ಕರ್ನಾಟಕ ಬಂದ್: ಈ ಭಾಗಗಳಲ್ಲಿ ಬೆಂಬಲವಿಲ್ಲ, ಜನಜೀವನ ಸಹಜಸ್ಥಿತಿ

Sep 28, 2020, 3:00 PM IST

ಬೆಂಗಳೂರು (ಸೆ. 28): ಕರ್ನಾಟಕ ಬಂದ್ ಗೆ ರಾಜ್ಯದ್ಯಂತ ಭಾಗಶಃ ಬೆಂಬಲ ವ್ಯಕ್ತವಾಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಾತ್ರ ಪ್ರತಿಭಟನೆಯ ಕಿಚ್ಚು ಜೋರಾಗಿದೆ. ಬೇರೆ ಬೇರೆ ಜಿಲ್ಲೆಗಳಲ್ಲಿ ಭಾಗಶಃ ಬೆಂಬಲ ವ್ಯಕ್ತವಾಗಿದೆ. ಮಂಗಳೂರು, ಉಡುಪಿ, ಕಾರವಾರದಲ್ಲಿ ಬಂದ್‌ಗೆ ಬೆಂಬಲ ವ್ಯಕ್ತವಾಗಿಲ್ಲ. ಜನಜೀವನ ಸಹಜ ಸ್ಥಿತಿಯಲ್ಲಿದೆ. ಬಸ್‌ ಸಂಚಾರ ಯಥಾ ಸ್ಥಿತಿಯಲ್ಲಿದೆ. 

'ಎಪಿಎಂಸಿಯಲ್ಲೂ ಲೋಪಗಳಿವೆ, ರೈತರ ಉತ್ಪನ್ನ ಮರು ಹರಾಜಾಗಿರುವ ಇತಿಹಾಸವೇ ಇಲ್ಲ'

ಉಡುಪಿಯಲ್ಲಿ ರೈತಸಂಘಟನೆಗಳು, ಕರವೇ ಅಷ್ಟೊಂದು ಸಕ್ರಿಯವಾಗಿಲ್ಲ. ಹಾಗಾಗಿ ಬಂದ್‌ ತೀವ್ರತೆಯನ್ನು ಪಡೆದುಕೊಂಡಿಲ್ಲ. ಬಸ್‌ ಸಂಚಾರವನ್ನು ನಿಲ್ಲಿಸಬೇಕೆಂದು ಕೆಲವು ಪ್ರತಿಭಟನಾಕಾರರು ವಿನಂತಿಸಿಕೊಂಡರೂ ಅಂತಹ ಬೆಂಬಲವೇನೂ ವ್ಯಕ್ತವಾಗಿಲ್ಲ.