ಟೋಕಿಯೋ 2020: ನೀರಜ್ ಚೋಪ್ರಾ ಚಿನ್ನದ ಒಡೆಯನಾಗಿದ್ದೇಗೆ?

Aug 9, 2021, 5:41 PM IST

ಬೆಂಗಳೂರು(ಆ.09): ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಜಾವಲಿನ್ ಥ್ರೋ ಪಟು ನೀರಜ್ ಚೋಪ್ರಾ ಚಿನ್ನದ ಪದಕ ಗೆಲ್ಲುವ ಮೂಲಕ ಶತಮಾನದ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಅಥ್ಲೆಟಿಕ್ಸ್‌ನಲ್ಲಿ ಭಾರತಕ್ಕೆ ಶತಮಾನದ ಬಳಿಕ ಪದಕ ಗೆದ್ದು ಕೊಟ್ಟ ನೀರಜ್ ಚೋಪ್ರಾ ಏಕಾಏಕಿ ಚಾಂಪಿಯನ್‌ ಆದವರಲ್ಲ.

ತೂಕ ಕಡಿಮೆ ಮಾಡಿಕೊಳ್ಳು ಕ್ರೀಡೆಯತ್ತ ಒಲವು ತೋರಿದ ನೀರಜ್ ಈಗ ಅಕ್ಷರಶಃ ಬಂಗಾರದ ಮನುಷ್ಯ. 15ನೇ ವಯಸ್ಸಿಗೆ 80 ಕೆ.ಜಿ. ಬಾರ ತೂಗುತ್ತಿದ್ದ ನೀರಜ್ ಚೋಪ್ರಾ ಕೇವಲ 8 ವರ್ಷಗಳ ಅವಧಿಯಲ್ಲಿ ಒಲಿಂಪಿಕ್ಸ್‌ ಪದಕ ಗೆದ್ದಿದ್ದು ಕಣ್ಣ ಮುಂದೆಯೇ ನಡೆದ ಅಚ್ಚರಿ.

ಅಥ್ಲಿಟಿಕ್ಸ್‌ನಲ್ಲಿ ಚಿನ್ನ ಅಸಾಧ್ಯ ಎಂದವರಿಗೆ ಈ ಪದಕ ಉತ್ತರ; ನೀರಜ್ ಚೋಪ್ರಾ Exclusive ಸಂದರ್ಶನ!

ಹೌದು, 23 ವರ್ಷದ ನೀರಜ್‌ ಚೋಪ್ರಾ ಟೋಕಿಯೋ ಒಲಿಂಪಿಕ್ಸ್‌ನಲ್ಲಿ 87.58 ಮೀಟರ್ ದೂರ ಎಸೆಯುವ ಮೂಲಕ ಬಂಗಾರ ಗೆದ್ದು ಬೀಗಿದ್ದಾರೆ. ಭಾರತ ಪರ ಅಥ್ಲೆಟಿಕ್ಸ್‌ನಲ್ಲಿ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಅಥ್ಲೀಟ್ ಎನಿಸಿಕೊಂಡಿರುವ ನೀರಜ್ ಸ್ಪೂರ್ತಿಯ ಕಹಾನಿ ಇಲ್ಲಿದೆ ನೋಡಿ.