ಕ್ಯಾಬ್‌ ಚಾಲಕನಿಂದ ಪಾನಮತ್ತ ಯುವತಿ ಮೇಲೆ ಅತ್ಯಾಚಾರ, ಸೆಲ್ಫಿಯಲ್ಲಿ ಸಿಕ್ತು ಸಾಕ್ಷ್ಯ!

Sep 23, 2021, 11:06 AM IST

ಬೆಂಗಳೂರು (ಸೆ. 23): ಕಾರಿನಲ್ಲಿ ನಿದ್ರೆಗೆ ಜಾರಿದ್ದ ವೇಳೆ ಕ್ಯಾಬ್‌ ಚಾಲಕನೊಬ್ಬ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿ ಯುವತಿಯೊಬ್ಬಳು ದೂರು ನೀಡಿದ್ದು, ಚಾಲಕನನ್ನು ಜೆ.ಬಿ.ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅವಲಹಳ್ಳಿ ನಿವಾಸಿ ದೇವರಾಜುಲು (25) ಬಂಧಿತ ಆರೋಪಿ. ಜಾರ್ಖಂಡ್‌ ಮೂಲದ ಯುವತಿ ಕೊಟ್ಟದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ.

ಇನ್ಮುಂದೆ ಭಾನುವಾರ ವ್ಯಾಕ್ಸಿನ್ ಸಿಗಲ್ಲ, ಬೊಮ್ಮಾಯಿ ಔತಣಕೂಟದಿಂದ ಹೊರ ಉಳಿದ ಶೆಟ್ಟರ್! 

ನಾನು ಅತ್ಯಾಚಾರ ಎಸಗಿಲ್ಲ. ಯುವತಿ ನನ್ನ ಮೇಲೆ ಸುಳ್ಳು ದೂರು ದಾಖಲಿಸಿದ್ದಾಳೆ ಎಂದಿದ್ದ ಚಾಲಕ. ಆದರೆ ನಶೆಯಲ್ಲಿದ್ದ ಯುವತಿ ಜೊತೆ ಸೆಲ್ಫಿ ತೆಗೆದುಕೊಂಡಿರುವುದು ಪೊಲೀಸರಿಗೆ ಸಿಕ್ಕಿದೆ. ಇದು ಇಡೀ ಕೇಸ್‌ಗೆ ಟ್ವಿಸ್ಟ್ ನೀಡಿದೆ.