Jul 16, 2020, 6:38 PM IST
ಯಾದಗಿರಿ(ಜು.16): ಜಿಲ್ಲೆಯಾದ್ಯಂತ ಭಾರಿ ಮಳೆಗೆ ನದಿಗಳು ತುಂಬಿ ಹರಿಯುತ್ತಿದೆ. ಅದರಲ್ಲೂ ನಿನ್ನೆ ಸತತ 3 ಗಂಟೆ ಸುರಿದ ಭಾರಿ ಮಳೆಗೆ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದರೆ, ನದಿಗಳು ಅಪಾಯದ ಮಟ್ಟ ಮೀರಿವೆ. ಯಾದಗಿರಿಯ ಚಾರ್ ಕಮಾನ್ ಬಳಿ ನೀರು ಉಕ್ಕಿ ಹರಿಯುತ್ತಿತ್ತು.
ಇದನ್ನೂ ನೋಡಿ | ಬಂಕ್ನಲ್ಲಿ ಪೆಟ್ರೋಲ್ ಬದಲಿಗೆ ನೀರು, ವಾಹನ ಮಾಲೀಕರು ಕಂಗಾಲು!
ಈ ವೇಳೆ ಬಂದ ಕಾರು ಈ ನೀರಿಗೆ ಸಿಲುಕಿ ಕೊಚ್ಚಿ ಹೋಗಲು ಆರಂಭಿಸಿತು. ಕಾರಿನಲ್ಲೇ ಕೆಲಕಾಲ ಇದ್ದ ಇಬ್ಬರು ನಂತರ ಹರಸಾಹಸ ಪಟ್ಟು ಇಳಿದು ಪ್ರಾಣ ಉಳಿಸಿಕೊಂಡಿದ್ದಾರೆ. ಕಾರು ತೇಲಿ ಬಂದ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.