Nov 26, 2021, 11:11 AM IST
ಕಲಬುರಗಿ(ನ.26): ಇಂದೂ ಕೂಡು ಎಂಜಿನೀಯರ್ ಶಾಂತಗೌಡ ಬಿರಾದರ್ ಬ್ಯಾಂಕ್ ಅಕೌಂಟ್ ಶೋಧಕಾರ್ಯ ನಡೆಯಲಿದೆ. ನಿನ್ನೆ(ಗುರುವಾರ) ಕೇವಲ ಮೂರು ಬ್ಯಾಂಕ್ ಖಾತೆಗಳ ಬಗ್ಗೆ ಎಸಿಬಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು. ಇವತ್ತು ಹಲವು ಬ್ಯಾಂಕ್ ಅಕೌಂಟ್‌ಗಳ ಶೋಧ ನಡೆಯಲಿದೆ ಎಂದು ತಿಳುದು ಬಂದಿದೆ. ಅಪ್ಪನ ಖಾತೆಗಿಂತ ಮಗನ ಖಾತೆಯಲ್ಲೇ ಹೆಚ್ಚು ಹಣ ಪತ್ತೆಯಾಗಿದೆ.
ACB Raid: ಭ್ರಷ್ಟರಿಗೆ ಮತ್ತೊಂದು ಶಾಕ್, ಎಸಿಬಿ ದಾಳಿ ಬಳಿಕ ಇ,ಡಿ ಎಂಟ್ರಿ!
ಶಾಂತಗೌಡ ಹಾಗೂ ಮಗನ ಹೆಸರಲ್ಲಿ ಬರೋಬ್ಬರಿ 16 ಖಾತೆಗಳು ಪತ್ತೆಯಾಗಿವೆ. ಬೆಂಗಳೂರು, ಕಲಬುರಗಿ ಸೇರಿ ಹಲವೆಡೆ ಬ್ಯಾಂಕ್ ಅಕೌಂಟ್‌ಗಳಿವೆ ಎಂಬ ಮಾಹಿತಿ ಲಭ್ಯವಾಗಿದೆ. ಶಾಂತಗೌಡ ಪುತ್ರನ ಬ್ಯಾಂಕ್ ಅಕೌಂಟ್‌ಗಳನ್ನೂ ಸಹ ಎಸಿಬಿ ಅಧಿಕಾರಿಗಳು ಶೋಧ ನಡೆಸಿದ್ದಾರೆ. ಶಾಂತಗೌಡ ಮನೆಯಲ್ಲಿ 54 ಲಕ್ಷ ರೂ. ಸೀಜ್ ಮಾಡಿ ಖಜಾನೆಗೆ ಒಪ್ಪಿಸಿದೆ ಎಸಿಬಿ ತಂಡ. ನಿನ್ನೆ ಮೂರು ಬ್ಯಾಂಕ್ ಖಾತೆಗಳಲ್ಲಿ 25 ಲಕ್ಷಕ್ಕೂ ಹೆಚ್ಚು ಹಣ ಪತ್ತೆಯಾಗಿದೆ.