ರಾಜ್ಯಾದ್ಯಂತ ಬಜರಂಗದಳದ ಶೌರ್ಯ ರಥಯಾತ್ರೆ: ಲವ್ ಜಿಹಾದ್,ಗೋ ಹತ್ಯೆ, ಸನಾತನ ಧರ್ಮದ ಜಾಗೃತಿ

Sep 22, 2023, 10:42 AM IST

ಲವ್ ಜಿಹಾದ್ ಹೆಸರಿನಲ್ಲಿ ಅನೈತಿಕ ಪೊಲೀಸ್ ಗಿರಿ ನಡೆಸುತ್ತಿದ್ದ ಬಜರಂಗದಳವನ್ನ(Bajrang Dal) ಬ್ಯಾನ್ ಮಾಡಲು ಮುಂದಾಗಿದ್ದ ರಾಜ್ಯ ಸರ್ಕಾರಕ್ಕೆ ಟಕ್ಕರ್ ನೀಡಲು ಬಜರಂಗದಳ ಮುಂದಾಗಿದೆ. ವಿಶ್ವ ಹಿಂದೂ ಪರಿಷತ್ಗೆ 60 ವರ್ಷ ತುಂಬುತ್ತಿರುವ ಹಿನ್ನಲೆ ರಾಜ್ಯಾದ್ಯಂತ ರಥಯಾತ್ರೆ ನಡೆಸಲು ಬಜರಂಗದಳ ತೀರ್ಮಾನಿಸಿದೆ. ಲವ್ ಜಿಹಾದ್, ದೇವಸ್ಥಾನಗಳ ಉಳಿವು, ಸನಾತನ ಹಿಂದೂ ಧರ್ಮದ ಮೇಲೆ ಪಾಶ್ಚಿಮಾತ್ಯರ ದಾಳಿ, ದೌರ್ಜನ್ಯ ಜೊತೆಗೆ, 2 ಸಾವಿರ ಬಜರಂಗದಳ ಘಟಕವನ್ನ 5 ಸಾವಿರಕ್ಕೆ ಏರಿಸುವ ಪ್ರಮುಖ ಉದ್ದೇಶವನ್ನಿಟ್ಟುಕೊಂಡು ರಥಯಾತ್ರೆಗೆ ಮುಂದಾಗಿದೆ. ಕಳೆದ ವಿಧಾನಸಭಾ ಚುನಾವಣೆ ವೇಳೆ ಉಳ್ಳಾಲ ಕ್ಷೇತ್ರದಲ್ಲಿ ಬಜರಂಗದಳ ಶೌರ್ಯ ಯಾತ್ರೆ( Shaurya Rath Yatra) ಹೆಸರಿನಲ್ಲಿ ಸಮಾವೇಶ ನಡೆಸಲಾಗಿತ್ತು, ಈ ವೇಳೆ ದ್ವೇಷ ಭಾಷಣ ಕಿಚ್ಚ ಹಚ್ಚಿತ್ತು. ಆದ್ರೆ, ಈ ಬಾರಿ ಯಾತ್ರೆಯನ್ನ ರಾಜ್ಯಾದ್ಯಂತ ಮಾಡಲು ಬಜರಂಗದಳ ಮುಂದಾಗಿದ್ದು, ಮುಂದಿನ ಲೋಕಸಭಾ ಚುನಾವಣೆ(Lok Sabha election) ಟಾರ್ಗೆಟ್ ಮಾಡಿ ರಥಯಾತ್ರೆ ಮಾಡಲಿದೆ ಎನ್ನಲಾಗ್ತಿದೆ. ಸೆಪ್ಟೆಂಬರ್‌ 25ರಿಮದ ರಥಯಾತ್ರೆ ಆರಂಭವಾಗಲಿದ್ದು ಅಕ್ಟೋಬರ್ 10 ರಂದು ಉಡುಪಿಯಲ್ಲಿ ಸುಮಾರು 25 ಸಾವಿರಕ್ಕೂ ಹೆಚ್ಚು ಜನರನ್ನ ಸೇರಿಸಿ ಶೌರ್ಯ ರಥಯಾತ್ರೆಯ ಸಮಾರೋಪ ನಡೆಸಲು ಪ್ಲಾನ್ ಮಾಡಿದ್ದಾರೆ. ಚಕ್ರವರ್ತಿ ಸೂಲಿಬೆಲೆ ಈ ಸಮಾವೇಶದಲ್ಲಿ ಹಿಂದೂ ಜಾಗೃತಿಯ ಬಗ್ಗೆ ಪ್ರಮುಖ ಭಾಷಣ ಕೂಡ ಮಾಡಲಿದ್ದಾರೆ. ಇನ್ನೂ ಯಾತ್ರೆಯುದ್ದಕ್ಕೂ ಸಾಕಷ್ಟು ಪ್ರಖರ ಭಾಷಣಗಳು ನಡೆಯಲಿದ್ದು, ಹೀಗಾಗಿ ಯಾತ್ರೆ ಕುತೂಹಲ ಹುಟ್ಟಿಸಿದೆ.

ಇದನ್ನೂ ವೀಕ್ಷಿಸಿ:  ಟಿಸಿ ನೀಡಲು ಟಾರ್ಚರ್..ಠಾಣೆ ಮೆಟ್ಟಿಲೇರಿದ ವಿದ್ಯಾರ್ಥಿ..!