ಕೊಡಗಿನಲ್ಲಿ ಅರಳಿದ ನೀಲ ಕುರುಂಜಿ..! ಸ್ವರ್ಗ ಧರೆಗಿಳಿದಂತಿದೆ ಮಂದಾಲಪಟ್ಟಿ

Aug 24, 2021, 3:24 PM IST

ಮಡಿಕೇರಿಯಲ್ಲಿ ಸ್ವರ್ಗವೇ ಧರೆಗಿಳಿದು ಬಂದಂತಹ ಸೌಂದರ್ಯ ಸೃಷ್ಟಿಯಾಗಿದೆ. ಕೊಡಗಿನ ಮಂದಾಲಪಟ್ಟಿ ನೀಲಿ ಬಣ್ಣಕ್ಕೆ ತಿರುಗಿದೆ. ಚುಮುಚುಮು ಚಳಿ. ತಣ್ಣನೆ ಗಾಳಿ. ಕಣ್ಣು ಹಾಯಿಸಿದಲ್ಲೆಲ್ಲಾ ನೀಲಿ ಹೂವಿನ ಸೊಬಗು. ಮಂಜು ಮುಸುಕಿದ ವಾತಾವರಣದಲ್ಲಿ ಕಣ್ಣು ಹಾಯಿಸಿದಷ್ಟು ದೂರ ನೀಲಿ ಹೂಗಳು.

12 ವರ್ಷಕ್ಕೊಮ್ಮೆ ಅರಳೋ ಹೂವಿದು, ದೃಷ್ಟಿ ಹಾಯಿಸಲು ಲಕ್ಷಾಂತರ ರೂಪಾಯಿ ವ್ಯಯಿಸುತ್ತಾರೆ!

ಕೊಡಗಿನ ಪ್ರಮುಖ ಪ್ರವಾಸಿ ತಾಣವಾಗಿರುವ ಮಾಂದಲಪಟ್ಟಿಯಲ್ಲಿ ಈಗ ನೀಲ ಕುರುಂಜಿ ಸಂಭ್ರಮ. ಇದು ಪ್ರತಿ ಸೀಸನ್‌ನಲ್ಲಿ ಅರಳೋ ಹೂಗಳಲ್ಲ. ಸುಮಾರು 12 ವರ್ಷಗಳಿಗೊಮ್ಮೆ ಅರಳೋ ನೀಲ ಕುರುಂಜಿಯಲ್ಲಿ 250 ವಿಧಗಳಿವೆ. ಭಾರತದಲ್ಲಿ 47 ಬಗೆಯ ಹೂಗಳಿವೆ. ಇವು ಒಟ್ಟಿಗೇ ಅರಳಿ ಎರಡರಿಂದ ಮೂರು ತಿಂಗಳಿಗೆ ನಗುತ್ತಾ ನಿಲ್ಲುತ್ತವೆ. ಹಿಂದಿನ ಕಾಲದ ಜನ ಈ ಹೂವನ್ನು ನೋಡಿ ವಯಸ್ಸು ಲೆಕ್ಕ ಹಾಕುತ್ತಿದ್ದರು ಎನ್ನಲಾಗಿದೆ.