Jun 4, 2020, 2:56 PM IST
ಬೆಂಗಳೂರು(ಜೂ.04): ರಾಜ್ಯಸಭೆ ಟಿಕೆಟ್‌ಗೆ ರಾಜ್ಯ ಬಿಜೆಪಿಯಲ್ಲಿ ಭರ್ಜರಿ ಕಸರತ್ತು ನಡೆಯುತ್ತಿದೆ. ಹೌದು, ಹೇಗಾದರೂ ಮಾಡಿ ಟಿಕೆಟ್ ಪಡೆಯಲೇಬೇಕೆಂದು ಕತ್ತಿ ಸಹೋದರು ಲಾಬಿ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಈ ಸಂಬಂಧ ಮಾಜಿ ಸಚಿವ ಉಮೇಶ ಕತ್ತಿ ಅವರು ಇಂದು(ಗುರುವಾರ) ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಜೊತೆ ವಾಕಿಂಗ್ ಮಾಡಿದ್ದಾರೆ.
7 ದಿನಗಳ ಕ್ವಾರಂಟೈನ್ ಎಡವಟ್ಟು: ತಾಯಿ-ಮಗನಿಗೆ ಪಾಸಿಟಿವ್, ಆತಂಕದಲ್ಲಿ ರಾಗಿಗುಡ್ಡ ಸ್ಲಂ
ಉಮೇಶ್ ಕತ್ತಿ ಹಾಗೂ ಅವರ ಸಹೋದರ ರಮೇಶ ಕತ್ತಿ ಅವರು ಸಿಎಂ ಯಡಿಯೂರಪ್ಪ ಜೊತೆಗೆ ವಾಕ್ ಮಾಡಿ ರಾಜ್ಯಸಭೆ ಟಿಕೆಟ್ ಸಂಬಂಧ ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಒಟ್ಟು ನಾಲ್ಕು ಸ್ಥಾನಗಳಿಗೆ ರಾಜ್ಯಸಭೆ ಚುನಾವಣೆ ನಡೆಯಲಿದೆ.