May 20, 2020, 12:19 PM IST
ಬೆಂಗಳೂರು(ಮೇ.20): ರಾಜ್ಯ ಸರ್ಕಾರ ನಿನ್ನೆಯಿಂದ(ಮಂಗಳವಾರ) ರಾಜ್ಯಾದ್ಯಂತ ಬಸ್ ಸಂಚಾರ ಆರಂಭಿಸಿದೆ. ಆರಂಭದ ದಿನವಾದ ನಿನ್ನೆ ಅಷ್ಟೊಂದು ಸಂಖ್ಯೆಯಲ್ಲಿ ಪ್ರಯಾಣಿಕರು ಕಂಡು ಬಂದಿರಲಿಲ್ಲ.ಆದರೆ, ಇಂದು ಎರಡನೇ ದಿನವಾದ ಇಂದು(ಬುಧವಾರ) ಹೆಚ್ಚಿನ ಸಂಖ್ಯೆಯಲ್ಲಿ ಜನರು ಮೆಜೆಸ್ಟಿಕ್‌ನತ್ತ ಆಗಮಿಸುತ್ತಿದ್ದಾರೆ.
KSRTC ಬಸ್‌ಗೆ ಮುಗಿಬಿದ್ದ ಪ್ರಯಾಣಿಕರು: ಮುಂಗಡ ಟಿಕೆಟ್ ಖರೀದಿಸಿದವರಿಗೆ ಮಾತ್ರ ಅವಕಾಶ..!
ಬಸ್ ನಿಲ್ದಾಣದಲ್ಲಿ ಸಾವಿರಾರು ಜನರು ಜಮಾಯಿಸಿದ್ದಾರೆ. ಲಾಕ್‌ಡೌನ್ ಘೋಷಣೆಯಾದಾಗಿನಿಂದ ತಮ್ಮ ಊರುಗಳಿಗೆ ತರಳಲು ಆಗದೆ ಅನಿವಾರ್ಯವಾಗಿ ಬೆಂಗಳೂರಿನಲ್ಲೇ ಉಳಿದುಕೊಂಡಿದ್ದ ಜನರು ಇಂದು ತಮ್ಮ ಊರಿನತ್ತ ಪ್ರಯಾಣ ಬೆಳೆಸಿದ್ದಾರೆ.