ಕೆರಗೋಡು ಧ್ವಜ ಸಂಗ್ರಾಮ, ರಾಜಕೀಯದ ಆಟಕ್ಕೆ ಇಳಿದ್ರಾ ಶಾಸಕ ರವಿ ಗಾಣಿಗ!

Jan 31, 2024, 3:06 PM IST


ಬೆಂಗಳೂರು (ಜ.31): ಕೆರಗೋಡು ಹನುಮ ಧ್ವಜ ಗಲಾಟೆ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈ ವಿಚಾರದಲ್ಲಿ ತಪ್ಪು ಯಾರದ್ದು ಎನ್ನುವ ಚರ್ಚೆಯ ನಡುವೆ ಇಡೀ ಪ್ರಕರಣದಲ್ಲಿ ರವಿ ಗಾಣಿಗ ಅವರ ರಾಜಕೀಯದ ಆಟ ಇದ್ಯಾ ಎನ್ನುವ ಅನುಮಾನ ಕಾಡಿದೆ. ಧ್ವಜಕಟ್ಟೆ ಉದ್ಘಾಟನೆಗೆ ಆಹ್ವಾನಿಸದೇ ಇದ್ದ ಕಾರಣ ರವಿ ಗಾಣಿಗ ಅವರು ಈ ರೀತಿ ಮಾಡಿರುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಮಂಡ್ಯ ಕಾಂಗ್ರೆಸ್ ಶಾಸಕ ಗಣಿಗ ರವಿ ವಿರುದ್ಧ ಗ್ರಾಮಸ್ಥರು ಇದೇ ವಿಚಾರವಾಗಿ ಕಿಡಿಕಾರಿದ್ದಾರೆ. ಕುಮಾರಸ್ವಾಮಿ ಆಹ್ವಾನ ನೀಡಿದ್ದಕ್ಕೆ ಕೈ ಶಾಸಕರಿ ಸಿಟ್ಟಾಗಿದ್ದರು ಎನ್ನಲಾಗಿದೆ. ಇದರಿಂದಾಗಿ ಪ್ರಸ್ತುತ ಮಂಡ್ಯ ಶಾಸಕ ರವಿ ಗಣಿಗ ವರ್ಸಸ್ ಕೆರಗೋಡು ಗ್ರಾಮಸ್ಥರು ಎನ್ನುವ ಸ್ಥಿತಿ ನಿರ್ಮಾಣವಾಗಿದೆ.

Keragodu Hanuman Flag Riot Case: ಹೊರಗಿನಿಂದ ಜನರನ್ನು ಕರೆತಂದು ಜೆಡಿಎಸ್‌ನವರು ಗಲಾಟೆ ಮಾಡಿಸಿದ್ದಾರೆ: ಚಲುವರಾಯಸ್ವಾಮಿ

ಧ್ವಜಸ್ತಂಭ ನಿರ್ಮಾಣಕ್ಕೆ ಗ್ರಾಮಸ್ಥರು ಶಾಸಕರ ಬಳಿ ದೇಣಿಗೆ ಕೇಳಿದ್ದರು. ದೇಣಿಗೆ ಕೊಡುತ್ತೇನೆ ಎಂದು ಹೇಳಿ ಮನೆ ಬಳಿ ಹೋದರೂ ಸಿಕ್ಕಿರಲಿಲ್ಲ. ನಾವು ಯಾವ ರಾಜಕಾರಣಿಗಳನ್ನೂ ಉದ್ಘಾಟನೆಗೆ ಆಹ್ವಾನಿಸಿರಲಿಲ್ಲ. ಪಕ್ಕದ ಹಳ್ಳಿಯಲ್ಲಿ ದೇವಾಲಯ ಉದ್ಘಾಟನೆಗೆ ಎಚ್‌ಡಿಕೆ ಆಗಮಿಸಿದ್ದರು. ಈ ವೇಳೆ ಧ್ವಜಸ್ತಂಭದ ಬಳಿ ಬಂದು ಹೋಗುವಂತೆ ಯುವಕರು ಆಹ್ವಾನಿಸಿದ್ದರು. ಕುಮಾರಸ್ವಾಮಿ ಬರ್ತಾರೆ ಎಂದು ಯುವಕರು ಘೋಷಣೆ ಕೂಗಿದ್ದರು. ಆದರೆ ಅಂದು ಮಾಜಿ ಸಿಎಂ ಎಚ್ಡಿಕೆ ಧ್ವಜಸ್ತಂಭದ ಬಳಿ ಬರಲಿಲ್ಲ. ಇದೇ ಕಾರಣಕ್ಕಾಗಿ ಕಾಂಗ್ರೆಸ್‌ ನಾಯಕರು ಬೇಸರವಾಗಿರಬಹುದು.ಆಹ್ವಾನ ಕೊಟ್ಟಿಲ್ಲ ಎಂದು ಕಾಂಗ್ರೆಸ್ ಶಾಸಕರ ಮನಸ್ಸನಲ್ಲಿರಬಹುದು ಎಂದು ಕೆರಗೋಡು ಗ್ರಾಮಸ್ಥರು ಹೇಳಿದ್ದಾರೆ.