ಪರಸ್ಪರ ಬಡಿದಾಟಕ್ಕೆ ನಿಂತ ಮುಸ್ಲಿಂ ದೇಶಗಳು: ಅಫ್ಘಾನಿಸ್ತಾನದ ಮೇಲೆ ಬಾಂಬ್ ಹಾಕಿದ್ದೇಕೆ ಪಾಕಿಸ್ತಾನ?

Dec 27, 2024, 9:30 AM IST

ನವದೆಹಲಿ(ಡಿ.27):  ತಾನು ಸಾಕಿ ಬೆಳೆಸಿದ ಹಾವೇ ಇದೀಗ ಪಾಕಿಸ್ತಾನಕ್ಕೆ ದುಃಸ್ವಪ್ನವಾಗಿ ಕಾಡಲು ಶುರುವಾಗಿದೆ. ತನ್ನ ನೆಲದಲ್ಲಿ ಕಾರ್ಯಾಚರಿಸುತ್ತಿರುವ ಭಯೋತ್ಪಾದಕ ಸಂಘಟನೆಗಳ ನಿರ್ಮೂಲನೆಗೆ ಅಫ್ಘಾನಿಸ್ತಾನದಲ್ಲಿರುವ ಉಗ್ರ ನೆಲೆಗಳನ್ನು ಗುರಿಯಾಗಿರಿಸಿ ಪಾಕ್ ಸೇನೆ ನಡೆಸಿದ ವೈಮಾನಿಕ ದಾಳಿ ತಾಲಿಬಾನ್ ಆಕ್ರೋಶಕ್ಕೆ ಕಾರಣವಾಗಿದೆ. ಈ ದಾಳಿಗೆ ಪ್ರತೀಕಾರ ತೀರಿ ಸಲು ಮುಂದಾಗಿರುವ ತಾಲಿಬಾನ್, ತನ್ನ 15 ಸಾವಿರ ಹೋರಾಟಗಾರರನ್ನು ಪಾಕ್ ಗಡಿಯತ್ತ ಕಳುಹಿಸಿದೆ ಎನ್ನಲಾಗಿದೆ. 

News Hour: 15 ಲಕ್ಷ ಆದಾಯಕ್ಕೂ ತೆರಿಗೆ ವಿನಾಯ್ತಿ?

15 ಸಾವಿರ ತಾಲಿಬಾನ್ ಹೋರಾಟಗಾರರು ಕಾಬೂಲ್, ಕಂದಹಾರ್, ಹೇರತ್‌ನಿಂದ ಇದೀಗಮಿರ್ ಅಲಿ ಗಡಿಯತ್ತ ಹೊರಟಿದ್ದಾರೆ ಎಂದು ವರದಿಗಳು ತಿಳಿಸಿವೆ. ಇದರಿಂದ ಪಾಕಿಸ್ತಾನಕ್ಕೆ ಮತ್ತಷ್ಟು ಆತಂಕ ಎದುರಾಗಿದೆ.