ಟೈಗರ್ ಅಶೋಕ್ ಕುಮಾರ್, ಚಕ್ರವರ್ತಿ ಸೂಲಿಬೆಲೆ ಹೇಳುವುದು ಒಂದೇ ಮಾತು

Dec 24, 2019, 5:06 PM IST

ಮಂಗಳೂರು(ಡಿ. 24) ಮಂಗಳೂರು ಸಂಘರ್ಷದ ಬಗ್ಗೆ ನಿವೃತ್ತ ಪೊಲೀಸ್ ಅಧಿಕಾರಿ ಟೈಗರ್ ಆಶೋಕ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ರಾಜಕಾರಣಿಗಳು ಮುಠ್ಠಾಳರ ರೀತಿ ವರ್ತನೆ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. 1994 ರ ಬೆಂಗಳೂರು ಗಲಭೆ ಸಂದರ್ಭ 88 ಗುಂಡುಗಳನ್ನು ಹಾರಿಸಿದ್ದೇನೆ ಎಂದು ಅಶೋಕ್ ಕುಮಾರ್ ಅಂದಿನ ಘಟನೆ ನೆನಪು ಮಾಡಿಕೊಂಡರು.

ಗನ್ ಅಂಗಡಿ ಲೂಟಿ ತಡೆಯದೆ ಇದ್ದಿದ್ದರೆ

ಚಿಂತಕ ಚಕ್ರವರ್ತಿ ಸೂಲಿಬೆಲೆ ಸಹ ಘಟನೆಗಳ ಬಗ್ಗೆ ಪ್ರತಿಕ್ರಿಯೆ ನೀಡಿದ್ದು ಪೊಲೀಸರ ಕಾರ್ಯ ಶ್ಲಾಘನೀಯ ಎಂದು ಕೊಂಡಾಡಿದ್ದಾರೆ. ಇಡೀ ರಾಜ್ಯದಲ್ಲಿ ಬೆಂಕಿ ಹೊತ್ತಿಕೊಳ್ಳಲಿದೆ ಎಂದು ಯು.ಟಿ.ಖಾದರ್ ಹೇಳುತ್ತಾರೆ ಇದರ ಅರ್ಥ ಏನು? ಇಂಥ ಗಲಭೆಗೆ ಕಾರಣವಾಗುವವರಿಗೆ ಸಾಂತ್ವನ ಹೇಳುವರ ಬಗ್ಗೆ ಏನು ಹೇಳಬೇಕು ಗೊತ್ತಾಗುತ್ತಿಲ್ಲ ಎಂದು ಸೂಲಿಬೆಲೆ ಆತಂಕ ವ್ಯಕ್ತಪಡಿಸಿದ್ದಾರೆ.