Jan 26, 2021, 12:55 PM IST
ಬೆಂಗಳೂರು (ಜ. 26): ಸಿಲಿಕಾನ್ ಸಿಟಿಯಲ್ಲಿ ನಡೆಯುತ್ತಿರುವ ರೈತರ ರ್ಯಾಲಿಗೆ ಲೈಂಗಿಕ ಅಲ್ಪಸಂಖ್ಯಾತರು ಸಾಥ್ ನೀಡಿದ್ದಾರೆ. ರೈತರ ಋಣವನ್ನು ನಾವು ತೀರಿಸಲು ಸಾಧ್ಯವಿಲ್ಲ. ಅವರ ಪ್ರತಿಭಟನೆಗೆ ಸಾಥ್ ನೀಡುವ ಮೂಲಕ ಅವರಿಗೊಂದು ಬೆಂಬಲ ನೀಡಲು ಬೇರೆ ಬೇರೆ ಜಿಲ್ಲೆಗಳಿಂದ ಬಂದಿದ್ದೇವೆ ಎಂದು ಲೈಂಗಿಕ ಅಲ್ಪಸಂಖ್ಯಾತರು ಹೇಳಿದ್ದಾರೆ.
ರಾಜಧಾನಿಯಲ್ಲಿ ರೈತ ಕ್ರಾಂತಿ; 125 ಟ್ರಾಕ್ಟರ್ ಬಳಕೆಗೆ ಮಾತ್ರ ಅವಕಾಶ, ಷರತ್ತು ಅನ್ವಯ!
ರೈತ ವಿರೋಧಿ ಕಾಯ್ದೆಗಳನ್ನು ಸರ್ಕಾರ ಏನು ಜಾರಿಗೊಳಿಸಿದೆ ಅದನ್ನು ಈ ಕೂಡಲೇ ವಾಪಸ್ ಪಡೆಯಬೇಕು ಅಂತ ನಾವು ಸರ್ಕಾರಕ್ಕೆ ಹಕ್ಕೋತ್ತಾಯ ಮಾಡುತ್ತೇವೆ ಎಂದು ಹೇಳಿದ್ದಾರೆ.