Aug 23, 2022, 1:52 PM IST
ಬೆಂಗಳೂರು (ಆ. 23): ದೇಶ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಕ್ಲಬ್ ಹೌಸ್‌ನಲ್ಲಿ ಒಂದು ಗ್ರೂಪ್ ಸೃಷ್ಟಿಸಿ, ಪಾಕಿಸ್ತಾನದ ಪರವಾಗಿ ಕಾರ್ಯಕ್ರಮ ಆಯೋಜಿಸಿದ್ದ ಯುವಕರನ್ನು ಬಂಧಿಸಿರುವ ಪೊಲೀಸರು, ಅವರ ವಿಚಾರಣೆಯನ್ನೂ ಆರಂಭಿಸಿದ್ದಾರೆ. ಗ್ರೂಪ್ ಸೃಷ್ಟಿ ಮಾಡಿದ್ದಲ್ಲದೆ, ಪಾಕ್ ರಾಷ್ಟ್ರಧ್ವಜವನ್ನು ತಮ್ಮ ಡಿಪಿಯಲ್ಲಿ ಹಾಕಿಕೊಂಡಿದ್ದರು. ಪಾಕ್ ಪರ ಘೋಷಣೆ ಹಾಗೂ ಪಾಕಿಸ್ತಾನದ ರಾಷ್ಟ್ರಗೀತೆಯನ್ನು ಪ್ಲೇ ಮಾಡಿದ್ದರು.
ಈ ಯುವಕರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿರುವ ಪೊಲೀಸರು, ಗ್ರೂಪ್‌ಅನ್ನು ಸೃಷ್ಟಿ ಮಾಡಿದ್ದ ಬಳ್ಳಾರಿ ಮೂಲದ ಸೌರಭ್‌ನನ್ನು ಬಂಧಿಸಿದ್ದಾರೆ. ಬೆಂಗಳೂರಿನ ಬೈಯಪ್ಪನಹಳ್ಳಿಯಲ್ಲಿ ವಾಸವಾಗಿದ್ದ ಸೌರಭ್ ಹಾಗೂ ಸಹಕಾರನಗರದ ನಿವಾಸಿ ರಾಹುಲ್‌ನನ್ನೂ ಬಂಧಿಸಿದ್ದಾರೆ. ಇಬ್ಬರನ್ನೂ ಕರೆಸಿ ಸಂಪಿಗೆಹಳ್ಳಿ ಪೊಲೀಸ್ ಠಾಣೆಯ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.
ಕ್ಲಬ್‌ಹೌಸ್‌ನಲ್ಲಿ ಪಾಕ್ ಪ್ರೇಮ: ಪ್ರಕರಣ ದಾಖಲಿಸಿ ಕಿಡಿಗೇಡಿಗಳ ಬೇಟೆಗೆ ಮುಂದಾದ ಪೊಲೀಸರು
ಉದ್ದೇಶಪೂರ್ವಕವಾಗಿ ತಾವು ಈ ಗ್ರೂಪ್ ಕ್ರಿಯೇಟ್ ಮಾಡಿಲ್ಲ. ಬೇರೆ ಗ್ರೂಪ್‌ನಲ್ಲಿ ಅವಮಾನ ಮಾಡಿದ್ದಕ್ಕೆ ಈ ರೀತಿಯ ಗ್ರೂಪ್ ಕ್ರಿಯೇಟ್ ಮಾಡಿದ್ದೆ. ಬೇರೆ ಗ್ರೂಪ್‌ಗೆ ಟಾಂಗ್ ಕೊಡುವ ಉದ್ದೇಶ ಮಾತ್ರವೇ ನಮ್ಮಲ್ಲಿತ್ತು ಎಂದಿದ್ದಾರೆ. ಅದಲ್ಲದೆ, ನಕಲಿ ಹೆಸರಲ್ಲಿ ಐಡಿ ಕ್ರಿಯೇಟಿವ್ ಮಾಡಿರುವ ಬಗ್ಗೆಯೂ ತನಿಖೆ ನಡೆಯುತ್ತಿದೆ.