Feb 23, 2022, 3:03 PM IST
ಶಿವಮೊಗ್ಗ (ಫೆ. 23): ಹಿಂದೂ ಕಾರ್ಯಕರ್ತ ಹರ್ಷ ಹತ್ಯೆ ಬಳಿಕ ಶಿವಮೊಗ್ಗದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. 7 ಡ್ರೋನ್ ಮೂಲಕ ಗಲ್ಲಿ ಗಲ್ಲಿಗಳಲ್ಲೂ ನಿಗಾ ಇಡಲಾಗಿದೆ. ಇಪ್ಪತ್ತಕ್ಕೂ ಹೆಚ್ಚು ತಜ್ಞ ಪೊಲೀಸರ ತಂಡ ಬಂದಿದೆ. ಕೆ ಆರ್ ಪುರಂ, ಸೀಗೆಹಟ್ಟಿ, ಇಮಾಮ್ ಬಾಡಾ, ಟಿಪ್ಪು ನಗರ, ತುಂಗಾ ನಗರ, ಟ್ಯಾಂಕ್ ಮೊಹಲ್ಲಾ ಸೇರಿ ಸೂಕ್ಷ್ಮ ಪ್ರದೇಶಗಳಲ್ಲಿ ಹೈ ಅಲರ್ಟ್ ಇದೆ. ತಂಡದಿಂದ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಮಾಹಿತಿ ಪಡೆದಿದ್ದಾರೆ.
Harsha Murder Case:ಅಂತ್ಯಕ್ರಿಯೆ ವೇಳೆ ಪೊಲೀಸರ ಎದುರೇ ಲಾಂಗ್, ಮಚ್ಚು ಪ್ರದರ್ಶನ, ವಿಡಿಯೋ ವೈರಲ್
ಹರ್ಷ ಹತ್ಯೆ ಪ್ರಕರಣ (Harsha Murder Case) ಸಂಬಂಧ ತನಿಖೆ ನಡೆಯುತ್ತಿದೆ. ವರದಿ ಬಳಿಕ NIA ಗೆ ಕೊಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ. ಶಿವಮೊಗ್ಗ ಶಾಂತಿ ಸುವ್ಯವ್ಯಸ್ಥೆ ಕಾಪಾಡುವುದು ಕೂಡಾ ನಮ್ಮ ಮೊದಲ ಆದ್ಯತೆ' ಎಂದು ಸಿಎಂ ಬೆಂಗಳೂರಿನಲ್ಲಿ ಹೇಳಿದ್ದಾರೆ.