May 25, 2020, 1:37 PM IST
ಬೆಂಗಳೂರು(ಮೇ 25): ಚೆನ್ನೈ, ದೆಹಲಿಯಿಂದ ಬರುತ್ತಿರುವ ಪ್ರಯಾಣಿಕರು ಹೋಂ ಕ್ವಾರೆಂಟೈನ್ ಬೇಕೆಂದು ಪಟ್ಟು ಹಿಡಿಯುತ್ತಿದ್ದಾರೆ. ಹೋಟೆಲ್ ಕ್ವಾರೆಂಟೈನ್ ವೆಚ್ಚ ಭರಿಸುವುದು ಸಾಧ್ಯವಿಲ್ಲ ಎಂದು ಪ್ರಯಾಣಿಕರು ಕಿರಿಕ್ ಮಾಡಿದ್ದಾರೆ.
ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಟರ್ಮಿನಲ್ ಬಿಟ್ಟು ಹೊರಗೆ ಬರಲು ತಕರಾರು ಮಾಡುತ್ತಿದ್ದಾರೆ. ಹೋಟೆಲ್ ಕ್ವಾರೆಂಟೈನ್ ಬೇಡ, ನಮ್ಮನ್ನು ಮನೆಗೆ ಕಳಿಸಿ ಎಂದು ಪಟ್ಟು ಹಿಡಿದಿದ್ದಾರೆ.
ದಿಲ್ಲಿಯಿಂದ ಬೆಂಗಳೂರಿಗೆ ಆಗಮಿಸಿದ ಸದಾನಂದ ಗೌಡರು ಕ್ವಾರಂಟೈನ್ ಆಗ್ತಾರಾ?
ಹಲವು ಭಾಗಗಳಿಂದ ಬಂದ ಜನರು ತಮಗೆ ಹೋಟೆಲ್ ಕ್ವಾರೆಂಟೈನ್ ಬೇಡ ಎಂದು ಹಟ ಮಾಡುತ್ತಿದ್ದಾರೆ. ಜನರ ಮೊಂಡುತನದಿಂದ ಅಧಿಕಾರಿಗಳು ಸಮಸ್ಯೆ ಎದುರಿಸುವಂತಾಗಿದೆ.