ಬೆಂಗಳೂರಿಗೆ ಆಗಮಿಸಿದ ರಾಜಧಾನಿ ಎಕ್ಸ್‌ಪ್ರೆಸ್ ರೈಲು; 960 ಮಂದಿ ಕ್ವಾರಂಟೈನ್

May 14, 2020, 1:35 PM IST

ಬೆಂಗಳೂರು(ಮೇ.14): ಪರರಾಜ್ಯಗಳಲ್ಲಿ ಸಿಕ್ಕಿಹಾಕಿಕೊಂಡಿದ್ದ ಕನ್ನಡಿಗರು ರಾಜಧಾನಿ ಎಕ್ಸ್‌ಪ್ರೆಸ್ ಮೂಲಕ ಸಿಲಿಕಾನ್ ಸಿಟಿ ಬೆಂಗಳೂರು ತಲುಪಿದ್ದಾರೆ. ಇಂದು ಬೆಳಗ್ಗೆ 6.40ಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದಲ್ಲಿ ಬಂದಿಳಿದ್ದಾರೆ.

ಬೆಂಗಳೂರಿಗೆ ಬಂದಿಳಿದ 960 ಮಂದಿಯನ್ನು ಕ್ವಾರಂಟೈನ್ ಮಾಡಲು ಬಿಬಿಎಂಪಿ 10 ತಂಡಗಳನ್ನು ರಚಿಸಿದೆ. ವಿದೇಶದಿಂದ ಬಂದವರಿಗೆ ಮಾಡಿದ್ದಂತ ರೂಲ್ಸ್ ಹೊರ ರಾಜ್ಯಗಳಿಂದ ಬಂದವರಿಗೆ ಅನ್ವಯವಾಗಲಿದೆ.

ಮರದಡಿಯಲ್ಲಿ ಸೂಟ್‌ಕೇಸ್‌ ಪತ್ತೆ: ಜನರಲ್ಲಿ ಆತಂಕ

ಹೋಟೆಲ್, ಹಾಸ್ಟೆಲ್ ಹಾಗೂ ಕಲ್ಯಾಣ ಮಂಟಪಗಳಲ್ಲಿ ಕ್ವಾರಂಟೈನ್ ಮಾಡಲು ಬಿಬಿಎಂಪಿ ಈ ಮೊದಲೇ ತೀರ್ಮಾನಿಸಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.