Feb 22, 2024, 6:02 PM IST
ಅಧಃಪತನದತ್ತ ಸಾಗುತ್ತಿವೆ ಅತಿ ದೊಡ್ಡ ಆರ್ಥಿಕತೆ(Economy) ಹೊಂದಿರೊ ಬ್ರಿಟನ್, ಜಪಾನ್ ದೇಶಗಳು. ಅವುಗಳ ಹಾದಿಯಲ್ಲೇ ಬರೋಬ್ಬರಿ 18 ರಾಷ್ಟ್ರಗಳು ನಿಂತಿದ್ದಾವೆ. 2024 ಇದು ಅಂತಿಂಥಾ ವರ್ಷವಲ್ಲ. ಜಗತ್ತಿನ ರೂಪರೇಷೆ ಬದಲಾಯಿಸೋ ವರ್ಷ ಅಂತ ಹಲವಾರು ಆರ್ಥಿಕ ತಜ್ಞರು ಭವಿಷ್ಯ ನುಡಿದಿದ್ರು. ಅದೆಷ್ಟೋ ದೇಶಗಳ ಹಣೆ ಬರಹ ನಿರ್ಧಾರಗೊಳ್ಳೋದೇ, 2024ರಲ್ಲಿ ಅನ್ನೋ ಮಾತಿತ್ತು. ಯಾವ್ಯಾವ ದೇಶಗಳ ಆರ್ಥಿಕತೆ ಬಲಿಷ್ಠವಾಗಿದೆ ಅನ್ನೋ ಅಗ್ನಿಪರೀಕ್ಷೆ ನಡೆಯೋದೇ 2024ರಲ್ಲಿ ಅಂತಿದ್ರು. 2024 ಶುರುವಾಗಿ, 2 ತಿಂಗಳೂ ಕಳೆದಿಲ್ಲ. ಆಗಲೇ ಅಸಲಿ ಕೋಲಾಹಲ, ಅಲ್ಲೋಲಕಲ್ಲೋಲ ಆರಂಭವಾಗಿದೆ. ವರ್ಷಾರಂಭದಲ್ಲೇ ಅತಿ ಭಯಾನಕ ವಾತಾವರಣ ನಿರ್ಮಾಣವಾಗಿದೆ.ಜಗತ್ತು ಕಳೆದ 4 ವರ್ಷಗಳಲ್ಲಿ ಹತ್ತಾರು ಭಯಾನಕ ಘಟನೆಗಳಿಗೆ ಸಾಕ್ಷಿಯಾಗಿದೆ. ಅದರಲ್ಲಿ ಮೊದನೇದು, ಅತ್ಯಂತ ಭೀಕರವಾದ್ದು. ಕೊರೊನಾ(Corona) ಯಮಗಂಡಕಾಲ. ಟಾಪ್ 6 ದೇಶಗಳಲ್ಲಿರೋ ಜಪಾನ್(Japan) ಹಾಗೂ ಬ್ರಿಟನ್(Britain) ದೇಶಗಳೇ ಈಗ ಆರ್ಥಿಕ ಹಿಂಜರಿತ ಅನ್ನೋ ಪೆಡಂಭೂತದ ಕಾಟಕ್ಕೆ ಬಳಲ್ತಾ ಇದಾವೆ. ಈ ಎರಡು ದೇಶಗಳಲ್ಲಿ ಉಂಟಾಗಿರೋ ತಳಮಳ ಜಗತ್ತನ್ನೇ ನಡುಗಿಸ್ತಾ ಇದೆ.
ಇದನ್ನೂ ವೀಕ್ಷಿಸಿ: Guarantees: ಲೋಕಸಭೆ ಚುನಾವಣೆ ನಂತರ ಕೆಲವರಿಗೆ ಕಾಂಗ್ರೆಸ್ ಗ್ಯಾರಂಟಿ ಬಂದ್: ಅರವಿಂದ್ ಬೆಲ್ಲದ್