ನ್ಯೂಜಿಲೆಂಡ್ ಕ್ರಿಕೆಟಿಗ ರಚಿನ್ 5 ಪಂದ್ಯಗಳನ್ನಾಡಿ 2 ಶತಕ ಸಹಿತ 62.75ರ ಬ್ಯಾಟಿಂಗ್ ಸರಾಸರಿಯಲ್ಲಿ 251 ರನ್ ಸಿಡಿಸಿದರು. ಜತೆಗೆ ಸರಣಿ ಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿಕೊಂಡರು.
ಆಫ್ಘಾನ್ ಕ್ರಿಕೆಟಿಗ ಜದ್ರಾನ್ ಕೇವಲ 3 ಪಂದ್ಯಗಳನ್ನಾಡಿ 72ರ ಸರಾಸರಿಯಲ್ಲಿ ಒಂದು ಶತಕ ಸಹಿತ 216 ರನ್ ಸಿಡಿಸಿದ್ದರು.
ಟೀಂ ಇಂಡಿಯಾ ಕ್ರಿಕೆಟಿಗ ಕೊಹ್ಲಿ 5 ಪಂದ್ಯಗಳನ್ನಾಡಿ ಒಂದು ಶತಕ ಹಾಗೂ ಒಂದು ಅರ್ಧಶತಕ ಸಹಿತ 54.5ರ ಬ್ಯಾಟಿಂಗ್ ಸರಾಸರಿಯಲ್ಲಿ 218 ರನ್ ಬಾರಿಸಿದ್ದರು.
ಭಾರತದ ಬ್ಯಾಟಿಂಗ್ ಬೆನ್ನೆಲುಬು ಎನಿಸಿಕೊಂಡಿದ್ದ ಶ್ರೇಯಸ್ ಅಯ್ಯರ್ 5 ಪಂದ್ಯಗಳನ್ನಾಡಿ 2 ಅರ್ಧಶತಕ ಸಹಿತ 48.6ರ ಬ್ಯಾಟಿಂಗ್ ಸರಾಸರಿಯಲ್ಲಿ 243 ರನ್ ಬಾರಿಸಿದ್ದರು.
ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ಕೆ ಎಲ್ ರಾಹುಲ್ 5 ಪಂದ್ಯಗಳನ್ನಾಡಿ 140ರ ಸರಾಸರಿಯಲ್ಲಿ 140 ರನ್ ಬಾರಿಸಿ ಮಿಂಚಿದ್ದರು.
ನ್ಯೂಜಿಲೆಂಡ್ ಆಲ್ರೌಂಡರ್ ಫಿಲಿಫ್ಸ್ 5 ಪಂದ್ಯಗಳನ್ನಾಡಿ 59ರ ಸರಾಸರಿಯಲ್ಲಿ 177 ರನ್ ಬಾರಿಸಿದ್ದರು. ಜತೆಗೆ ಎರಡು ವಿಕೆಟ್ ಹಾಗೂ 5 ಅದ್ಭುತ ಕ್ಯಾಚ್ ಹಿಡಿದಿದ್ದರು.
ಆಫ್ಘಾನ್ ಆಲ್ರೌಂಡರ್ ಓಮರ್‌ಝೈ 3 ಪಂದ್ಯಗಳನ್ನಾಡಿ 126 ರನ್ ಬಾರಿಸಿದ್ದರು. ಇನ್ನು ಬೌಲಿಂಗ್‌ನಲ್ಲಿ ಒಮ್ಮೆ 5+ ವಿಕೆಟ್ ಸೇರಿದಂತೆ 7 ವಿಕೆಟ್ ಪಡೆದಿದ್ದರು.
ಕಿವೀಸ್ ಕ್ಯಾಪ್ಟನ್ ಸ್ಯಾಂಟ್ನರ್ 5 ಪಂದ್ಯಗಳನ್ನಾಡಿ 9 ವಿಕೆಟ್ ಪಡೆದಿದ್ದರು. ಇದೀಗ ಐಸಿಸಿ ಚಾಂಪಿಯನ್ಸ್ ಟ್ರೋಫಿ ಶ್ರೇಷ್ಠ ತಂಡದ ನಾಯಕರಾಗಿಯೂ ಆಯ್ಕೆಯಾಗಿದ್ದಾರೆ.
ಭಾರತದ ಅನುಭವಿ ವೇಗಿ 5 ಪಂದ್ಯಗಳನ್ನಾಡಿ ಒಮ್ಮೆ 5+ ವಿಕೆಟ್ ಸೇರಿದಂತೆ 9 ವಿಕೆಟ್ ಕಬಳಿಸಿ ಟೀಂ ಇಂಡಿಯಾ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಕಿವೀಸ್ ಮಾರಕ ವೇಗಿ ಮ್ಯಾಟ್ ಹೆನ್ರಿ ಕೇವಲ 4 ಪಂದ್ಯಗಳನ್ನಾಡಿ 10 ವಿಕೆಟ್ ಕಬಳಿಸಿದ್ದರು. ಟೂರ್ನಿಯ ಗರಿಷ್ಠ ವಿಕೆಟ್ ಕಬಳಿಸಿದ ಬೌಲರ್ ಕೂಡಾ ಹೌದು.
ಮಿಸ್ಟ್ರಿ ಸ್ಪಿನ್ನರ್ ವರುಣ್ ಚಕ್ರವರ್ತಿ 3 ಪಂದ್ಯಗಳನ್ನಾಡಿ 9 ವಿಕೆಟ್ ಕಬಳಿಸುವ ಮೂಲಕ ಅಪಾಯಕಾರಿ ಸ್ಪಿನ್ನರ್ ಆಗಿ ಹೊರಹೊಮ್ಮಿದರು.
ಟೀಂ ಇಂಡಿಯಾ ಆಲ್ರೌಂಡರ್ ಅಕ್ಷರ್ ಪಟೇಲ್ ಬೌಲಿಂಗ್‌ನಲ್ಲಿ 5 ವಿಕೆಟ್ ಹಾಗೂ ಬ್ಯಾಟಿಂಗ್‌ನಲ್ಲಿ 109 ರನ್ ಬಾರಿಸಿ ಮಿಂಚಿದ್ದಾರೆ.
Smriti Mandhana: ನಿವೃತ್ತಿ ನಂತರ ಬಿಸಿಸಿಐನಿಂದ ಎಷ್ಟು ಪಿಂಚಣಿ ಸಿಗುತ್ತೆ?
ಮಾರಿಷಸ್ ಹನಿಮೂನ್‌ಗೆ ಹೋದ್ರೆ ಧನಶ್ರೀ ವರ್ಮಾ ರೀತಿ ಈ 8 ಬೀಚ್ ಡ್ರೆಸ್ ಟ್ರೈ ಮಾಡಿ
ಚಾಂಪಿಯನ್ಸ್ ಟ್ರೋಫಿ: ಇವರೇ ನೋಡಿ ಟೀಂ ಇಂಡಿಯಾ ಗೆಲುವಿನ ಟಾಪ್ 5 ಸೂಪರ್ ಹೀರೋಗಳು!
ಟೀಂ ಇಂಡಿಯಾ ಕ್ಯಾಪ್ಟನ್ ರೋಹಿತ್ ಮಗಳ ಸ್ಕೂಲ್ ಫೀ ಎಷ್ಟು? ಸಮೈರಾ ಶರ್ಮಾ ಅಂದ್ರೇನು?