Oct 25, 2021, 1:57 PM IST
ಬೆಂಗಳೂರು (ಅ. 25): ಶಿವರಾಮ ಕಾರಂತ ಬಡಾವಣೆ (Shivarama Karanth) ನಿವಾಸಿಗಳಿಗೆ ನೋಟೀಸ್ ನೀಡದೇ ಮನೆಗಳ ನೆಲಸಮ ಮಾಡಲು ಮುಂದಾಗಿರುವುದನ್ನು ಖಂಡಿಸಿ ದಾಸರಹಳ್ಳಿ ಕ್ಷೇತ್ರದ ಶಾಸಕ ಮಂಜುನಾಥ್ ನೇತೃತ್ವದಲ್ಲಿ ನಿವಾಸಿಗಳು ಪ್ರತಿಭಟನೆಗೆ ಮುಂದಾಗಿದ್ದಾರೆ. ಶಾಸಕ ಮಂಜುನಾಥ್ ರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸೂಟ್‌ಕೇಸ್ ಸಂಸ್ಕೃತಿ ಯಾರದ್ದು ಎಂದು ರಾಜ್ಯಕ್ಕೆ ಗೊತ್ತಿದೆ ರೀ: ಜಮೀರ್‌ಗೆ ರೇವಣ್ಣ ಟಾಂಗ್
ಸೋಮಶೆಟ್ಟಿಹಳ್ಳಿಯಲ್ಲಿರುವ ಶಿವರಾಮ ಕಾರಂತ ಬಡಾವಣೆ ಜಮೀನು ವಶಪಡಿಸಿಕೊಳ್ಳಲು ಸರ್ಕಾರ ಮುಂದಾಗಿದೆ. ಇಂದು ಏಕಾಏಕಿ ಮನೆಗಳ ತೆರವು ಮಾಡಿಸಲು ಅಧಿಕಾರಿಗಳು ಮುಂದಾಗಿದ್ದರು. ಸೂಕ್ತ ಪರಿಹಾರ ನೀಡದೇ ತೆರವು ಮಾಡಲ್ಲ ಎಂದು ನಿವಾಸಿಗಳ ಹಠ ಹಿಡಿದಿದ್ದಾರೆ. ಶಾಸಕ ಮಂಜುನಾಥ್ ಸೇರಿದಂತೆ ಸ್ಥಳೀಯರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.