ಟ್ರಂಪ್ ತಲೆಗೆ ಗುರಿ ಇಟ್ಟವನೇ ಕ್ಷಣದಲ್ಲಿ ಹೆಣವಾದ: ಅಮೆರಿಕಾ ಮಾಜಿ ಅಧ್ಯಕ್ಷರ ಮೇಲೆ ನಡೆದ ದಾಳಿ ಹಿಂದಿನ ಕಾರಣವೇನು ?

Jul 15, 2024, 5:31 PM IST

ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump ) ಮೇಲೆ ಗುಂಡಿನ ದಾಳಿ ನಡೆದಿದೆ. ರಾತ್ರಿ ನಡೆದ ಈ ದಾಳಿಯಲ್ಲಿ ಟ್ರಂಪ್ ಕೂದಲೆಳೆ ಅಂತರದಲ್ಲಿ ಬಚಾವ್ ಆಗಿದ್ದಾರೆ. ದೂರದಿಂದ ತೇಲಿ ಬಂದ ಗುಂಡೊಂದು ಟ್ರಂಪ್ ಕಿವಿಗೆ ಗಾಯ ಮಾಡಿದೆ. ಅಮೆರಿಕಾದಲ್ಲಿ(America) ಈಗ 2024ರ ಅಧ್ಯಕ್ಷೀಯ ಚುನಾವಣೆ ನಡೆಯುತ್ತಿದೆ. ಅಲ್ಲಿನ ಎರಡು ಪ್ರಮುಖ ಪಕ್ಷಗಳಾದ ಡೆಮಾಕ್ರಟಿಕ್ ಪಕ್ಷದಿಂದ ಮತ್ತೆ ಜೋ ಬೈಡನ್ ಸ್ಪರ್ಧೆಯಲ್ಲಿದ್ದಾರೆ. ಇನ್ನು ಕಳೆದ ಬಾರಿಯ ಅಧ್ಯಕ್ಷನಾಗಿದ್ದ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ರಿಪಬ್ಲಿಕನ್ ಪಕ್ಷದಿಂದ(Repunlican Party) ಸ್ಪರ್ಧೆಯಲ್ಲಿದ್ದಾರೆ. ಈ ಇಬ್ಬರ ಮಧ್ಯೆ ತೀವ್ರ ಫೈಪೋಟಿ ನಡೆಯುತ್ತಿದೆ ಎಂದು ಅಲ್ಲಿನ ಚುನಾವಣಾ ಸಮೀಕ್ಷೆಗಳು ಹೇಳುತ್ತಿದ್ದವು. ಆದ್ರೆ ಚುನಾವಣಾ ಪ್ರಚಾರ ರ್‍ಯಾಯಲ್ಲಿದ್ದ ಟ್ರಂಪ್ ಮೇಲೆ ಗುಂಡಿನ ದಾಳಿ ನಡೆದಿದೆ. ಗುಂಡಿನ ದಾಳಿಯಿಂದಾಗಿ ಟ್ರಂಪ್‌ನ ಬಲಕಿವಿಗೆ ಒಂದು ಗುಂಡು ತಗುಲಿದೆ. ಆದ್ರೆ ಅವರ ಅದೃಷ್ಟಕ್ಕೆ ಗುಂಡು ಕಿವಿಯೊಳಗೆ ನುಸುಳಿಲ್ಲ. ಹೊರ ಕಿವಿಗೆ ಗುಂಡು ತಾಗಿದ್ದರಿಂದ ಕಿವಿಗೆ ಗಾಯವಾಗಿ ಸ್ಥಳದಲ್ಲೇ ರಕ್ತ ಸೋರಿತ್ತು. ಕಿವಿಗೆ ಗುಂಡು ತಗುಲುತ್ತಿದ್ದಂತೆ ಟ್ರಂಪ್ ಕೆಳಗೆ ಕುಸಿದು ಬೀಳುತ್ತಾರೆ. ಆದ ಅಲ್ಲೇ ಸುತ್ತುವರೆದು ನಿಂತಿದ್ದ ರಕ್ಷಣಾ ಸಿಬ್ಬಂದಿ ಟ್ರಂಪ್ ಸುತ್ತ ಭದ್ರಕೋಟೆ ಕಟ್ಟುತ್ತೆ. ನಂತರ ಸುತ್ತುವರೆದುಕೊಂಡೇ ಅಲ್ಲಿಂದ ಕರೆದುಕೊಂಡು ಹೋಗಲಾಗುತ್ತೆ.

ಇದನ್ನೂ ವೀಕ್ಷಿಸಿ:  ಹೇಗಿರಲಿದೆ ಆ ವಾಗ್ಯುದ್ಧ ? ಏನಾಗಲಿದೆ ಅಧಿವೇಶನದಲ್ಲಿ? ಎದುರಾಳಿಗಳ ಪ್ರಶ್ನೆಗೆ ಏನು ಉತ್ತರ ಕೊಡ್ತಾರೆ ಸಿಎಂ..?