7 ದಿನಗಳ ಕ್ವಾರಂಟೈನ್ ಎಡವಟ್ಟು: ತಾಯಿ-ಮಗನಿಗೆ ಪಾಸಿಟಿವ್, ಆತಂಕದಲ್ಲಿ ರಾಗಿಗುಡ್ಡ ಸ್ಲಂ
ದೆಹಲಿಯಿಂದ ತಾಯಿ-ಮಗನಿಗೆ ಕೊರೋನಾ ದೃಢ| ತಾಯಿ-ಮಗನಿಗೆ ಹೆಬ್ಬಾಳದ ಸಮೀಪ ಹಾಸ್ಟೆಲ್‌ನಲ್ಲಿ 7 ದಿನಗಳ ಕ್ವಾರಂಟೈನ್|ಕ್ವಾರಂಟೈನ್ ಬಳಿಕ ತಾಯಿ-ಮಗನ ಸ್ವ್ಯಾಬ್‌ಅನ್ನು ತೆಗೆದು ಪರೀಕ್ಷಾ ಕೇಂದ್ರಕ್ಕೆ ಕಳುಹಿಸಲಾಗಿತ್ತು|
ಬೆಂಗಳೂರು(ಜೂ.04): 7 ದಿನಗಳ ಕ್ವಾರಂಟೈನ್ ಬಳಿಕ ತಾಯಿ-ಮಗನಿಗೆ ಕೊರೋನಾ ಪಾಸಿಟಿವ್ ಬಂದ ಘಟನೆ ನಗರದ ರಾಗಿಗುಡ್ಡದ ಸ್ಲಂನಲ್ಲಿ ನಡೆದಿದೆ. ತಾಯಿ-ಮಗ ದೆಹಲಿಯಿಂದ ರೈಲಿನ ಮೂಲಕ ಬಂದಿದ್ದರು. ಇವರಿಗೆ ಹೆಬ್ಬಾಳದ ಸಮೀಪ ಹಾಸ್ಟೆಲ್‌ನಲ್ಲಿ 7 ದಿನಗಳ ಕ್ವಾರಂಟೈನ್ ಮಾಡಲಾಗಿತ್ತು. ಕ್ವಾರಂಟೈನ್ ಬಳಿಕ ತಾಯಿ-ಮಗನ ಸ್ವ್ಯಾಬ್‌ಅನ್ನು ತೆಗೆದು ಪರೀಕ್ಷಾ ಕೇಂದ್ರಕ್ಕೆ ಕಳುಹಿಸಲಾಗಿತ್ತು.
54 ಸಾವಿರ ರಿಪೋರ್ಟ್ ಬಾಕಿ; ರೈಲುಗಳ ಎಂಟ್ರಿ: ಕ್ವಾರಂಟೈನ್ ನಿಯಮ ಸಡಿಲಿಕೆ ಯಾಕೆ?
ಇದೀಗ ಈ ವರದಿ ಬಂದಿದ್ದು ತಾಯಿ-ಮಗನಿಗೆ ಕೊರೋನಾ ದೃಢಪಟ್ಟಿದೆ. ಆದರೆ, ವರದಿ ಬರುವ ಮುನ್ನವೇ ತಾಯಿ-ಮಗನನ್ನ ಮನೆಗೆ ಕಳುಹಿಸಿ ಅಧಿಕಾರಿಗಳು ಯಡವಟ್ಟು ಮಾಡಿಕೊಂಡಿದ್ದಾರೆ.