Feb 5, 2022, 10:14 AM IST
ಬೆಂಗಳೂರು (ಫೆ. 05): 'ಹಲೋ ಮಿನಿಸ್ಟರ್' (Hello Minister) ಕಾರ್ಯಕ್ರಮದ ಫಲಶೃತಿ ಸಿಕ್ಕಿದೆ. 'ಹಲೋ ಮಿನಿಸ್ಟರ್'ನಲ್ಲಿ ಕೊಟ್ಟ ಮಾತನ್ನು ಇಂಧನ ಸಚಿವ ಸುನೀಲ್ ಕುಮಾರ್ ಉಳಿಸಿಕೊಂಡಿದ್ದಾರೆ.
ಹಲೋ ಮಿನಿಸ್ಟರ್‌ನಲ್ಲಿ ಸುನೀಲ್ ಕುಮಾರ್: ಪವರ್ ಸಮಸ್ಯೆಗಳಿಗೆ ಶೀಘ್ರವೇ ಮುಕ್ತಿ ಭರವಸೆ
ಹಲೋ ಮಿನಿಸ್ಟರ್ ಕಾರ್ಯಕ್ರಮದಲ್ಲಿ ಹಲವು ವರ್ಷಗಳಿಂದ ಇಂಧನ ಇಲಾಖೆಯಲ್ಲಿ ಒಡಂಬಡಿಕೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗಳು ತಮ್ಮ ಕೆಲಸವನ್ನು ಖಾಯಂಗೊಳಿಸುವಂತೆ ಸಚಿವರಿಗೆ ಮನವಿ ಮಾಡಿದ್ದರು. ಆದಷ್ಟು ಬೇಗ ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ ಎಂದು ಸುನೀಲ್ ಕುಮಾರ್ ಭರವಸೆ ನೀಡಿದ್ದರು. ಈ ಸಂಬಂಧ ನಿನ್ನೆ ಸಭೆ ನಡೆಸಿ, 15 ದಿನಗಳಲ್ಲಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ವರದಿ ಬಳಿಕ ಮುಂದಿನ ನಿರ್ಧಾರ ಎಂದಿದ್ದಾರೆ.