May 18, 2020, 3:54 PM IST
ಬೆಂಗಳೂರು (ಮೇ. 18): ಕೊರೊನಾ ಸೋಂಕು ಹೆಚ್ಚಳಕ್ಕೆ ತಬ್ಲಿಘಿ, ಆಜ್ಮೇರ್ ನಂತರ ರಾಜ್ಯಕ್ಕೆ ಮಹಾರಾಷ್ಟ್ರದ ಆಘಾತ ಎದುರಾಗಿದೆ. ರಾಜ್ಯದಲ್ಲಿ ಭಾನುವಾರ ಹೊಸದಾಗಿ 70 ಜನರಿಗೆ ಸೋಂಕು ದೃಢಪಟ್ಟಿದೆ. ಈ ಪೈಕಿ ಬಹುಪಾಲು 40 ಮಂದಿ ಮಹಾರಾಷ್ಟ್ರದಿಂದ ವಾಪಸ್ಸಾದವರಾಗಿದ್ದಾರೆ.
ಕೊರೊನಾ ಸಾವಿಗೆ ಬೆಚ್ಚಿ ಬೀಳುತ್ತಿರುವ ರಾಷ್ಟ್ರ ರಾಜಧಾನಿ
ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 1162 ಕ್ಕೆ ಏರಿಕೆಯಾಗಿದೆ. ಜೊತೆಗೆ ಒಂದೇ ದಿನ 70 ಪ್ರಕರಣಗಳು ದಾಖಲಾಗಿರುವುದು ಇದೇ ಮೊದಲು. ಈ ವರೆಗೆ ಮೇ 15 ರಂದು 69 ಪ್ರಕರಣ ದಾಖಲಾಗಿದ್ದು ದಾಖಲೆಯಾಗಿತ್ತು.