PSI Scam: ಜ್ಯೋತಿ ಸ್ಕೂಲ್ ಪ್ರಿನ್ಸಿಪಾಲ್ ಕಾಶೀನಾಥ್ ಸಿಐಡಿ ಮುಂದೆ ಶರಣು

May 2, 2022, 1:29 PM IST

ಬೆಂಗಳೂರು (ಮೇ. 02): ಪಿಎಸ್‌ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ, ಜ್ಯೋತಿ ಸ್ಕೂಲ್ ಪ್ರಿನ್ಸಿಪಾಲ್ ಕಾಶೀನಾಥ್ ಸಿಐಡಿ ಮುಂದೆ ಶರಣಾಗಿದ್ದಾರೆ. 

ಸೆಮಿಕಾನ್ ಇಂಡಿಯಾ 2022: ರಾಜ್ಯದಲ್ಲಿ ಸ್ಥಾಪನೆಯಾಗಲಿದೆ ಸೆಮಿಕಂಡಕ್ಟರ್ ಘಟಕ

ದಿವ್ಯಾ ಹಾಗರಗಿ ಸಿಐಡಿ ತಂಡ ತೀವ್ರ ವಿಚಾರಣೆಗೊಳಪಡಿಸಿದೆ. ಶಾಲೆಯ ಮುಖ್ಯ ಶಿಕ್ಷಕ ಕಾಶೀನಾಥ್‌ ಅಕ್ರಮದ ಪ್ಲ್ಯಾನ್‌ ಹೆಣೆದಿರುವ ಬಗ್ಗೆ ತನಗೆ ಮೊದಲೇ ಮಾಹಿತಿ, ಜೊತೆಗೆ ದೊಡ್ಡ ಮೊತ್ತವನ್ನು ಸಂದಾಯ ಮಾಡಿದ್ದಾಗಿಯೂ ದಿವ್ಯಾ ಒಪ್ಪಿಕೊಂಡಿದ್ದಾಳೆ. ಅಫಜಲ್ಪುರದ ರುದ್ರಗೌಡ ಹಾಗೂ ನೀರಾವರಿ ಇಲಾಖೆ ಜೆಇ ಮಂಜುನಾಥ್‌, ಕಾಶೀನಾಥರನ್ನು ಮೊದಲೇ ಸಂಪರ್ಕಿಸಿದ್ದರು. ನಂತರ ಎಲ್ಲರೂ ಸೇರಿಕೊಂಡು ಹೇಗೆಲ್ಲಾ ಅಕ್ರಮದ ಯೋಜನೆ ಅನುಷ್ಠಾನಕ್ಕೆ ತರಬೇಕೆಂದು ಚರ್ಚಿಸಿದ್ದಾಗಿಯೂ ದಿವ್ಯಾ ಬಾಯಿ ಬಿಟ್ಟಿರುವ ಬಗ್ಗೆ ಮೂಲಗಳು ತಿಳಿಸಿವೆ.

ಆರ್‌.ಡಿ.ಪಾಟೀಲ್‌ ಹಾಗೂ ಮಂಜುನಾಥ್‌ ಇಬ್ಬರ ಕಡೆಯಿಂದಲೂ ಹಣ ಸಂದಾಯವಾಗುವಂತೆ ಶಾಲೆಯ ಹೆಡ್‌ಮಾಸ್ಟರ್‌ ಕಾಶೀನಾಥ್‌ ಮಾಡಿದ್ದ. ಹೀಗಾಗಿ ಈ ಹಗರಣದಲ್ಲಿ ಕಾಶೀನಾಥ್‌, ಆರ್‌.ಡಿ.ಪಾಟೀಲ್‌, ಮಂಜುನಾಥ್‌ ಹಾಗೂ ದಿವ್ಯಾ ನಡುವೆ ಮಧ್ಯವರ್ತಿಯಾಗಿ ಚಾಲಾಕಿತನದಿಂದ ಕೆಲಸ ಮಾಡಿದ್ದ ಅನುಮಾನ ಸಿಐಡಿಗೆ ಮೂಡಿದೆ.