Feb 4, 2022, 2:54 PM IST
ಬೆಂಗಳೂರು (ಫೆ. 04): ಕರಾವಳಿ ಜಿಲ್ಲೆಯಿಂದ ಕುಂದಾನಗರಿಗೂ (Belagavi) ಹಿಜಾಬ್ ವಿವಾದ (Hijab Row) ವ್ಯಾಪಿಸಿದೆ. ರಾಮದುರ್ಗದಲ್ಲಿರುವ (Ramadurga) ಸರ್ಕಾರಿ ಪಿಯು ಕಾಲೇಜಿನ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಕಾಲೇಜಿಗೆ ಆಗಮಿಸಿದ್ದಾರೆ. ಕೇಸರಿ ಶಾಲು ಧರಿಸಿ ಕಾಲೇಜಿಗೆ ಆಗಮಿಸುತ್ತಿದ್ದಂತೆ ಸ್ಥಳಕ್ಕೆ ತೆರಳಿದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಕೂಡಲೇ ಕೇಸರಿ ಶಾಲು ತೆಗಸಿ ವಿದ್ಯಾರ್ಥಿಗಳಿಗೆ ಬುದ್ದಿವಾದ ಹೇಳಿದ್ದಾರೆ.
ನಿನ್ನೆ ಇಡೀ ದಿನ ಹರಸಾಹಸಪಟ್ಟು ವಿದ್ಯಾರ್ಥಿಗಳ ಕೇಸರಿ ಶಾಲು ತೆಗೆಸಿದ್ದಾರೆ. ಸಿಬ್ಬಂದಿ ಮತ್ತು ಪೊಲೀಸರು. ಕಾಲೇಜಿಗೆ ಸಂಬಂಧ ಇಲ್ಲದ ಯುವಕರು ಬಂದು ಈ ರೀತಿ ಮಾಡುತ್ತಿದ್ದಾರೆ. ಮುಂದಿನ ಸಾರಿ ಕಾಲೇಜಿಗೆ ಬಾರದಂತೆ ಯುವಕರಿಗೆ ಪಿಎಸ್ಐ ವಾರ್ನಿಂಗ್ ಮಾಡಿದ್ದಾರೆ.
Hijab Row: ಹಿಜಾಬ್‌ಗೆ ಪ್ರತಿಯಾಗಿ ಹುಡುಗರಿಂದ ಕೇಸರಿ ಶಾಲ್; ಅನುಮತಿಸಿದ ಕಾಲೇಜು
ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. 'ಬಿಜೆಪಿಯವರು ವಿಷಯಾಂತರ ಮಾಡೋಕೆ ಈ ರೀತಿ ಮಾಡಿದ್ಧಾರೆ. ಅವನ್ಯಾರೋ ರಘುಪತಿ ಭಟ್ ಹೇಳಿದ ಅಂತ ಮಾಡಿದ್ಧಾರೆ. ಹೆಣ್ಣು ಮಕ್ಕಳಿಗೆ ವಿದ್ಯೆಯಿಂದ ವಂಚಿತ ಮಾಡುವ ಹುನ್ನಾರ ಇದು. ಸ್ಕಾರ್ಫ್ ಹಾಕೋದು ಅವರ ಧಾರ್ಮಿಕ ನಿಯಮ' ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.