Jan 10, 2021, 11:10 AM IST
ಧಾರವಾಡ (ಜ. 10): 2020 ರ ಮಹಾಮಳೆಗೆ ಅದೆಷ್ಟೋ ಜನರ ಬದುಕು ಬೀದಿಗೆ ಬಂದಿದೆ. ಮನೆ, ಜಮೀನು, ಬೆಳೆಗಳನ್ನು ಕಳೆದುಕೊಂಡು ಜನ ಕಂಗಾಲಾಗಿದ್ದಾರೆ. ಆಗ ಸರ್ಕಾರ ಅವರಿಗಾಗಿ ವಿಶೇಷ ಅನುದಾನವನ್ನು ಬಿಡುಗಡೆ ಮಾಡಿತ್ತು. ಆದರೆ ನಿಜವಾದ ಫಲಾನುಭವಿಗಳಿಗೆ ಮಾತ್ರ ಸಿಗದೇ ಕಂಡವರ ಪಾಲಾಗಿದೆ.
ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಮತ್ತೊಂದು ಗೋಲ್‌ಮಾಲ್ ಆರೋಪ..!
ಸೂರಿಲ್ಲದೆ ಹೇಗೋ ಜೀವನ ಸಾಗಿಸುತ್ತಿರುವ ಜನರಿಗೆ ಸರ್ಕಾರ ಮಾತ್ರ ಇಂದಿಗೂ ಸೂರಿನ ವ್ಯವಸ್ಥೆ ಮಾಡದಿರೋದು ಸದ್ಯ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಸಂತ್ರಸ್ಥರಿಗೆ ಮನೆಗಳನ್ನ ಹಂಚಲಿಕ್ಕೆ ಬಿಜೆಪಿ, ಕಾಂಗ್ರೆಸ್ ಎಂದು ತಾರತಮ್ಯ ನಡೆಯುತ್ತಿದೆ.ಇನ್ನು ಶಾಸಕ ಅಮೃತ ದೇಸಾಯಿನಾವರು ಸ್ವಂತ ಜಮೀನು ಮಾರಿ ಪರಿಹಾರವನ್ನ ಕೊಡುತ್ತೇವೆ ಎಂದಿದ್ದರು. ಈಗ ಈ ಕಡೆ ಪತ್ತೆಯೇ ಇಲ್ಲ ಸಚಿವರು. ಜಮೀನು ಮಾರುವ ಮಾತಿರಲಿ, ಸಿಗಬೇಕಾದ ಅನುದಾನವನ್ನಾದರೂ ಕೊಡಿ ಸ್ವಾಮಿ ಅಂತಿದ್ದಾರೆ ಜನರು.