ಕರ್ನಾಟಕದಲ್ಲೂ ಮುಂದುವರಿದ ಮರಣ ಮೃದಂಗ: ಟ್ರಾವೆಲ್ ಹಿಸ್ಟರಿಯೇ ಇಲ್ಲದ ವ್ಯಕ್ತಿ ಸಾವು
Apr 15, 2020, 3:23 PM IST
ಚಿಕ್ಕಬಳ್ಳಾಪುರ, (ಏ.15): ಮಾರಣಾಂತಿಕ ಕೋವಿಡ್ 19 ಮಹಾಮಾರಿ ಜಗತ್ತಿನಾದ್ಯಂತ ಮರಣ ಮೃದಂಗ ಮುಂದುವರಿಸಿದ್ದು, ಇದೀಗ ಕರ್ನಾಟಕದಲ್ಲೂ ಮರಣ ಮೃದಂಗ ಮುಂದುವರಿಸಿತೇ ಎನ್ನುವ ಪ್ರಶ್ನೆಗಳು ಕಾಡತೊಡಗಿವೆ.
ಮಂಗಳವಾರ ಅಷ್ಟೇ ಮೂರು ಸಾವನ್ನಪ್ಪಿರುವ ಬೆನ್ನಲ್ಲೇ ಇದೀಗ ಇಂದು (ಬುಧವಾರ) ರಾಜ್ಯದಲ್ಲಿ ಮತ್ತೊಂದು ಕೊರೋನಾಗೆ ಬಲಿಯಾಗಿದೆ. ಈ ಮೂಲಕ ದಿನದಿಂದ ದಿನಕ್ಕೆ ಸೋಂಕಿತರ ಜತೆ ಸಾವಿನ ಸಂಖ್ಯೆಯಲ್ಲೂ ಸಹ ಏರಿಕೆಯಾಗುತ್ತಿರುವುದು ಆತಂಕ ಮೂಡಿಸಿದೆ. ಅದರಲ್ಲೂ ಬುಧವಾರ ಮೃತಪಟ್ಟ ವ್ಯಕ್ತಿಯ ಟ್ರಾವೆಲ್ ಹಿಸ್ಟರಿಯೇ ಇಲ್ಲ.