಟ್ಟುಕೊಂಡು ಕ್ಯಾಪ್ಟನ್ ಆಯ್ಕೆ ಮಾಡಬೇಕಿತ್ತು. ಆದರೆ ನಿವೃತ್ತಿ ಹೊಸ್ತಿಲಲ್ಲಿರುವ ಆಟಗಾರರನ್ನು ನಾಯಕನನ್ನಾಗಿ ಮಾಡಿ ತಪ್ಪು ಮಾಡಿದೆ.
ರಹಾನೆ 2017-19ರ ಅವಧಿಯಲ್ಲಿ ನಾಯಕರಾಗಿ 25 ಪಂದ್ಯಗಳನ್ನು ಮುನ್ನಡೆಸಿ ಕೇವಲ 9 ಪಂದ್ಯ ಗೆದ್ದಿದ್ದಾರೆ. ಹೀಗಾಗಿ ರಹಾನೆ ಆಯ್ಕೆ ಕೆಕೆಆರ್ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಬಹುದು
ರಹಾನೆ ಅವರು ಟೆಸ್ಟ್ ಮಾದರಿಗೆ ಹೊಂದಿಕೊಳ್ಳುವಂತ ನಾಯಕತ್ವ. ಕೆಕೆಆರ್‌ಗೆ ಆಕ್ರಮಣಕಾರಿ ಮನೋಭಾವ ಇರುವ ನಾಯಕನ ಅಗತ್ಯವಿತ್ತು. ಅದು ರಹಾನೆಗೆ ಇಲ್ಲ.
ಭವಿಷ್ಯದ ದೃಷ್ಟಿಯನ್ನಿಟ್ಟುಕೊಂಡು ಅಥವಾ ಒಳ್ಳೆಯ ಫಾರ್ಮ್‌ನಲ್ಲಿರುವ ಆಟಗಾರರನ್ನು ಕೆಕೆಆರ್ ನಾಯಕನನ್ನಾಗಿ ಆಯ್ಕೆ ಮಾಡಬಹುದಿತ್ತು. ಈ ವಿಚಾರದಲ್ಲೂ ಕೆಕೆಆರ್ ಯಡವಿದೆ.