ಹೇಗಿರಲಿದೆ ಆ ವಾಗ್ಯುದ್ಧ ? ಏನಾಗಲಿದೆ ಅಧಿವೇಶನದಲ್ಲಿ? ಎದುರಾಳಿಗಳ ಪ್ರಶ್ನೆಗೆ ಏನು ಉತ್ತರ ಕೊಡ್ತಾರೆ ಸಿಎಂ..?
ಅಧಿವೇಶನಕ್ಕೆ ಕ್ಷಣಗಣನೆ..ಕದನ ಕಣವಾಗಲಿದೆಯಾ ಸದನ..!?
ಪ್ರತಿಪಕ್ಷಗಳ ಕೈಗೆ ದಕ್ಕಿವೆ ಒಂದಕ್ಕಿಂತಾ ಒಂದು ಪ್ರಬಲಾಸ್ತ್ರಗಳು..!
ಸದನದಲ್ಲಿ ಸದ್ದು ಮಾಡಲಿವೆ ವಕ್ಫ್ ಅವ್ಯವಹಾರ..ಬೆಲೆ ಏರಿಕೆ..!
ಅಧಿವೇಶನಕ್ಕೆ ಶುರುವಾಗಿದೆ ಕ್ಷಣಗಣನೆ.. ಪ್ರತಿಪಕ್ಷಗಳ ಕೈಗೆ ದಕ್ಕಿವೆ ಒಂದಕ್ಕಿಂತಾ ಒಂದು ಪ್ರಬಲಾಸ್ತ್ರಗಳು. ಮುಡಾ ಹಗರಣ (Muda Scam). ನಾಗೇಂದ್ರ ಪ್ರಕರಣ..ವಕ್ಫ್ ಬೋರ್ಡ್ ಅವ್ಯವಹಾರ(Waqf Board illegality). ಬೆಲೆ ಏರಿಕೆ ಅಬ್ಬರ.. ಈ ಎಲ್ಲಾ ಸಂಗತಿಗಳು, ವಿಧಾಸಭೆಯ ಕಲಾಪದಲ್ಲಿ ಕೋಲಾಹಲ ಸೃಷ್ಟಿಸೋ ಸಾಧ್ಯತೆ ಇದೆ. ಸಿದ್ದರಾಮಯ್ಯ(Siddaramaiah) ಸರ್ಕಾರವನ್ನ ಟೀಕಿಸೋಕೆ ಪ್ರಶ್ನಿಸೋಕೆ, ಬಿಜೆಪಿ(BJP) ಜೆಡಿಎಸ್ ಮೈತ್ರಿ ಪಡೆ ಸನ್ನದ್ಧವಾಗಿದೆ. ಇಡೀ ರಾಜ್ಯವೇ ಸದ್ಯಕ್ಕೊಂದು ಕದನ ನೋಡೋ ಸಾಧ್ಯತೆ ಇದು. ಆ ಕದನ ನಡೆಯಲಿರೋದು, ವಿಧಾನಸಭೆಯಲ್ಲಿ. ಮಳೆಗಾಲದ ಅಧಿವೇಶನ ಜುಲೈ 26ರವರೆಗೆ, ಅಂದ್ರೆ 9 ದಿನಗಳ ಕಾಲ ನಡೆಯಲಿದೆ. ಲೋಕಸಭಾ ಚುನಾವಣೆಯ ಫಲಿತಾಂಶ ನಂತರ ನಡೀತಿರೊ ಮೊದಲ ಅಧಿವೇಶನ ಇದಾಗಿದೆ. ಲೋಕಸಭಾ ಚುನಾವಣೆ ಗೆಲುವಿನ ಉತ್ಸಾಹದಲ್ಲಿರೋ ಬಿಜೆಪಿ ಮತ್ತು ಜೆಡಿಎಸ್(JDS), ಸಿದ್ದರಾಮಯ್ಯ ಸರ್ಕಾರವನ್ನ ತರಾಟೆಗೆ ತೆಗೆದುಕೊಳ್ಳೋಕೆ ಸನ್ನದ್ಧವಾಗಿ ನಿಂತಿದೆ. ಆಡಳಿತ ಪಕ್ಷದ ವಿರುದ್ಧ ಹೋರಾಟಕ್ಕೆ ಬಿಜೆಪಿ ಹಾಗೂ ಜೆಡಿಎಸ್ ಸಜ್ಜಾಗಿದಾವೆ. ಕಾಂಗ್ರೆಸ್(Congress) ಸರ್ಕಾರದ ವಿರುದ್ಧ ಗುಡುಗಿ ನಡುಕ ಹುಟ್ಟಿಸೋಕೆ ಏನೇನೆಲ್ಲಾ ಸರಕುಗಳು ಬೇಕೋ, ಯಾವೆಲ್ಲಾ ಶಸ್ತ್ರಾಸ್ತ್ರಗಳು ಬೇಕೋ, ಅಷ್ಟೂ ಆಯುಧಗಳು ಈಗ ವಿಪಕ್ಷಗಳ ಬತ್ತಳಿಕೆಯಲ್ಲಿ ಭದ್ರವಾಗಿವೆ. ಆ ಅಸ್ತ್ರಗಳನ್ನೇ ಬಳಸಿಕೊಂಡು, ಸದನದಲ್ಲಿ ಹೋರಾಟ ನಡೆಸೋ ಸಾಧ್ಯತೆ ಎದ್ದು ಕಾಣ್ತಾ ಇದೆ.
ಇದನ್ನೂ ವೀಕ್ಷಿಸಿ: ರೇಣುಕಾಸ್ವಾಮಿ ಕೊಲೆ ಪ್ರಕರಣ: ಎಲ್ಲೆಲ್ಲಿಂದ ಪೊಲೀಸರು ಸಿಸಿಟಿವಿ ಸಂಗ್ರಹಿಸಿದ್ದಾರೆ ಗೊತ್ತಾ ?