Dec 3, 2024, 1:07 PM IST
ಹಾಸನ (ಡಿ.3): ಕನ್ನಡ ಕಿರುತೆರೆ ನಟಿ ಶೋಭಿತಾ ಶಿವಣ್ಣ ಬಾನುವಾರ ಹೈದರಾಬಾದ್‌ನ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಮೃತದೇಹ ಮಂಗಳವಾರ ಹುಟ್ಟೂರಾದ ಹಾಸನದ ಹೇರೂರು ತಲುಪಿದೆ.
ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಹೇರೂರು ಗ್ರಾಮ ಅವರ ಮೂಲವಾಗಿದ್ದು, ಶೋಭಿತಾ ಮನೆಯಲ್ಲಿ ಹೆತ್ತವರು,ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಇಂದು ಮಧ್ಯಾಹ್ನ 2 ಗಂಟೆ ಬಳಿಕ ಶೋಭಿತಾ ಅಂತ್ಯಸಂಸ್ಕಾರ ನಡೆಯಲಿದೆ. ಗಂಗಾಮತಸ್ಥ ಸಂಪ್ರದಾಯ ಪ್ರಕಾರ ಅಂತ್ಯಸಂಸ್ಕಾರ ನೆರವೇರಲಿದೆ.
ಶೋಭಿತಾ ಶಿವಣ್ಣ ಮರಣೋತ್ತರ ಪರೀಕ್ಷೆ ಮುಕ್ತಾಯ, ವೈದ್ಯರು ಹೇಳಿದ್ದೇನು?
ಒಂದೂವರೆ ವರ್ಷದ ಹಿಂದೆ ಹೈದರಾಬಾದ್ ಮೂಲದ ಸುಧೀರ್ ರೆಡ್ಡಿ ಎನ್ನುವರೊಂದಿಗೆ ಶೋಭಿತಾ ಶಿವಣ್ಣ ವಿವಾಹವಾಗಿದ್ದರು. ಮದುವೆಯಾದ ಬಳಿಕ ಸಿನಿಮಾ ಹಾಗೂ ಸೀರಿಯಲ್‌ಗಳಿಂದ ದೂರವಿದ್ದ ಶೋಭಿತಾ ಇದರಿಂದ ಖಿನ್ನತೆಗೆ ಇಳಿದಿದ್ದರು. ಇನ್ನೂ ಕೆಲವರು ಶೋಭಿತಾ ಸಂಸಾರದಲ್ಲಿ ಕೆಲವು ತಿಂಗಳಿನಿಂದ ಬಿರುಕು ಉಂಟಾಗಿತ್ತು. ಪತಿಯ ಜೊತೆಗಿನ ಜಗಳದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.