ಧಾರವಾಡದಲ್ಲಿ ಅಕ್ರಮ ಲೇಔಟ್‌ಗಳ ಭರಾಟೆ! ಶಾಸಕ ಹೆಸರಲ್ಲೇ ಅಕ್ರಮ ಲೇಔಟ್?

Oct 4, 2021, 9:59 AM IST

ಬೆಂಗಳೂರು (ಅ. 04): ಹುಬ್ಬಳ್ಳಿ, ಧಾರವಾಡದಲ್ಲಿ ನಿರ್ಮಾಣವಾಗುತ್ತಿರುವ ಅಕ್ರಮ ಲೇಔಟ್‌ಗಳ ಬಗ್ಗೆ ಶಾಸಕ ಅಮೃತ ದೇಸಾಯಿ ಅವರು ಇತ್ತೀಚೆಗೆ ವಿಧಾನಸಭೆಯಲ್ಲಿ ಮಾತನಾಡಿ ಗಮನ ಸೆಳೆದಿದ್ದರು.

ಆರ್‌ಆರ್ ನಗರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಸಿಎಂ ಚಾಲನೆ, ಮುನಿರತ್ನೆಗೆ ಶಹಭ್ಬಾಸ್‌ಗಿರಿ..!  

ಅಕ್ರಮ ಲೇಔಟ್‌ ಮಾಡುವವರು ರೌಡಿಶೀಟರ್‌ಗಳೇ ಆಗಿದ್ದಾರೆ. ಅಂತವರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಿ ಎಂದು ಹೇಳಿದ್ದರು. ಇದೀಗ ಅವರ ಹೆಸರಿನಲ್ಲೇ ಧಾರವಾಡ ತಾಲೂಕಿನ ಗರಗ ಗ್ರಾಮದಲ್ಲಿ ಅಕ್ರಮ ಲೇಔಟ್ ಇದೆ ಎಂಬ ಆರೋಪ ಕೇಳಿ ಬಂದಿದೆ.  ಶಾಸಕರ ಆಪ್ತನಾಗಿದ್ದ ಸಾಮಾಜಿಕ ಹೋರಾಟಾಗಾರ ಬಸವರಾಜ ಕೊರವರ ಗಂಭೀರ ಆರೋಪವನ್ನ ಮಾಡಿದ್ದಾರೆ. ಧಾರವಾಡದ ಮಟ್ಟಿ ಪ್ಲಾಟ್‌ನಲ್ಲಿ ನಿರ್ಮಿಸಲಾಗಿದ್ದ ಅಕ್ರಮ ಲೇಔಟ್‌ಗಳನ್ನು ಹುಡಾ ಅಧಿಕಾರಿಗಳು ತೆರವು ಮಾಡುತ್ತಿರುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಶಾಸಕ ಅಮೃತ ಅವರು ಉದ್ದೇಶಪೂರ್ವಕವಾಗಿಯೇ ಈ ಲೇಔಟ್ ತೆರವುಗೊಳಿಸುತ್ತಿದ್ದಾರೆ ಎಂಬ ಆರೋಪ ಮಾಡಿದ್ದಾರೆ.