ನಿಮ್ಮ ಪಕ್ಷಕ್ಕೆ ಧಮ್ ಇದ್ರೆ ಮುಸ್ಲಿಂ ನಾಯಕರನ್ನು ಸಿಎಂ ಮಾಡಿ: ಜಮೀರ್‌ಗೆ ಶರವಣ ಸವಾಲ್

Oct 18, 2021, 3:31 PM IST

ಬೆಂಗಳೂರು (ಅ. 18): ಎಚ್‌ಡಿಕೆ ಡೀಲ್ ರಾಜ ಎಂಬ ಜಮೀರ್ ಅಹ್ಮದ್ ಗೆ ಶರವಣ (TA Sharavana) ತಿರುಗೇಟು ನೀಡಿದ್ಧಾರೆ. 

ಪೊಲೀಸರಿಗೆ ತ್ರಿಶೂಲ ಕೊಡಿ, RSS ಗೆ ಸೇರಿಸಿಕೊಳ್ಳಿ: ಸಿದ್ದರಾಮಯ್ಯ

'ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ (Congress) ಹೋಗಿ ಸಿದ್ದರಾಮಯ್ಯ (Siddaramaiah) ಜೊತೆ ಗುರುತಿಸಿಕೊಂಡಿದ್ದೀರಲ್ಲ, ನಿಮಗೆ ಧಮ್ ಇದ್ರೆ ನಿಮ್ಮ ಸಮುದಾಯದವರಿಗೆ ಸಿಎಂ ಅಭ್ಯರ್ಥಿ ಘೋಷಣೆ ಮಾಡಿ ನೋಡೋಣ..? ಎಷ್ಟು ಜನರಿಗೆ ಟಿಕೆಟ್ ಕೊಟ್ಟಿದೀರಾ.? ಎಷ್ಟು ಜನರನ್ನು ಗೆಲ್ಲಿಸಿದಿರಾ.? ಗೊತ್ತಿದೆ ನಮಗೆ. ಕಲಾಸಿಪಾಳ್ಯದಲ್ಲಿ ಕಳೆದೋಗಿದ್ದ ನೀವು ವಿಧಾನಸೌಧಕ್ಕೆ ಹೋದಾಗ ಮಾರ್ಷಲ್‌ಗಳು ನಿಮ್ಮನ್ನು ತಡೆಯುತ್ತಾರೆ. ಅಂತಹ ಸಂದರ್ಭದಲ್ಲಿ ಕಣ್ಣೀರು ಹಾಕುತ್ತಾ ಕೂತಿದ್ದ ನಿಮ್ಮನ್ನು ಕುಮಾರಣ್ಣ ಸಮಾಧಾನ ಮಾಡುತ್ತಾರೆ. ನಿಮ್ಮನ್ನು ಶಾಸಕರನ್ನಾಗಿ ಮಾಡುತ್ತೇನೆ ಎಂದು ಭರವಸೆ ನೀಡಿದ್ದರು. ಅಂತಹ ನಾಯಕರ ಬಗ್ಗೆ ನೀವು ಲಘುವಾಗಿ ಮಾತಾಡ್ತೀರಲ್ಲಾ , ಯಾವ ನೈತಿಕತೆ ಇದೆ ನಿಮಗೆ.? ಎಂದು ಶರವಣ ಆಕ್ರೋಶ ವ್ಯಕ್ತಪಡಿಸಿದ್ಧಾರೆ.